SKU: 14648

ವಚನಾಮೃತ-೧

50.00

Author : ಎ. ಎಸ್. ಪಾವಟೆ

Publishers Name : ಪೂಜ್ಯಶ್ರೀ ಗುರುಬಸವ ಪ್ರಕಾಶನ

(1 customer review)

Out of stock

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ತೋರು ಬೆರಳಿನಿಂದ

ಪಾವಟೆ ಅವರು ಈ ಕೃತಿಯಲ್ಲಿ ತಮ್ಮ ವಿವರಣೆಗಾಗಿ ೧೨ನೇ ಶತಮಾನದ ತರಣ-ಶರಣೆಯರ ಆಯ್ದ ೧೦೦ ವಚನಗಳನ್ನು ಆರಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ವಚನಗಳು ನೇರವಾಗಿ ಅರ್ಥವಾಗುವಂತಿದ್ದರೂ, ಕೆಲವು ಸಂದರ್ಭಗಳಲ್ಲಿ ಓದುಗರು ಲಕ್ಷ್ಯಾರ್ಥ ಗಮನಿಸದೆ ಕೇವಲ ವಾಚ್ಯಾರ್ಥವನ್ನಷ್ಟೇ ನೋಡುತ್ತಾರೆ. ಅಂತಹ ಕಡೆ ಅರ್ಥಗ್ರಹಿಕೆಯಲ್ಲಿ ತಪ್ಪಾಗುವ ಸಂಭವವಿರುತ್ತದೆ. ಪಾವಟೆ ಅವರು ತಮ್ಮ ಸ್ಪಷ್ಟ ವಚನ ವಿವರಣೆಯಿಂದ ಓದುಗರನ್ನು ಅಂತಹ ಸಂದಿಗ್ಧತೆಯಿಂದ ಪಾರುಮಾಡುತ್ತಾರೆ.

ಈ ಕೃತಿಯ ಮತ್ತೊಂದು ವಿಶೇಷವೆಂದರೆ, ಪಾವಟೆ ಅವರು ವಚನ ವಿವರಣೆಯ ಜೊತೆಯಲ್ಲೇ ವಚನಕಾರರು ಯಾರು, ಎಲ್ಲಿಯವರು, ಅವರ ಕಾಯಕವೇನು ಎಂಬುದನ್ನು ಒಂದೊಂದೇ ಮಾತಿನಲ್ಲಿ ತಿಳಿಸುತ್ತಾರೆ. ವಿವರಣೆಗೆ ಅವರು ಆರಿಸಿಕೊಂಡಿರುವ ಒಂದೊಂದು ವಚನವೂ ಆಯಾಯ ವಚನಕಾರನ ಅಥವಾ ವಚನಕಾರಳ ಪರಿಶುದ್ಧ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿದಂತಿದೆ.

ನಾನು ಹೇಳಿದಂತೆ ವಚನಗಳು ಸರಳವೆಂಬಂತೆ ಕಂಡರೂ, ಕೆಲವೊಮ್ಮೆ ಅರ್ಥ ವಿವರಣೆ ಅಗತ್ಯವಾಗುತ್ತದೆ. ಉದಾ: ಮಖಾ ಪದವಿಯನೆ ಕರುಣಿಸು, ಕತ್ತಲೆ ಕೆಟ್ಟ ಕೇಣೆ, ಅಕ್ಷರವು ಸೊಡೆಯದ ಮುನ್ನ, ಆಚಾರವೆ ಪ್ರಾಣವಾಗಿಪ್ಪ, ಹಿಡಿದುದ ಬಿಡಲಾಗದು. ವಾಯುವಿನ ಕೈಯ ಸೊಡರು, ಪರಿಣಾಮವನೊಲ್ಲದ ಪ್ರಸಾದ, ಹುಡಿ ಹತ್ತದ ಗಾಳಿ, ಪಂಗುಳನ ಪಯಣ ಇತ್ಯಾದಿ ಮಾತುಗಳನ್ನು ಸ್ಪಷ್ಟವಾಗಿ ವಿವರಿಸಿರುವುದರಿಂದ ಇಡೀ ವಚನ ಓದುಗನ ಮನದಲ್ಲಿ ಅಚೊತ್ತಿ ನಿಲ್ಲುತ್ತದೆ. ಆ ಮೂಲಕ ಪಾವಟೆ ಅವರು ಓದುಗನನ್ನು ವಚನಕಾರನ ಬಳಿಗೇ ಕರೆದೊಯ್ಯುತ್ತಾರೆ.

ದಿನದಿನಕ್ಕೆ ಕಲುಷಿತಗೊಳ್ಳುತ್ತಿರುವ ಅಂದಿನ ನಮ್ಮ ಧಾರ್ಮಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ವ್ಯವಸ್ಥೆಗಳನ್ನು ಸರಿದಾರಿಗೆ ತರುವಲ್ಲಿ ಮತ್ತು ವೈಯಕ್ತಿಕ ಶೀಲ- ಚಾರಿತ್ರ್ಯಗಳ ಸಂರಕ್ಷಣೆಗೆ ಮಾರ್ಗದರ್ಶನ ನೀಡುವ ಸಮರ್ಥ ವಚನಗಳನ್ನೇ ಆಡಿಸಿಕೊಂಡು ಅತ್ಯಂತ ಸರಳ ವಿವರಣೆ ನೀಡಿರುವ ಪಾವಟೆ ಈ ರೂಪದಲ್ಲಿ ವಚನ ಸಾಹಿತ್ಯ ಕಣಜಕ್ಕೆ ಉಪಯುಕ್ತ ಕಾಣಿಕೆ ಸಲ್ಲಿಸಿದ್ದಾರೆ.

ಈ ಗೋ ರು. ಚನ್ನಬಸಪ್ಪ, ಬೆಂಗಳೂರು

Rating This Book

1 review for ವಚನಾಮೃತ-೧

  1. ಪೂರ್ಣಿಮಾ ರಾಜೇಶ್

    ಓಂ ಶ್ರೀ ಗುರು ಬಸವ ಲಿಂಗಾಯ ನಮಃ ವಚನಾಮೃತ-1 12ನೇ ಶತಮಾನದ ಶಿವ ಶರಣೆ ಶರಣರ ಆಯ್ದ ವಚನಗಳು ಸಾಮಾನ್ಯ ಜನರಿಗೆ ಅರ್ಥವಾಗುವ ಹಾಗೆ ರಚಿಸಿದ್ದಾರೆ. ಈ ಚಂದದ ಕೃತಿಯ ಸಹೃದಯ ಕವಿಮಿತ್ರ ಓದುಗರು ಕೊಂಡು ಓದುವ ಮೂಲಕ ಕವಿಮಿತ್ರರನ್ನು ಹರಸಿ ಹಾರೈಸಿ ಎಂದು ಶುಭ ಕೋರುವೆ.

Add a review

Your email address will not be published. Required fields are marked *

Top Books