You are currently viewing ಉಸಿರ ಗಂಧ ಸೋಕುವ ಪ್ಯಾರಿ ಪದ್ಯ

ಉಸಿರ ಗಂಧ ಸೋಕುವ ಪ್ಯಾರಿ ಪದ್ಯ

ಪ್ಯಾರಿ ಪದ್ಯ
ಸಖಿ ಚೆಲ್ಲಿದ ಕಾವ್ಯ ಗಂಧ
ಲೇಖಕರು: ಎ ಎಸ್. ಮಕಾನದಾರ

ನಿರಂತರ ಪ್ರಕಾ ಶನ
ಎಂ ಆರ್ ಅತ್ತಾರ ಬಿಲ್ಡಿಂಗ್ ಅಮರೇಶ್ವರ್ ನಗರ 5ನೇ ಕ್ರಾಸ್ ಗದಗ 582103
ಮೊಬೈಲ್ ನಂ: 9916480291
ಬೆಲೆ 150/ರೂ

ಇದೊಂದು ಅರಳಿದ ಹೂವಿನ ಪಕಳೆಗಳಂತಿರುವ ಭಾವಬಿಂದುಗಳ ಗುಚ್ಛ.
ತೀವ್ರವಾಗಿ ಕಾಡಿದ ವ್ಯಕ್ತಿ ವಸ್ತು-ವಿಷಯಗಳ ಕುರಿತು ಮನಸ್ಸಿನೊಂದಿಗೆ ನಡೆದ ಮುಖಾಮುಖಿ. ಮಕಾನದಾರ, ತನ್ನ ಕನಸ ಮಕಾನಿನ ಕಿಟಕಿಯಿಂದ ಇಣುಕಿ,
ಪಿಸುಗುಡುವ ಭಾವದ ಜ್ವಾಲಾಮುಖಿ.
“ಸಾಕಿ”ಯ ಕಣ್ಣ ಬೆಳಕಿಗೆ ಪತಂಗವಾಗುವ ಮಕಾನದಾರನಿಗೆ ಪ್ರೀತಿ- ವಿರಹ, ಬದುಕಿನ ನಾಣ್ಯದ ಎರಡು ಮುಖಗಳು.
ಕೆಲವೇ ಸಾಲುಗಳಲ್ಲಿ ಕ್ಷಣಿಕವಾಗಿ ಬಂದು ಹೋಗುವ ಭಾವತೀವ್ರತೆಯನ್ನು ಪದಗಳಲ್ಲಿ ಕಡೆದಿಟ್ಟಿದ್ದಾರೆ.
ಪ್ಯಾರ್- ಪ್ರೀತಿಯ ಮೋಹಕ ಮಾಯಾಜಾಲದಲ್ಲಿ ಕಳೆದು ಹೋಗುವುದಕ್ಕೆ ಪ್ಯಾರಿ ಪದ್ಯದ ಸಹಾರ ಜರೂರಿ.
ರಸ್ತೆಯಲ್ಲಿ ಓಡಾಡುತ್ತಿರುವ ಪರಿಚಿತ-ಅಪರಿಚಿತ ಬದುಕನ್ನು ಬೆರಗಿನಿಂದ ನೋಡುವ ಪರಿಯೇ ಇಲ್ಲಿ ಚುಟುಕುಗಳಾಗಿವೆ.
ಉರ್ದು ಸಾಹಿತ್ಯದ ಧಾಟಿ ಮತ್ತು ಪದಗಳ ಬಳಕೆ ಕೆಲವೊಮ್ಮೆ ಆಪ್ಯಾಯಮಾನವಾದರೆ, ಕೆಲವು ಕಡೆ ಅವು ಹೇಳಬೇಕಾದ್ದನ್ನು ತಲುಪಿಸಲಾಗದೇ ಸೋತಿವೆ.
“ಸುಟ್ಟು ಕರಕಲಾದ ಹೃದಯದ ಬೂದಿ
ನಿನ್ನ ಕಣ್ಣ ಕಾಡಿಗೆ”
ಎಂಬಂತಹ ಸೊಗಸಾದ ಸಾಲುಗಳು, ಮಕಾಂದಾರ್ ಅವರ ಕವಿಹೃದಯದ ಮೊರೆತವನ್ನು ಸಶಕ್ತವಾಗಿ ತಲುಪಿಸುತ್ತದೆ.
ಮನುಜನಿಗೆ ನೀತಿ ಪಾಠ ಕಲಿಸುವ ಜಾಗದಲ್ಲಿರುವ ಕವಿಯು, ಪ್ರೀತಿಯ ವಿಷಯ ಬಂದಾಗ ಬೇರೆಯೇ ರೀತಿ ಕಾಣುತ್ತಾನೆ.
ಒಲೆಯಲ್ಲಿ ಸುಟ್ಟು, ಬೆಂಕಿಯಲ್ಲಿ ಬೇಯಿಸಿ, ಬಿಸಿಲಲ್ಲಿ ಬೆಂದು,
ಸುಟ್ಟು ಬೂದಿಯಾದರೂ, ಪ್ರೇಯಸಿಯ ಕನವರಿಕೆ ಬಿಡಲಾರೆ… ಎನ್ನುವ ಹುಚ್ಚು ಪ್ರೇಮಿಯ
ಹಲುಬುವಿಕೆ, ಪ್ರತಿ ಪುಟದಲ್ಲೂ ಪ್ಯಾರಿ ಪದ್ಯವಾಗಿ ಕಾಡುತ್ತದೆ…
“ಅಕ್ಕಡಿ ಸಾಲು” ಸಂಕಲನದ ಮೂಲಕ ತಾನೊಬ್ಬ ಸಶಕ್ತ ಕವಿ ಎಂಬುದನ್ನು ಆಗಲೇ ಸಾಬೀತು ಮಾಡಿರುವ ಮಕಾನದಾರರಿಗೆ ಯಾವುದೇ ಶಿಫಾರಸ್ಸಿನ ಹಂಗು ಬೇಡ.
ಅವರ ಕವಿತೆಗಳ ಬೆಳಕಿನ ಮೆರವಣಿಗೆಯ ದಿಬ್ಬಣ, ಹೀಗೆ ಕಾವ್ಯ ರಸಿಕರ ಮುಂದೆ ಸಾಗುತ್ತಲೇ ಇರಲಿ…
ನಮ್ಮಂತ ಕಾವ್ಯ ಪ್ರೇಮಿಗಳು ಶಿಳ್ಳೆ ಹಾಕಿ, ಚಪ್ಪಾಳೆ ತಟ್ಟಿ, ಸಂಭ್ರಮಿಸುತ್ತೇವೆ…

ಪ್ರೀತಿಯ
ಶುಭಾಶಯಗಳು.

ಆರತಿ. ಎಚ್.ಎನ್
ಕವಿ, ಅನುವಾದಕಿ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.