+918310000414
contact@kannadabookpalace.com
+918310000414
contact@kannadabookpalace.com
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ರುದ್ರ ವಾಸ್ತವ -ಡಾ. ಕುವೆಂಪು
‘ವೈಶಾಖ’ ಕನ್ನಡ ಕಾದಂಬರಿ ಕ್ಷೇತ್ರಕ್ಕೆ ಮಹತ್ವದ ಕೊಡುಗೆ. ಅದರ ಕ್ರಿಯಾಕೇಂದ್ರದ ನಿರ್ವಹಣೆಯ ವಿಷಯದಲ್ಲಿ ಅಭಿಪ್ರಾಯಭಿನ್ನತೆಗೆ ಅವಕಾಶವಿದ್ದರೂ ಅದರ ಕಾವ್ಯಾತ್ಮಕವಾದ ಶಿಲ್ಪ, ಸಂಕೇತಗಳು, ಪ್ರಜ್ಞಾ ಪ್ರವಾಹತಂತ್ರ, ಶೈಲಿ, ಅದು ಸೃಷ್ಟಿಸುವ ಕಾಮದ ಕುಂಡದಂತಿರುವ ಜ್ವಲಂತ ಜೀವಂತಲೋಹ ಅದರ ಪ್ರಸಂಗಗಳ ಮತ್ತು ಪಾತ್ರಗಳ ವೈವಿಧ್ಯವ್ಯಾಪ್ತಿ, ಹೆಣ್ಣಿನ ಮತ್ತು ಹರಿಜನರ ಬಗ್ಗೆ ಅದರಲ್ಲಿ ಮಿಡಿಯುವ ಅನುಕಂಪ, ಅದ ರೌದ್ರ ಆಶಾವಾದ ‘ವೈಶಾಖ’ವನ್ನು ಕನ್ನಡದ ಶ್ರೇಷ್ಠ ಕಾದಂಬರಿಗ ಸಾಲಿಗೆ ನಿಸ್ಸಂಶಯವಾಗಿ
ಸೇರಿಸುತ್ತವೆ. -ಕೆ. ನರಸಿಂಹಮೂರ್ತಿ
ಕಾದಂಬರಿಯ ಪ್ರಕಾರದ ಮೂಲ ಸ್ವರೂಪವೆಂದರೆ ಜೀವನದ ಅದ್ಭುತ ವಿಸ್ತಾರವನ್ನೂ ಮಾನವೀ ಸಂಬಂಧ ಸಂಕೀರ್ಣತೆಯನ್ನೂ ಆದಷ್ಟು ಮೂರ್ತ ರೂಪದಲ್ಲಿ ಪ್ರತಿಸೃಷ್ಟಿಸುವುದು. ಈ ದೃಷ್ಟಿಯಿಂದ ‘ವೈಶಾಖ’ ನಿಜವಾದ ಕಾದಂಬರಿ… ಪುಟ್ಟಪ್ಪನವರ ‘ಮಲೆಗಳಲ್ಲಿ ಮದುಮಗಳು’ ಕೃತಿಯ ನಂತರ ಬಂದಂಥ ನಿಜವಾದ ಕಾದಂಬರಿಯೆಂದೇ ‘ವೈಶಾಖ’ ಮೆಚ್ಚುಗೆಯಾಗುತ್ತದೆ.
-ಡಾ. ಶಾಂತಿನಾಥ ದೇಸಾಯಿ
ಕುವೆಂಪು ಅವರ ‘ಕಾನೂರು ಹೆಗ್ಗಡಿತಿ’ ಹಾಗೂ ‘ಮಲೆಗಳಲ್ಲಿ ಮದುಮಗಳು’, ಕಾರಂತರ ‘ಮರಳಿ ಮಣ್ಣಿಗೆ’, ರಾವ್ ಬಹಾದ್ದೂರರ ‘ಗ್ರಾಮಾಯಣ’ ಮುಂತಾದ ಅತ್ಯುತ್ತಮ ಪ್ರಾದೇಶಿಕ ಕಾದಂಬರಿಗಳ ಸಾಲಿಗೆ ಸೇರುವಂಥದು ‘ವೈಶಾಖ’- ಕಥಾ ಭಾಗದ ಬೃಹತ್ತು, ಅನುಭವಸಾಂದ್ರತೆಯ ಮಹತ್ತು ಹಾಗೂ ವಸ್ತು ನಿರ್ವಹಣೆಯ ಕಲಾತ್ಮಕ ಕಿಮ್ಮತ್ತುಗಳ ದೃಷ್ಟಿಯಿಂದ, ಒಟ್ಟಿನಲ್ಲಿ ಕನ್ನಡ ಕಾದಂಬರಿ ಪರಂಪರೆಯ ಮುನ್ನಡೆಗೆ ಚಾಲನೆ ಕೊಡುವ ಹೊಸ ಕೊಡುಗೆ ಈ ಕಾದಂಬರಿ ಎಂದು ಹೆಮ್ಮೆಯಿಂದ ಹೇಳಬಹುದು.
-ಡಾ. ಸುಧಾಕರ
ಬುಟ್ಟಿ, ತುಂಬಿದ ಬುಟ್ಟಿ.
-ಡಾ. ರಾಜೀವ ತಾರಾನಾಥ
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.