ಹೊಸ ವರ್ಷ ಅನ್ನದಾತರಿಗೆಲ್ಲ ಹರುಷ ತರಲಿರುವ ಸಂಕ್ರಾಂತಿ
ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡುವ ಸಂಕ್ರಾಂತಿ
ಇಂದಿನ ಸುಖ ಮುಂದಿನ ಕನಸುಗಳಿಗೆ ನಾಂದಿ ಆದಿತೇ
ದನ ಕರುಗಳನ್ನೆಲ್ಲ ಮೈ ತೊಳೆದು ಕಿಚ್ಚು ಹಾಯಿಸುವ ಸಂಕ್ರಾಂತಿ
ವರ್ಷವೆಲ್ಲ ದುಡಿದು ದಣಿದ ಮುಖಪ್ರಾಣಿಗಳಿಗೂ ಸಂತಸ
ರೈತರೆಲ್ಲ ಸುಗ್ಗಿ ಮಾಡಿ ಹುಗ್ಗಿ ಉಂಡು ಹಿಗ್ಗಿ ನಲಿಯುವ ಸಂಕ್ರಾಂತಿ
ಜಾನುವಾರುಗಳಿಗೆ ರಂಗು ರಂಗಿನ ಬಣ್ಣ ಬಳಿದು ಖುಷಿ ಪಡುವರು
ರವಿ ದಕ್ಷಿಣದಿಂದ ಉತ್ತರಕ್ಕೆ ಪಥ ಬದಲಿಸುವ ಸಂಕ್ರಾಂತಿ
ಹಬ್ಬದ ಸವಿ ಸವಿದ ಕಂಸ ಕೃಷಿಯ ಮಹತ್ವ ತಿಳಿದವನು
ಭೂಮಿತಾಯಿಗೆ ಶಿರಬಾಗಿ ನಮಿಸಿ ಪೂಜಿಸುವ ಸಂಕ್ರಾಂತಿ
ಕಂಸ
ಕಂಚುಗಾರನಹಳ್ಳಿ ಸತೀಶ್
ತಾ||ನರಗುಂದ ಜಿ||ಗದಗ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.