You are currently viewing ಉರಿದು ಬೀಳುವ ನಕ್ಷತ್ರ

ಉರಿದು ಬೀಳುವ ನಕ್ಷತ್ರ

ಮನುಷ್ಯ ಪ್ರೀತಿಯನ್ನ
ಹಂಚಲು ಹೊರಟಿರುವ ಫಕೀರ ನಾನು
ನಿಮ್ಮ ದ್ವೇಷದ ಅಸ್ತ್ರಗಳು
ಎಷ್ಟೇ ಹರಿತವಾಗಿದ್ದರೂ..
ನನ್ನ ಎದೆಗೆ ನಾಟುವುದಿಲ್ಲ; ವ್ಯರ್ಥ ಪ್ರಯತ್ನ ಮಾಡಬೇಡಿ.

ಬೊಗಸೆಯಷ್ಟು ಇರುವ ಈ ಬದುಕಲ್ಲಿ
ನೀವು ನನ್ನನ್ನು ದ್ವೇಷಿಸಲು
ಕಾರಣಗಳನ್ನು ಹುಡುಕುತ್ತೀರುತ್ತೀರಿ
ನಾನು ಮಾತ್ರ ಪ್ರೀತಿಸುವ
ಅವಕಾಶವನ್ನ ಹುಡುಕುತ್ತೇನೆ.

ಅಚಾನಕ್ಕಾಗಿ ಎಂದಾದರೂ
ಎದುರುಗೊಂಡರೆ ನನ್ನ ಮೇಲಿನ
ದ್ವೇಷಕ್ಕೆ ನೀವು ಹಲ್ಲು ಕಡೆಯಬಹುದು
ನಾನು ಮಾತ್ರ ಎಲ್ಲವನ್ನೂ ಮರೆತು
ಮಾತಿಗಿಳಿಯುತ್ತೇನೆ; ನಕ್ಕು ಮುಂದೆ ನಡೆಯುತ್ತೇನೆ.

ನೀವು ನಿರುಪಯುಕ್ತವಾಗ
ದ್ವೇಷವನ್ನು ತಲೆಯಲ್ಲಿ ಹೊತ್ತು
ತಿರುಗಿದರೆ ದ್ವೇಷದ ಧಗೆಯಲ್ಲಿ ಬೆಂದು
ಆಪ್ತವಾದ ನಿಮ್ಮ ಸಂಬಂಧಗಳನ್ನು
ನೀವೇ ಕಳೆದುಕೊಳ್ಳುತ್ತೀರಿ

ಇಲ್ಲವೆ.. ಉರಿದು ಬೀಳುವ ನಕ್ಷತ್ರಗಳಂತೆ
ನಿಮ್ಮ ವ್ಯಕ್ತಿತ್ವವನ್ನ ಸುಟ್ಟುಕೊಂಡು
ಕಣ್ಮರೆಯಾಗುತ್ತೀರಿ ನಾನು ಮಾತ್ರ ಬದುಕಿನುದ್ದಕ್ಕೂ
ಮನುಷ್ಯ ಪ್ರೀತಿಯನ್ನೇ ಹಂಚುತ್ತೇನೆ;
ದ್ವೇಷಿಸುವರನ್ನು ಸಹ ಪ್ರೀತಿಸುತ್ತೇನೆ.

ಹುಸೇನಸಾಬ ವಣಗೇರಿ
ಸಂಶೋಧನಾ ವಿದ್ಯಾರ್ಥಿ
ಕ. ವಿ. ವಿ ಧಾರವಾಡ
7829606194.


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.