SKU: 18696

ಯುಗದ ಚೇತನರು

100.00

Book Details
Author : ಸಂಜಯ ಜಿ. ಕುರಣೆ
Publisher : ಕುರಣೆ ಪ್ರಕಾಶನ
Pages : 72

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 999

share This book

Book Description

ನಡು ನಾಡೆ ಇರಲಿ, ಗಡಿ ನಾಡೆ ಇರಲಿ
ಕನ್ನಡದ ಕಳೆಯ ಕಚ್ಚೇವು
ಹಚ್ಚೇವು ಕನ್ನಡದ ದೀಪ

ಎಂದು ಕನ್ನಡದ ದೀಪ ಬೆಳಗಿದ ಡಿ. ಎಸ್. ಕರ್ಕಿಯವರ ಕನ್ನಡದ ನಿತ್ಯ ನಂದಾದೀವಿಗೆಯ ಕವಿತೆಯ ಆಶಯದಂತೆ ಗಡಿನಾಡು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೃಷ್ಣಾ ಕಿತ್ತೂರಿನಲ್ಲಿದ್ದುಕೊಂಡು ಕಾಗವಾಡ, ಅಥಣಿ, ಚಿಕ್ಕೋಡಿ ಸೇರಿದಂತೆ ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದಲ್ಲಿ ಕನ್ನಡದ ಕಂಪು ಸೂಸುತ್ತಿರುವವರು ಸಂಜಯ ಕುರಣೆಯವರು. ಅಧ್ಯಾಪನ ವೃತ್ತಿಯೊಂದಿಗೆ ಸಾಹಿತ್ಯದ ಒಲವನ್ನು ಹೊಂದಿರುವ ಕುರಣೆಯವರು ಈಗಾಗಲೇ ಕವಿತೆ, ಹನಿಗವನಗಳು, ಹೈಕುಗಳು, ಮಕ್ಕಳ ಕವಿತೆಗಳು, ಪ್ರಬಂಧಗಳು, ಸಂಪಾದನೆ ಸೇರಿದಂತೆ ಹಲವು ಪ್ರಕಾರದ ಕೃತಿಗಳ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಆದರ್ಶ ಶಿಕ್ಷಕರಾಗಿ, ಸಂಘಟಕರಾಗಿ, ಪ್ರಕಾಶಕರಾಗಿ ಬಹುಮುಖ ವ್ಯಕ್ತಿತ್ವವನ್ನು ಹೊಂದಿರುವ ಕುರಣೆಯವರು ರಾಜ್ಯಾದ್ಯಂತ ನಡೆದ ವಿವಿಧ ಕವಿಗೋಷ್ಠಿಗಳಲ್ಲಿ ಕವಿತೆ ವಾಚನ ಮಾಡಿ ಜನಮನ ಸೂರೆಗೊಂಡಿದ್ದಾರೆ. ಇಂತಹ ಬಹುಶ್ರುತ ಪ್ರತಿಭೆಗಾಗಿ ನಾಡಿನಾದ್ಯಂತ ಹಲವು ಪ್ರಶಸ್ತಿಕ, ಗೌರವಗಳಿಗೆ ಪಾತ್ರರಾಗಿದ್ದಾರೆ.

‘ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ’ ಎಂಬ ಬಸವವಾಣಿಯಂತೆ ವಿನಯಶೀಲ ವ್ಯಕ್ತಿತ್ವವನ್ನು ರೂಢಿಸಿಕೊಂಡಿರುವ ಸಂಜಯ ಕುರಣೆಯವರು ಸದಾ ಅಧ್ಯಯನಶೀಲರು, ಹೊಸದನ್ನು ತಿಳಿದುಕೊಳ್ಳುವ ಮತ್ತು ಅದನ್ನು ಸೃಜನಶೀಲ ಮಾಧ್ಯಮದ ಮೂಲಕ ಅಭಿವ್ಯಕ್ತಿಸುವ ಹಂಬಲವುಳ್ಳವರು. ನಾನು ಇತ್ತೀಚೆಗೆ ಅವರಿಗೆ ಬಸವ ಸಮಿತಿಯು ಪ್ರಕಟಿಸಿದ ಶರಣರ ಜೀವನ ವೃತ್ತಾಂತಗಳ ಕಿರು ಹೊತ್ತಿಗೆಗಳನ್ನು ನೀಡಿದ್ದೆ. ಅವುಗಳನ್ನು ಶ್ರದ್ದೆಯಿಂದ ಓದಿದ ಕುರಣೆಯವರು ಅವುಗಳ ಪೈಕಿ ಅವರ ಮನವನ್ನು ತಾಕಿದ 25 ಶರಣರ ಜೀವನ ವೃತ್ತಾಂತಗಳನ್ನು ‘ಯುಗದ ಚೇತನರು’ ಎಂಬ ಕವನ ಸಂಕಲನದಲ್ಲಿ ಪಡಿಮೂಡಿಸಿದ್ದಾರೆ. ಬಸವಾದಿ ಶರಣರ ಜೀವನ ಹಾಗೂ ಬೋಧನೆಗಳು ಹಿಂದೆಂದಿಗಿಂತಲೂ ಪ್ರಸ್ತುತವಾಗಿದ್ದು, ಅವರ ಕುರಿತು ಇನ್ನಷ್ಟು ಕೃತಿಗಳು ಕುರಣೆಯವರಿಂದ ಹೊರಬರಲಿ ಎಂದು ಆಶಿಸುತ್ತೇನೆ.

ಮೋಹನ ಬಸನಗೌಡ ಪಾಟೀಲ ಮಾಜಿ ಅಧ್ಯಕ್ಷರು, ಕ.ಸಾ.ಪ. ಬೆಳಗಾವಿ

Rating This Book

Reviews

There are no reviews yet.

Be the first to review “ಯುಗದ ಚೇತನರು”

Your email address will not be published. Required fields are marked *

Top Books