SKU: 13326

ಚೆಲುವಿ ಚಂದ್ರಿ

120.00

ಕಥಾ ಸಂಕಲನ

Author : ಡಾ. ಪ್ರಕಾಶ ಗ. ಖಾಡೆ

Publishers Name : ಯಾಜಿ ಪ್ರಕಾಶನ

Quantity
🚚

All India Shipping

Timely Arrival:
5–10 Days
To Your Doorstep

Razorpay Secure Payments

Secure Payments

UPI • Cards • Net Banking
100% Safe & Secure

📦

Free Shipping

On Orders Above
₹999

share This book

Book Description

ಡಾ.ಪ್ರಕಾಶ ಗ. ಖಾಡೆಯವರು ಕಥೆಗಳನ್ನು  ಕಟ್ಟಿ ಕೊಡುವ ಶೈಲಿ, ಅವರ ಚಿತ್ರಕ ಭಾಷೆ ನಿಜಕ್ಕೂ ಮುದ ನೀಡುವಂಥದು, ಉತ್ತರ ಕರ್ನಾಟಕದ ಭಾಷೆಯನ್ನು ದುಡಿಸಿಕೊಂಡ ರೀತಿಯೂ ಇವರ ಕಥೆಗಳಿಗೆ ಹೆಚ್ಚಿನ ಮೆರಗು ನೀಡಿದೆ. ಇಲ್ಲಿನ ಎಲ್ಲ ಕಥೆಗಳ ಪರಿಸರ ಹಳ್ಳಿಯ ಪರಿಸರವೇ. ಅಲ್ಲಿನ ಮೌಲಿಕ ಸುಂದರ ಬದುಕು, ಅದೂ ಆಧುನಿಕತೆಯಿಂದ ಆಗಾಗ ತಲ್ಲಣಗೊಳ್ಳುವ ಆತಂಕ, ಅಲ್ಲೊಂದು ಇಲ್ಲೊಂದು ಜೀವ ಕೊಲ್ಲುವ ಘಟನೆಗಳ ಜೊತೆಗೆ ಸೂಕ್ಷ್ಮವಾಗಿ ಹಳ್ಳಿ ಪರಿಸರದ ವಿವರಗಳನ್ನು ಕಟ್ಟಿಕೊಡುತ್ತಾರೆ. ಬಹುತೇಕ ನಮ್ಮ ತಲೆಮಾರಿನ ಎಲ್ಲ ಕತೆಗಾರರು ತಮ್ಮ ಮೂಲದ್ರವ್ಯವಾಗಿರುವ ಇಂತಹ ಹಳ್ಳಿಯ ಪರಿಸರವನ್ನೇ ನೆಚ್ಚಿರುವದು, ಅದಕ್ಕೆ ಡಾ.ಖಾಡೆಯವರು ಹೊರತಾಗದಿರುವದರ ಸಂಕೇತವಾಗಿ ಈ ಸಂಕಲನ ನಿಲ್ಲುತ್ತದೆ.

-ಡಾ.ವೈ.ಎಂ.ಯಾಕೊಳ್ಳಿ

ಡಾ. ಪ್ರಕಾಶ ಗ. ಖಾಡೆ ಅವರಿಗೆ ಕಥೆ ಕಟ್ಟುವ ಕಲೆ ದಕ್ಕಿದೆ. ಬಾಗಲಕೋಟೆ ನೆಲದ ಬನಿವುಳ್ಳ ಭಾಷೆಯ ಸೊಖಗನ್ನು ತಮ್ಮ ಕಥೆಗಳಲ್ಲಿ ಹಿಡಿದಿಡುವಲ್ಲಿ ಕಥೆಗಾರ ಗೆದ್ದಿದ್ದಾರೆ. ಇಲ್ಲಿನ ಬಹುತೇಕ ಕಥೆಗಳು ಸಾಮಾಜಿಕ ಅಂತಃಕರಣದ ಬದುಕಿಗೆ ಮಿಡಿಯುವ, ಮನುಷ್ಯ ಸ್ವಭಾವದ ಎಲ್ಲೆಗಳನ್ನು ಸ್ಪರ್ಶಿಸುವ ಗುಣ ಹೊಂದಿವೆ. ಕಥೆಗಳ ಹಲವು, ಭಾಷೆಯ ಸೊಗಡು, ಸಶಕ್ತ ನಿರೂಪಣಾ ಶೈಲಿಯಿಂದ ‘ಚೆಲುವಿ ಚಂದ್ರಿ’ ಸಂಕಲನದ ಕಥೆಗಳು ಓದುಗರಿಗೆ ತುಂಬಾ ಆಪ್ತವಾಗುತ್ತವೆ.

-ತಿರುಪತಿ ಭಂಗಿ

Rating This Book

Reviews

There are no reviews yet.

Be the first to review “ಚೆಲುವಿ ಚಂದ್ರಿ”

Your email address will not be published. Required fields are marked *

Top Books