You are currently viewing ಚಂದನವನದ ನಂದಾದೀಪ ನಂದಿತು ಇಂದು

ಚಂದನವನದ ನಂದಾದೀಪ ನಂದಿತು ಇಂದು

ಕನ್ನಡ ಚಿತ್ರರಂಗದ ಹಿರಿಯ ಮೇರುನಟಿ ಏಕಾದಶಿಯ ದಿನ 8|12|23| ಲೀಲಾವತಿಯವರು ನಿಧನರಾದರು ಅವರ ಆತ್ಮಕ್ಕೆ ಶಾಂತಿ ಕೋರುತ ನಟಿ ಲೀಲಾವತಿಯವರಿಗೆ ಕವನದ ಮೂಲಕ ಭಾವ ಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತಿರುವೆ. 🙏😪
ಜನನ-1937- ಮರಣ- 2023 ⚜😪🙏

ಲೀಲಾವತಿ ಕನ್ನಡ ಚಿತ್ರರಂಗದ ಮೇರುನಟಿಯಿವರು
ದಕ್ಷಿಣ ಕನ್ನಡ ಬೆಳ್ತಂಗಡಿ ಜಿಲ್ಲೆಯಲ್ಲಿ ಜನಿಸಿದವರು
ನಟ ವಿನೋದರಾಜ್ ಕುಮಾರನ ಹೆತ್ತಮ್ಮನಿವರು
ದಕ್ಷಿಣ ಭಾರತದ ಜನಪ್ರಿಯ ನಾಯಕಿ ನಟಿಯಿವರು

ನಾಟಕ ರಂಗಭೂಮಿ ಕಲಾವಿದೆ ಕಲಾಸರಸ್ವತಿಯಿವರು
ನಟಿ ನಿರ್ಮಾಪಕಿ ಬರಹಗಾರ್ತಿಯೆಂದು ಹೆಸರಾದವರು
ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವರು
ಮನೋಜ್ಞ ಅಭಿನಯ ಚತುರೆ ಖ್ಯಾತ ಅಭಿನೇತ್ರಿಯಿವರು

ಅಮ್ಮ ಅಕ್ಕ ಅತ್ತೆ ಪೋಷಕ ಪಾತ್ರಗಳಲ್ಲಿ ನಟಿಸಿದವರು
ಮೇರುನಟ ರಾಜಕುಮಾರ್ ಅವರೊಡನೆ ಹಲವಾರು
ಚಿತ್ರಗಳಲ್ಲಿಯಿವರು ನಾಯಕಿಯಾಗಿ ನಟಿಸಿರುವರು
ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗೆ ಭಾಜನರಾದವರು

ತುಮಕೂರು ವಿಶ್ವ.ವಿ.ದಿಂದ ಗೌರವ ಡಾ.ಪಡೆದವರು
ಅಪಾರವಾದ ಅಭಿಮಾನಿಗಳನ್ನು ಸಂಪಾದಿಸಿದವರು
ಪಶುಗಳಿಗಾಗಿ ಪಶು ಆಸ್ಪತ್ರೆಯನ್ನು ನಿರ್ಮಿಸಿದವರು
ಹತ್ತೂರಿನ ಹಳ್ಳಿಗರಿಗೆ ಸಹಾಯ ಹಸ್ತವ ಚಾಚಿದವರು

ಸಮಾಜ ಸುಧಾರಕಿಯಾಗಿ ಕೈಲಾದ ಸೇವೆಗೈದವರು
ಅನಾರೋಗ್ಯದಿಂದ ಬಳಲುತ್ತ ಹಾಸಿಗೆ ಹಿಡಿದರು
ಏಕಾದಶಿಯಂದು ದೇವರ ಪಾದವನ್ನು ಸೇರಿದರು
ಮರಳಿ ಬಾರದ ಊರಿಗೆ ಪಯಣ ಬೆಳೆಸಿದವರು

🙏ಓಂ ಶಾಂತಿ ಅಗಲಿದ ನಮ್ಮೆಲ್ಲರ ಹಿರಿಯ ನಟಿ
ಲೀಲಾವತಿಯವರ ಆತ್ಮಕ್ಕೆ ಶಾಂತಿ ಸಿಗಲೆಂದು ಅವರ ಕುಟುಂಬದವರಿಗೆ ಆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವ ಮೂಲಕ ಅಂತಿಮ ನಮನ ಸಲ್ಲಿಸುವ ನಾವೆಲ್ಲರಿಂದು 🙏😪

ಧನ್ಯವಾದ

ಪೂರ್ಣಿಮಾ ರಾಜೇಶ್
ಬೆಂಗಳೂರು


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.