ವೃತ್ತಿಯಲ್ಲಿ ವೈದ್ಯಕೀಯವನ್ನು ಮಾಡುತ್ತಿದ್ದರ ಹವ್ಯಾಸವಾಗಿ ಕಥೆ ಕವನ ವ್ಯಂಗ್ಯ ಚಿತ್ರ ಹೀಗೆ ನಾನಾ ಬಗೆಯಲ್ಲಿ ಪ್ರತಿಭೆಯನ್ನು ತೋರಿಸುತ್ತಿರುವ ಬಿಜಾಪುರ ಜಿಲ್ಲೆಯ ಆಲಮೇಲದವರು ಸಮೀರ್ ಹಾದಿಮನಿಯವರು ಉಪ್ಪು ನೀರಿನ ಸೆಲೆ ಎನ್ನುವ ಹೈಕು ಸಂಕಲನ ಬರೆದದ್ದು ಮುಖ್ಯವಾಗಿ ಇದರಲ್ಲಿ ಸಂವೇದನಾಶೀಲ ಬರಹಗಾರ ವ್ಯಕ್ತಪಡಿಸುವ ವಿವಿಧ ಚಹರೆಗಳನ್ನು ಕಾಣಬಹುದಾಗಿದೆ.ಶಾಫಿ಼ಯಾ ಪ್ರಕಾಶನದಿಂದ ಮುದ್ರಣಗೊಂಡು ಎ.ಎಸ್.ಮಕಾನಂದಾರ ಅವರ ಹೊನ್ನುಡಿ, ಚೆನ್ನಪ್ಪಾ ಕಟ್ಟಿಯವರ ಮುನ್ನುಡಿಯೊಂದಿಗೆ ಹೊರಬಂದಿರುವ ಕಾವ್ಯದ ಹೂರಣ ತೆರೆ-ಮೆರೆಗೆ ತೆರೆದಿಡುವುದು,ಆಧುನಿಕ ಜಾಯಮಾನಕ್ಕೆ ಅಗತ್ಯವಿರುವ ವಿವಿಧ ತರ್ಜುಮೆ ವ್ಯಕ್ತಪಡಿಸುವ ಪ್ರಯತ್ನ ಅವರ ಇಡೀ ಕಾವ್ಯಾನುಸಂಧಾನದಲ್ಲಿ ಕಾಣಬಹುದಾಗಿದೆ. ದೇವರು ಮನುಷ್ಯ ,ಪ್ರೀತಿ ಮತ್ತು ಹುಡುಗ ,ಸ್ಮಶಾನ ಮತ್ತು ಶೋಕ, ಪತ್ರಿಕೋದ್ಯಮ ಮತ್ತು ಸುಳ್ಳು ,ಪರಾವಲಂಬಿ ಮತ್ತು ದುಃಖ, ಪ್ರಶಸ್ತಿ ಮತ್ತು ಹಣ,ತೃಪ್ತಿ ಮತ್ತು ಜೀವನ ,ಆಕೆ ಮತ್ತು ಹಣತೆ,ಸಂಬಂಧ ಮತ್ತು ನೀತಿ,ಇವುಗಳು ಅವರ ಕಾವ್ಯದ್ದುದ್ದಕ್ಕೂ ಅಲ್ಲಲ್ಲಿ ಸದ್ದು ಮಾಡಿರುವುದು ಕಾಣಬಹುದಲ್ಲದೆ ನನಗೆ ಇಷ್ಟವಾಗಿರುವ ಕೆಲವು ಹೈಕು ಹಂಚಿಕೊಳ್ಳುವ ಪ್ರಯತ್ನವು ನನ್ನದಾಗಿದೆ.
