ಕಾರ್ಮೋಡ ಕವಿದ ಎದೆಯಲ್ಲಿ ಕಾಮನಬಿಲ್ಲು
ಮೂಡಿಸುವೆಯಾ ಇನಿಯಾ ವಿರಹದ
ಕಂಬನಿಯ ಒರೆಸಿ ನಗುವಿನಬಂಧ
ತೊಡಿಸುವೆಯಾ ಇನಿಯಾ
ಮಂದಹಾಸ ಮರೆಯಾಗಿ ಕನಸುಗಳೆಲ್ಲ
ಮೂದಲಿಸಿ ಗಹಗಹಿಸುತ್ತಿದೆಯೇಕೆ
ಮುದಡಿದ ಹೃದಯಕ್ಕೆ ಮತ್ತೆ ಹೂರಣವ
ಬಡಿಸುವೆಯಾ ಇನಿಯ
ಕಣ್ಣಕಾಡಿಗೆ ಕಣ್ತುಂಬ ನೋಡಿ
ಕಿಚಾಯಿಸುತ್ತಿದ್ದ ಆ ಸವಿಗಳಿಗೆ
ಇಂದದೇಕೋ ಆ ಕಣ್ಣೋಟ ಕೋಪದಲಿ
ಕೂಡಿಸುವೆಯಾ ಇನಿಯ
ಭಾರವಾದ ಹೆಜ್ಜೆಗಳು ಭರವಸೆಗೆ
ಬೆಂಕಿ ಹಚ್ಚಿ ಕುಣಿಯುತ್ತಿವೆ ಇಂದು
ಸೋತ ಜೀವಕ್ಕೆ ಸಾಂತ್ವಾನದ ಔಷಧಿಯ
ಕುಡಿಸುವೆಯಾ ಇನಿಯ
ಕಂಡಿ ಬಿದ್ದ ದೋಣಿಯಲ್ಲಿ
ದೂರತೀರ ಸೇರಬಹುದು ‘ಸಾತ್ವಿಕ’
ಆಸೆಗಳ ಸವಾರಿಯ ಸೆಳತಕ್ಕೆ
ಸಿಲುಕದಂತೆ ಬಿಡಿಸುವೆಯಾ ಇನಿಯ…
ಸೋಮಶೇಖರ ಎನ್ ಬಾರ್ಕಿ
ರಾಜ್ಯಶಾಸ್ತ್ರ ಉಪನ್ಯಾಸಕರು
ಆದರ್ಶ ಸಂಯುಕ್ತ ಪದವಿ ಪೂರ್ವ
ಕಾಲೇಜು ಬೇವೂರ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.