SKU: 2069

Urvashi

225

ಲೇಖಕರು : Dr. Goruru Ramaswamy Iyengar

PUBLISHERS ADDRESS : IBH Prakashana # 18/1, 2nd main 2nd cross, N R Colony, Bangalaore-560004

Ph: 080-26676003

Email: ibhprakashana@gmail.com

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 999

share This book

Book Description

ಯಾವುದೋ ವಿಷುಗಳಿಗೆಯಲ್ಲಿ ಪ್ರಕೃತಿಯ ಸಂಚಿಗೆ, ವ್ಯಕ್ತಿಯ ಮೋಹ ಚಾಪಲ್ಯಗಳಿಗೆ ಬಲಿಯಾಗಿ, ತನಗೆ ತಿಳಿಯದಂತೆಯೇ ಪಾತಾಳಕ್ಕೆ ಬಿದ್ದು, ಕ್ಷಣಾರ್ಧದಲ್ಲಿ ಎಚ್ಚರಗೊಂಡು, ಪಶ್ಚಾತ್ತಾಪ ತ್ಯಾಗ ಸೇವೆಗಳಿಂದ ತನ್ನನ್ನು ತಾನು ಉದ್ಧರಿಸಿಕೊಂಡ ಸೀತಾಲಕ್ಷ್ಮಿಯೆಂಬ ಮಹಿಳೆಯ ಹೃದಯ ವಿದ್ರಾವಕವಾದ ಕರುಣಕಥೆಯೇ ಈ ಕಾದಂಬರಿಯ ವಸ್ತು. ಅಹಲ್ಲೋದ್ಧಾರದ ಕಥೆಗಿಂತ ಸೀತಾಲಕ್ಷ್ಮಿಯ ಕಥೆ ಮಹತ್ವದಲ್ಲಿ ಕಡಿಮೆಯಾದುದೇನಲ್ಲ. ಅದಕ್ಕೆ ಪ್ರತಿಯಾಗಿ ಇದು ಒಂದು ಕೈ ಮಿಗಿಲಾದುದೆಂದೇ ನನ್ನ ಎಣಿಕೆ. ದೇವರಾಜನೆಂಬ ಕುತೂಹಲಕ್ಕೆ ಮರುಳಾಗಿ, ಗೌತಮವೇಷದಿಂದ ಬಂದ ಇಂದ್ರನನ್ನು ತನ್ನಲ್ಲಿಗೆ ಬರಮಾಡಿಕೊಂಡಅಹಲೈ, ತಮ್ಮ ಮಾನರಕ್ಷಣೆ ಮಾಡಬೇಕೆಂದು ಅವನನ್ನು ಬೇಡಿಕೊಂಡಳು. ಸೀತಾಲಕ್ಷ್ಮಿಗಾದರೋ ಕನಸುಮನಸುಗಳಲ್ಲಿ ಈ ದುರುದ್ದೇಶವಿರಲಿಲ್ಲ. ಇಂದ್ರನಿಗೆ ಗೌತಮನ ಶಿಕ್ಷೆಯನ್ನು ಎಧಿಸಿದ. ಸೀತಾಲಕ್ಷ್ಮಿಯ ಸತೀತ್ವವನ್ನು ಭಂಗಪಡಿಸಿದ ನರಸಿಂಹನಿಗೆ ಯಾರು ಶಿಕ್ಷೆಯನ್ನು ವಿಧಿಸಿದರು? ಸಮಾಜ ಅವನನ್ನು ಶಿಕ್ಷಿಸುವುದಿರಲಿ, ನರಸಿಂಹ ಗಂಡಸು ಅವನು ಏನು ಬೇಕಾದರೂ ಮಾಡಬಹುದು ಎಂದು ತೀರ್ಪಿತ್ತಿತು. ಅಹಲೈ ಯಾರ ಕಣ್ಣಿಗೂ ಬೀಳದೆ ನಿರಾಹಾರಿಯಾಗಿ ಗಾಳಿ ಕುಡಿಯುತ್ತ ಶ್ರೀರಾಮನು ತನ್ನಲ್ಲಿಗೆ ಬರುವವರೆಗೆ ಕಾಲತಳ್ಳಿ, ಅವನಿಂದ ಶುದ್ದಿಯನ್ನೂ ಗಂಡನಿಂದ ಕ್ಷಮೆಯನ್ನು ಪಡೆದಳು. ಈ ತೆರನಾದ ಸಹಾನುಭೂತಿ ಸೀತಾಲಕ್ಷ್ಮಿಗೆ ದೊರಕಲಿಲ್ಲ.

ಸೀತಾಲಕ್ಷ್ಮಿಯ ರೂಪು ಊರ್ವಶಿಯ ಸೌಂದರ್ಯದಂತೆ ಅದ್ಭುತವಾದುದು;ಅದರಿಂದ ಆಕರ್ಷಿತರಾದ ಯುವಕರು ಪತಂಗದಂತೆ ಅದರಲ್ಲಿ ಬೀಳಲೆಳೆಸುವುದು ಆಶ್ಚರ್ಯವೇನಲ್ಲ, ಸೀತಾಲಕ್ಷ್ಮಿಯ ಸೌಂದರ್ಯ ಕಾದಂಬರಿಯನ್ನೆಲ್ಲ ಅವರಿಸಿ ಅದನ್ನು ಕಾಂತಿಗೊಳಿಸಿದೆ. ಆದರೆ ಸೀತಾಲಕ್ಷ್ಮಿಯ ಅಸಹಾಯಕ ಸ್ಥಿತಿಯ ಒಂದು ಸಮಯವನ್ನು ಬಿಟ್ಟರೆ, ಆ ಸೌಂದರ್ಯದ ಹಿಂದೆ ದುರ್ದಮ್ಯವಾದ ಸಂಯಮ ಅಡಗಿದೆ ಎಂಬುದು ಗಮನಾರ್ಹ.

‘ಊರ್ವಶಿ’ ಕಾದಂಬರಿ ಒಂದು ದೃಷ್ಟಿಯಿಂದ ‘ಕನ್ನಡದ ಪುನರುತ್ಥಾನ”.

Rating This Book

Reviews

There are no reviews yet.

Be the first to review “Urvashi”

Your email address will not be published. Required fields are marked *