ದೇಶ ಬಯಸುತ್ತಿರುವುದು ಸೌಹಾರ್ದ ಜನರು ಬಯಸುತ್ತಿರುವುದು ದಾರಿದ್ರ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳನ್ನು ಒದಗಿಸಬಹುದು.ಈ ಸಂಕಲನದಲ್ಲಿಯೂ ಅದಕ್ಕೆ ಭಿನ್ನವಾದ ನೆಲೆ ದೊರಕಿಸುವ ಪ್ರಯತ್ನ ಹಾದಿಮನಿಯವರಾಗಿದೆ.ಅದಕ್ಕಾಗಿ ಅವರು ‘ಕೋಮು ಸಂಘರ್ಷದ ಜಾಗದಲ್ಲಿ ಎದ್ದಿದೆ ಅನಾಥಾಲಯ’ ಎಂದಿರುವುದು ಈ ದಿನಮಾನದ ಬಹು ಸೂಚನೀಯ ವಿಚಾರ ಎಂದು ದಾಖಲಿಸಿಕೊಳ್ಳಬಹುದಾಗಿದೆ. ಪ್ರೀತಿ ಪ್ರೇಮದ ಜಾಗಗಳಲ್ಲಿ ಎಲ್ಲದಕ್ಕೂ ಅವಕಾಶವಿದೆ, ಎಲ್ಲರೂ ಸಮಾನವಾಗಿ ಬದುಕುವ ಹಕ್ಕಿದೆ,ಭಾರತಕ್ಕಾಗಿ ಮಡಿದವರ ಸಂಖ್ಯೆಗಿಂತ ಭಾರತದಲ್ಲಿಯೇ ಮಾಡಿದವರ ಸಂಖ್ಯೆ ಹೆಚ್ಚಾಗಿದೆ.ಮಾಡು ಇಲ್ಲವೇ ಮಡಿ ಎಂದು ಬಂದಾಗ ಜಾತಿ ಎನ್ನುವುದಿಲ್ಲ ದೇಶ ನನ್ನದು ದೇಹ-ಅದರದು ಎನ್ನುವ ಮನೋಭಾವನೆಯನ್ನು ಎಲ್ಲ ಭಾರತೀಯರು ಅಳವಡಿಸಿಕೊಳ್ಳಬೇಕಾಗಿದೆ. ಕೋಮು ಸಂಘರ್ಷದ ಬದಲಾಗಿ ಕೋಮು ಸೌಹಾರ್ದ ಬೆಳೆಸಿಕೊಳ್ಳಬೇಕಾಗಿದೆ. ಈ ದಿನಮಾನದ ಜರೂರತ್ತು ಕೂಡ ಅದಾಗಿದೆ.ಎಂಬುವ ಪ್ರಜ್ಞೆ ಮನುಷ್ಯನಿಗೆ ಬರಬೇಕಿದೆ ಎನ್ನುವುದೇ ಕವಿಯ ಕಾವ್ಯದ ಆಶಯವಾಗಿದೆ.
ಇಡೀ ಯಾದ ಕಾವ್ಯವನ್ನು ಗಮನಿಸುವಾಗ ಪ್ರೀತಿ-ಪ್ರೇಮ ದೇವಮಾನವ ಉಪ್ಪು ನೀರಿನ ಸೆಲೆ, ಪತ್ರಿಕೋದ್ಯಮದ ಒಳ ವಿಭಾಗ, ಪರಾವಲಂಬಿ ಜೀವನದ ಪರಮದುಃಖಿ, ಪ್ರಶಸ್ತಿ ಗೌರವ ಹೆಚ್ಚಿಸಬೇಕೆ ವಿನಃ, ಹಣ ಪೋಲಾಗಬಾರದು ಎನ್ನುವ ಕಲ್ಪನೆಯಲ್ಲಿ ರಚಿತವಾಗಿರುವ ‘ಕೊಂಡ ಪ್ರಶಸ್ತಿ ಹೆಚ್ಚಿಸಲು ಗೌರವ ಹಣದ ಪೋಲು’ ಎಂದು ಹೇಳುತ್ತಾ ಪ್ರತಿಭೆಯನ್ನು ಅನುಸರಿಸಿ ಪ್ರಶಸ್ತಿ ಬಂದಾಗ ಮಾತ್ರ ಅದಕ್ಕೆ ಗೌರವ ಸಲ್ಲಿಸಬಹುದಾಗಿದೆ. ಪ್ರತಿಭೆ ರಹಿತವಾದಾಗ ಹಣಕೊಟ್ಟು ಪ್ರಶಸ್ತಿ ತೆಗೆದುಕೊಳ್ಳುವ ಜಾಯಮಾನ ಬರುತ್ತದೆ ಎಂದು ಹೇಳಿ ಹಲವಾರು ಹೆಸರುಗಳಿಂದ ಸಂಸ್ಥೆಗಳು ಹುಟ್ಟಿಕೊಂಡು ಕೆಲವು ಖ್ಯಾತರ ಹೆಸರುಗಳಲ್ಲಿ ಪ್ರಶಸ್ತಿಗಳನ್ನು ಸ್ಥಾಪನೆ ಮಾಡಿ ಹಂಚುವ ಪದ್ಧತಿ ರೂಢಿಯಾಗಿದೆ ಅಂತಹ ಸಂಸ್ಥಗಳನ್ನ ನಿಷೇಧಿಸುವುದು,ಖ್ಯಾತನಾಮರ ಹೆಸರುಗಳನ್ನ ಬಳಸಿಕೊಂಡು ಪ್ರಶಸ್ತಿಗಳನ್ನ ನೀಡದಿರುವುದು ಬಹುಮುಖ್ಯ ಜವಾಬ್ದಾರಿಯಸರಕಾರದ್ದಾಗಿದೆ ಎನ್ನುವ ಮೂಲಕ ಹಾದಿ ತಪ್ಪುತ್ತಿರುವ ಸಾಹಿತ್ತಿಕ ಸಂಸ್ಥೆಗಳನ್ನು ಎಚ್ಚರಿಸುವ ಪ್ರಯತ್ನ ಮಾಡಿದ್ದಾರೆ.
