You are currently viewing ಅಕ್ಷರದವ್ವ ಸಾವಿತ್ರಿ ಬಾಯಿಪುಲೆ

ಅಕ್ಷರದವ್ವ ಸಾವಿತ್ರಿ ಬಾಯಿಪುಲೆ

ನಾರಿ ಆಗಿದ್ದಳು ಆದಿಕಾಲದಲ್ಲಿ ಅಭಲೆ
ಆಧುನಿಕ ಕಾಲಕ್ಕವಳು ಆಗಿರುವವಳು ಸಭಲೆ
ನಮ್ಮ ಅಕ್ಷರದವ್ವ ಸಾವಿತ್ರಿಬಾಯಿ ಬಾಪುಲೆ
ಸಬಲೀಕರಣಕ್ಕಾಗಿ ಶ್ರಮಪಟ್ಟ ಹೆಣ್ಣು ಭಲೇ ಭಲೆ

ಆಕೆಯ ಕೊರಳಿಗಿತ್ತು ಬಾಲ್ಯ ವಿವಾಹದ ಸಂಕೋಲೆ
ಪತಿಯ ಜೊತೆಗೆ ಶಾಲೆ ಕಲಿತ ಮೊದಲ ಬಾಲೆ
ಆಗ ವಿದ್ಯೆ ಕಲಿತವರಿಗೆ ಇರುತ್ತಿರಲಿಲ್ಲ ಬೆಲೆ
ಅಕ್ಷರದ ಜ್ಞಾನವ ಅರಿತಿದ್ದ ಪತಿ ಜ್ಯೋತಿ ಬಾಪುಲೆ

ಅನಕ್ಷರತೆ ತೊಲಗಿಸಲು ಪಣತೊಟ್ಟಳು ನಾರಿ
ಕಲ್ಲು ಸಗಣಿ ಬೀಸುತ್ತಿದ್ದರು ಮೈಮೇಲೆ ತೂರಿ
ಶಾಲೆಗೆ ಹೋದಮೇಲೆ ಉಡುತಿದ್ದಳು ಬೇರೆಯ ಸೀರೆ
ಅವಮಾನಿಸಿದರು ಬಿಡಲಿಲ್ಲಾಕೆ ತಾನು ಹಿಡಿದ ದಾರಿ

ಕೀಳು ಕುಲದ ಅಬಲೆಯರಿಗೆ ಆಕೆಯೇ ಸಹೋದರಿ
ಹೆಣ್ಣಿನ ಸಾಕ್ಷರ ಕುಲಕ್ಕೆ ಅವಳಾದಳು ಮಾದರಿ
ಅಂದು ವಿದ್ಯೆ ಕಲಿಯಲು ಆದಳಾಕೆ ರಾಯಭಾರಿ
ಮುಂದೆ ಮೊಳಗಿತು ವಿಜಯದ ಜಯಭೇರಿ

ಒಂದೇ ಸಲಕ್ಕೆ ಗೆದ್ದರೆ ತೋರುವರು ಮಂದಹಾಸ
ಸೋತು ಗೆದ್ದರೆ ಸೃಷ್ಟಿಸುವುದು ಇತಿಹಾಸ
ಮೊದಲು ಮಾಡಿದರು ಆಕೆಗೆ ಅವಮಾನ
ಮುಂದೆ ಸಾಲು ಸಾಲು ಸರಣಿ ಸನ್ಮಾನ

ಶಿವಲೀಲಾ ಧನ್ನಾ
ಜಿಲ್ಲಾ : ಕಲ್ಬುರ್ಗಿ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.