ಸ್ವಾತಂತ್ರ್ಯ ಹೋರಾಟದ ಅಗ್ರಗಣ್ಯರು
ರಾಷ್ಟ್ರಪಿತ ಎಂದು ಕರೆಸಿಕೊಂಡರು
ನಮ್ಮೆಲ್ಲರ ಪ್ರೀತಿಯ ಗಾಂಧಿ ತಾತ ಇವರು
ಕಾಯ ಅಳಿದರೂ ಕಾರ್ಯದಿಂದ ಅಜರಾಮರರು
ರಾಮ ರಾಜ್ಯದ ಕನಸು ಕಂಡವರು
ಸ್ವಾತಂತ್ರ್ಯಕ್ಕಾಗಿ ಉಪವಾಸ ಸತ್ಯಾಗ್ರಹ
ಮಾಡಿದವರು ದಾಸ್ಯವಿಮೋಚನೆಗೆ ಸೆರೆವಾಸ
ಅನುಭವಿಸಿದವರು ದೇಶದ ಹಿತಕ್ಕೆ ದುಡಿದು ಮಡಿದವರು
ಮಹಾತ್ಮ ಗಾಂಧಿಯ ಸತ್ಯಾನ್ವೇಷಣೆ ನಮಗೆ ಮಾದರಿ
ಅಹಿಂಸಾ ತತ್ವವ ಪ್ರತಿಪಾದಿಸಿದ ರೂವಾರಿ
ಇವರ ಆದರ್ಶ ಮೌಲ್ಯಗಳೇ ನಮಗೆ ಸ್ಪೂರ್ತಿ
ನಾಡಿಗೆ ಹೆಮ್ಮೆ ತಂದು ಹೆಚ್ಚಿಸಿದರು ಕೀರ್ತಿ
ಉಷಾ ಪ್ರಶಾಂತ್
ಸಿದ್ದಾಪುರ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.