ಸಮಾಜದ ಎರಡು ಕಣ್ಣುಗಳು ಎಂದು ಅಂದಾಜಿಸಿರುವ ಖಾಕಿ ಮತ್ತು ಕಾವಿ ಅವುಗಳಿಗೆ ರಕ್ತ ಮತ್ತು ವೀರ್ಯದ ಗುರುತುಗಳು ಇರಬಾರದು, ಒಂದು ವೇಳೆ ಖಾಕಿ ರಕ್ತದ ನಂಟಸ್ತಿಕೆ,ಕಾವಿ ವೀರ್ಯದ ಗಂಟಿಗೆ ಸಿಕ್ಕಿಕೊಂಡರೆ ಸಮಾಜದಲ್ಲಿ ಅಶಾಂತಿ ಬುಗಿಲೇಳುತ್ತದೆ ಎನ್ನುವ ವಿಚಾರವನ್ನು ಒಂದು ಹೈಕಿನ ಮೂಲಕ ತೋರ್ಪಡಿಸುವ ಪ್ರಯತ್ನ ಹಾದಿಮನಿಯವರದಾಗಿದೆ.
‘ಖಾಕಿಗೆ ರಕ್ತ
ಕಾವಿಗೆ ವೀರ್ಯಕಲೆ
ಶಾಂತಿಅದೆಲ್ಲಿ’
ಪ್ರಪಂಚ ಬಯಸುವುದು ರುದ್ರಭೂಮಿಯನಲ್ಲ,ಸ್ಮಶಾನಭೂಮಿಯಲ್ಲ ಉಪ್ಪು ನೀರಿನ ಸೆಲೆಯಲ್ಲ ತೃಪ್ತ ಶಾಂತ ಸಂತೃಪ್ತ ಜನಎನ್ನುವ ತಾತ್ಪರ್ಯದಲ್ಲಿ
ಶೋಕ ತಪ್ತರ
ಉಪ್ಪು ನೀರಿನ ಸೆಲೆ
ಸ್ಮಶಾನಭೂಮಿ
ಎಂದು ಹೇಳುತ್ತಾ ಮನುಷ್ಯ ತನಗೆ ಇಷ್ಟವಾದ ಪ್ರಪಂಚ,ಇಷ್ಟವಾದ ರೀತಿಯಲ್ಲಿ ಮ್ಯೊಡಿಪಿಕೇಶನ ಮಾಡುವ ಪ್ರಯತ್ನದಲ್ಲಿರುತ್ತಾನೆ, ಅದು ಯಥಾವತ್ತಾಗಿ ಗತಿಸದಿದ್ದಾಗ ಕ್ರೋಧದ ಮೂಲಕ,ಶೌರ್ಯದ ಮೂಲಕ ಅಥವಾ ಹಿಂಸೆಯ ಮೂಲಕ ಬದಲಾಯಿಸುವ ಪ್ರಯತ್ನ ಮಾಡುತ್ತಾನೆ. ಎನ್ನುವುದು ಈ ಹೈಕಿನ ಒಳಾರ್ಥವಾದರೂ ತೃಪ್ತಿಯ ಜೀವನಕ್ಕೆ ದಿನಕಂಬಲಿ ತಮಕಂಬಳಿ ಇಂದು ಎಂ.ಎಂ.ಕಲಬುರ್ಗಿಯವರು ವಚನ ಸಾಹಿತ್ಯದ ತಾತ್ಪರ್ಯವನ್ನು ಹೇಳುವ ಮೂಲಕ ಜೀವನಕ್ಕೆ ಬೇಕಿರುವುದು ಕತ್ತಲಾದಾಗ ಕಣ್ಣು ತುಂಬಾ ನಿದ್ದೆ,ಹಸಿವಾದಾಗ ಒಂದು ಹೊತ್ತಿನ ಊಟ ಸಾಕು ಅದಕ್ಕಿನ ಹೆಚ್ಚಿನದು ಎಲ್ಲವೂ ಸ್ವಾರ್ಥಕ್ಕಾಗಿ ಮಾಡಿದ್ದು ಎನ್ನುವ ತೃಪ್ತ ಜೀವನದ ನಿಜಾರ್ಥ ವ್ಯಕ್ತಪಡಿಸಿದ್ದಾರೆ.
