+918310000414
contact@kannadabookpalace.com
+918310000414
contact@kannadabookpalace.com
₹180.00
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಮ್ಯಾನೇಜೆಂಟ್ ಗುರು ಎಂದು ಪ್ರಸಿದ್ಧರಾಗಿರುವ ಪೀಟರ್ ಡ್ರಕರ್ ಅವರು ಕಾರ್ಪೊರೇಟ್ ನಿರ್ವಹಣಾ ಸಾಮರ್ಥ್ಯ ಕುರಿತಾಗಿ ಪಂಚ ಸೂತ್ರಗಳನ್ನು ಉಲ್ಲೇಖಿಸುತ್ತಾರೆ. ಗುರಿಯನ್ನು ಗೊತ್ತುಪಡಿಸುವುದು, ಗುಂಪನ್ನು ಸಂಘಟಿಸುವುದು, ಉದ್ಯೋಗಿಗಳನ್ನು ಪ್ರೇರೇಪಿಸಿ ಸಂವಹನ ನಡೆಸುವುದು, ಉದ್ಯೋಗಿಗಳ ಕಾರ್ಯಕ್ಷಮತೆಯನ್ನು ಅಳೆದು ಅವರನ್ನು ಅಭಿವೃದ್ಧಿಪಡಿಸುವುದು ಮತ್ತು ಆವಿಷ್ಕಾರ ಹಾಗು ಬದಲಾವಣೆಗಳಿಗೆ ಆದ್ಯತೆ ನೀಡುವುದು.
ಭಾರತದಲ್ಲಿ ಇಂದು ಸುಮಾರು 60% ಉದ್ಯೋಗಿಗಳು ಮೃದು ಕೌಶಲ್ಯದ ಸೇವಾ ನಿರತರಾಗಿದ್ದು, ಈ ಕೌಶಲ್ಯದ ಪರಿಣಿತಿಗಾಗಿ ಇಂದಿನ ಜನಾಂಗಕ್ಕೆ ಮುಖ್ಯವಾಗಿ ಬೇಕಾಗಿರುವುದು ತನ್ನ ಕೆಲಸ ಮತ್ತು ಜವಾಬ್ದಾರಿಯ ಬಗ್ಗೆ ಪರಿಜ್ಞಾನ. ಮೇಲ್ಕಂಡ ಅಂಶಗಳನ್ನು ಅರ್ಥೈಸಿಕೊಳ್ಳುವಲ್ಲಿ ಮತ್ತು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವಲ್ಲಿ ಈ ಪುಸ್ತಕ ಮಹತ್ತರ ಪಾತ್ರವನ್ನು ವಹಿಸಿ ತಿಳುವಳಿಕೆಯನ್ನು ನೀಡುತ್ತದೆ.
ಎಚ್. ಶ್ರೀಧರ್ ರಾವ್ ಅವರ ಈ ಪುಸ್ತಕದಲ್ಲಿ ತನ್ನ 15 ವರ್ಷಗಳ ಮಾನವ ಸಂಪನ್ಮೂಲ ಮೌಲ್ಯಮಾಪನ ಅನುಭವದಲ್ಲಿ ತಾವು ಕಂಡ ಹಲವಾರು ಕಾರ್ಪೊರೇಟ್ ಸಂಸ್ಥೆಗಳು ಯಾವ ಹಂತದಲ್ಲಿ ಯಾವ ಪರಿಸ್ಥಿತಿಯಲ್ಲಿ ಯಾವ ಸಾಮರ್ಥ್ಯಗಳನ್ನು ಹೇಗೆ ಉಪಯೋಗಿಸಿಕೊಳ್ಳಬೇಕೆಂಬ ಕಾರ್ಪೊರೇಟ್ ದಿಗ್ಗಜರ ನಿರೀಕ್ಷೆಗಳನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿದ್ದಾರೆ. ಪೂರಕವಾಗಿ, ತಾವು ನೀಡಿದ ಪ್ರತಿಕ್ರಿಯೆ, ಸಮಾಲೋಚನೆ ಮತ್ತು ನೀಡಿದ ವೈಯಕ್ತಿಕ ಅಭಿವೃದ್ಧಿ ಯೋಜನೆಗಳನ್ನು ಗಮನದಲ್ಲಿಟ್ಟು ಸಾಮರ್ಥ್ಯಗಳನ್ನು ವಿಶದೀಕರಿಸಿದ್ದಾರೆ.
ಒಬ್ಬ ಉದ್ಯೋಗಿ ನಿರಂತರ ಬ್ಯಾಂಕಿಂಗ್ ಜ್ಞಾನಾರ್ಜನೆ ಮಾಡಿಕೊಂಡು, ಹಲವು ಮಜಲುಗಳನ್ನು ದಾಟಿ, ಭಿನ್ನಾಭಿರುಚಿಯ ಉದ್ಯೋಗಿಗಳೊಂದಿಗೆ ಸಮರ್ಥ ಸಹಯೋಗ ದಿಂದ, ನಾಯಕನಾಗಿ ಬೆಳೆದು, ಹೇಗೆ ಜವಾಬ್ದಾರಿಗಳನ್ನು ನಿಭಾಯಿಸಬಹುದು ಎಂಬ ಹಲವು ಸ್ವ-ಅನುಭವಗಳನ್ನು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ.
ಒಟ್ಟಿನಲ್ಲಿ ಉದ್ಯೋಗ ಆಕಾಂಕ್ಷಿಗಳಿಗೆ ಕಾರ್ಪೊರೇಟ್ ಸಂಸ್ಥೆ ಪ್ರವೇಶಿಸಲು ಮತ್ತು ಪದೋನ್ನತಿಯನ್ನು ಪಡೆದು ಉತ್ತುಂಗಕ್ಕೆ ಏರಲು ಈ ಕೈಪಿಡಿ ಅತ್ಯುತ್ತಮ ದಾರಿದೀವಿಗೆ ಎಂದರೆ ಅತಿಶಯೋಕ್ತಿಯೇನಲ್ಲ.
ಡಾ. ಎಲ್. ರವೀಂದ್ರನ್.
B Com (Hons)
PGDIM Ph D CFP CM
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.