ನೀತಿ ಎಲ್ಲರೂ ಭೋದಿಸುತ್ತಾರೆ ಆದರೆ ಪಾಲನೆ ಮಾಡುವವರ ಸಂಖ್ಯೆ ಕನಿಷ್ಠ ಮತ್ತು ಕಷ್ಟಕರವಾದದ್ದು ಎನ್ನುವ ನೈಜ ಸತ್ಯವನ್ನು ಮೂರೇ-ಮೂರು ಸಾಲಿನಲ್ಲಿ ವ್ಯಕ್ತಪಡಿಸುವ ಪ್ರಯತ್ನ ಮಾಡಿದ್ದಾರೆ.
‘ನೀತಿ ಬೋಧನೆ
ಸುಲಭ ,ಕಷ್ಟಕರ
ಪರಿಪಾಲನೆ’
ಪ್ರಜಾಪ್ರಭುತ್ವದ ದೊಡ್ಡ ದುರಂತವೆಂದರೆ ದ್ವೇಷ ಭಾಷಣ ಮತ್ತು ಜಾತಿಯತೆ ಇದನ್ನು ಕುರಿತಾದ ಸಾಕಷ್ಟು ಹೈಕುಗಳು ಈ ಕವನ ಸಂಕಲನದಲ್ಲಿ ನೋಡಬಹುದಾಗಿದೆ.ಅವುಗಳಲ್ಲಿ ಇಷ್ಟವಾದ ಇದೊಂದು ಸಂಕಲಿತವೆಂದರೆ,
‘ದೋಷ ಭಾಷಣ
ಚುನಾವಣೆ ಕಾಲದ
ಗೆಲ್ಲುವ ತಂತ್ರ’
ಪೂರ್ಣ ಕಾವ್ಯ ಗಮನಿಸುತ್ತಾ ಬಂದಾಗ ಖಾಕಿ ಕಾವಿಗಳ ಬಗ್ಗೆ, ಸಮಾಜ ಶಾಂತಿಯ ಬಗ್ಗೆ, ರಾಜಕೀಯ ದ್ವೇಷ ಭಾಷಣದ ಬಗ್ಗೆ,ಅತೀ ಪಾಂಡಿತ್ಯ ಅಧಿಕ ಪ್ರಸಂಗದ ಬಗ್ಗೆ, ಸೋಮಾರಿತನ ನಿದ್ರೆಯ ಬಗ್ಗೆ ,ನೀತಿ ಬೋಧನೆ ಪಾಲನೆಯ ಬಗ್ಗೆ,ಪರಾವಲಂಬಿ ಜೀವನ ದುಃಖದ ಬಗ್ಗೆ,ಪತ್ರಿಕೋದ್ಯಮ ಸುಳ್ಳಿನ ಕಾಗದ ಬಗ್ಗೆ,ಹಸ್ತ ರೇಖೆ ಮೇಟಿ ವಿದ್ಯೆಯ ಬಗ್ಗೆ, ಧರ್ಮಗಳ ಮಧ್ಯ ರಾಜಕಾರಣ ಕುರಿತು, ಕೋಮುಗಲಭೆ ಅನಾಥಾಲಯದ ಕುರಿತು, ಸಾಕಷ್ಟು ಹೈಕುಗಳನ್ನ ದಾಖಲಿಸಬಹುದಾಗಿದ್ದು. ಸಮಾಜ ತಿದ್ದಲು ನಿರತವಾದಾಗ ಲೇಖನಿ ತನ್ನ ಕಾರ್ಯ ಸರಾಗವಾಗಿಸಿಕೊಂಡು ಹೋಗುವುದು ಬಹುದೊಡ್ಡ ಜವಾಬ್ದಾರಿ ಎಂದು ಅರಿತಿರುವ ಹಾದಿಮನಿಯವರು ಅದನ್ನು ಆದಷ್ಟು ಮಟ್ಟಿಗೆ ಸಮರ್ಪಕವಾಗಿ ಬಳಸುವ ಪ್ರಯತ್ನ ಮಾನವೀಯತೆ-ಲೋಕಾಚಾರ _ತೃಪ್ತ ಜೀವನ ರಾಜಕೀಯ ರಾಜ್ಯದ ಧೋರಣೆ ಮತ್ತು ಸಮಾಜ ಹದಗೆಡುತ್ತಿರುವ ಸಂದರ್ಭದಲ್ಲಿ ನೈತಿಕತೆಯನ್ನು ಬಿತ್ತುವ ಜವಾಬ್ದಾರಿ ವಿದ್ಯಾವಂತರ ಕಣ್ಣಕೈಂಕರ್ಯ ಏಕಕಾಲದಲ್ಲಿ ಬಿತ್ತುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಬಹುದು.
ರಾಜಕೀಯ-ರಾಜಕಾರಣಿ ಸಮಾಜ ಮತ್ತು ನೈತಿಕ ಮೌಲ್ಯ.ಮನುಷ್ಯ ಉಳಿಸಿಕೊಂಡು ಮುಂದಿನ ತಲೆಮಾರಿಗೆ ವರ್ಗಾವಣೆ ಮಾಡುವ ಹೊಣೆಗಾರಿಕೆಗಳು ದೈಹಿಕ ಮಾನಸಿಕ ಬಯಕೆಗಳಿಗೆ ಹೊರತಾಗಿ ತೃಪ್ತ ಜೀವನಕ್ಕೆ ಬೇಕಾಗಿರುವ ಸ್ಪಷ್ಟ ಮೌಲ್ಯಗಳು, ಮನುಷ್ಯನ ಏಕಾಂಗಿತನಕ್ಕಿಂತ ಏಕಾಂತದ ಬಯಕೆಗಳು ಕಾವ್ಯದಕ್ಕೂ ವ್ಯಕ್ತಪಡಿಸುವ ಪ್ರಯತ್ನ ಸಾಪಲ್ಯತೆದತ್ತ ಸಾಗಿದೆ ಎಂದು ಹೇಳಬಹುದು. ಇನ್ನಷ್ಟು ಓದಿಕೊಂಡಾಗ ಹೊಸ ಪ್ರಶ್ನೆಗಳಿಗೆ ವಿಶೇಷ ದಿಶೆಯಲ್ಲಿ ಉತ್ತರ ಹುಡುಕುವ ಪ್ರಯತ್ನ ಕವಿ ಕಂಡುಕೊಳ್ಳಬಹುದು. ಉಪ್ಪು ನೀರಿನ ಸೆಲೆ ಎನ್ನುವ ಹೈಕು ಸಂಕಲನವೂ ಇಂದಿನ ದಿನಮಾನಕ್ಕೆ ಬೇಕಿರುವ ಅಗತ್ಯ ಮೌಲ್ಯಗಳು, ಬದ್ಧತೆಗಳು, ನೈತಿಕ ನೆಲೆಗಳು,ತೃಪ್ತ ಜೀವನಕ್ಕೆ ಅಗತ್ಯವಾಗಿರುವ ನೆಲೆಗಳನ್ನು ತೋರ್ಪಡಿಸುವ ವಿಚಾರವಂತಿಕೆಯ ಪುಸ್ತಕ ಎಂದು ಹೇಳಡ್ಡಿಯಿಲ್ಲ.ಈ ಹೊತ್ತಿಗೆಗೆ ಆತ್ಮೀಯವಾಗಿ ಸ್ವಾಗತಿಸುತ್ತಾ, ಆಪ್ತ ಓದುಗ ವಲಯ ಸೃಷ್ಟಿಸಿಕೊಳ್ಳಲಿ ಎಂದು ಶುಭ ಕೋರುತ್ತೇನೆ.
ಮೈಬೂಬಸಾಹೇಬ. ವೈ.ಜೆ.
ಸಹಾಯಕ ಪ್ರಾಧ್ಯಾಪಕ
ಬಿ.ಎಲ್.ಡಿ.ಸಂಸ್ಥೆ ವಿಜಯಪುರ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ನಿಮ್ಮ ಪ್ರೀತಿಗೆ ಅನಂತ ಧನ್ಯವಾದಗಳು, ಸಮೀರ್ ಹಾದಿಮನಿಯವರ ಪುಸ್ತಕ ಎಲ್ಲಿ ಅವಲೋಕನದ ಆದಿಯಾಗಿ ಕಾಣಿಸಿಕೊಂಡಿದ್ದು ಬಹುದೊಡ್ಡ ಕೃಷಿಯ ವಿಚಾರ ಎಂದೆನಿಸುತ್ತದೆ.