+918310000414
contact@kannadabookpalace.com
+918310000414
contact@kannadabookpalace.com
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ವಿಚಾರಗಳನ್ನು ಕೆದಕುವ, ವ್ಯಕ್ತಿಗಳನ್ನು ಕೆಣಕುವ ಅವರ ಗುಣ ವಿಶೇಷ ಅವರ ಸ್ವಭಾವದಲ್ಲೇ ಅಡಗಿದೆ. ಸಿದ್ಧ ಪ್ರತಿಷ್ಠಿತರನ್ನು, ಚೌಕಟ್ಟುಗಳನ್ನು ಒಡೆಯುವ ಗುಣದಿಂದ ಸಿನಿಕರಂತೆ ಕಂಡರೂ ಆಳದಲ್ಲಿ ಅವರಿಗೆ ಅದು ತಮ್ಮ ಅರಿವಿನ ಅನುಸಂಧಾನಕ್ಕೆ ಬೇಕಾಗಿರುವ ಅಗತ್ಯ.
ಕನ್ನಡ ಸಂಸ್ಕೃತಿಯ ಅತ್ಯಂತ ಪ್ರಮುಖ ದಶಕವಾದ 1970 ಲಂಕೇಶರ ವಿಶಿಷ್ಟ ಭಾಗವೂ ಹೌದು. ಲಂಕೇಶರ ಈ ದಶಕದ ಸಾಹಿತ್ಯ, ರಂಗಭೂಮಿ, ಪತ್ರಿಕೆ, ಸಾಮಾಜಿಕ ಚಟುವಟಿಕೆಗಳಲ್ಲಿ ಆ ಕಾಲದಲ್ಲಿ ಅವರೊಂದಿಗಿದ್ದ ಮೋಹನ್‌ರಾಂರ ಆತ್ಮೀಯ ಒಡನಾಟವೇ ಈ ಪುಸ್ತಕದ ಪ್ರೇರಕ ಶಕ್ತಿ.
ಲಂಕೇಶರ ಸಾಹಿತ್ಯಕ ಶ್ರೇಷ್ಠತೆಯನ್ನು ಈ ಪುಸ್ತಕ ಒಳಗೊಳ್ಳದಿದ್ದರೂ ಅವರ ಬದುಕು, ಆಸಕ್ತಿ, ಅತಿರೇಕ, ಸ್ವಭಾವ- ಮೂಡುಗಳು, ಚಟ, ಚಪಲಗಳು ಸಹ ಅಷ್ಟೇ ಮುಖ್ಯವೆಂದು ನಂಬಿರುವ ಮೋಹನ್‌ರಾಂ ಇಲ್ಲಿ ರೂಪಿಸಿರುವುದೂ ಅದನ್ನೇ. ಸಂಸ್ಕೃತಿಯ ಕಾಲವೊಂದರ ದಾಖಲೆ ಇದು ಎಂಬುದು ಅವರ ಸಮರ್ಥನೆ.
ಒಂದಂತೂ ನಿಜ. ಬಳಸುವ ಭಾಷೆ, ವಿಚಾರಗಳ ಭೌದ್ಧಿಕ ಭಾರದಿಂದ ಕುಸಿಯಕೂಡದು. ಅದನ್ನು ಹೇಳುವ ಕ್ರಮ ನೇರ, ಸರಳ, ಚೇತೋಹಾರಿ ಯಾಗಿರಬೇಕು: ಲಂಕೇಶರಿಂದ ಇದನ್ನು ಕಲಿತ ಮೋಹನ್‌ರಾಂ ಅದನ್ನು ಮುಂದುವರೆಸಿದ್ದಾರೆ ಎಂಬುದು ಜಯಲಲಿತಾ ಮತ್ತು ರಾಮಾನುಜಾಚಾರ್ಯರ ಕುರಿತ ಅವರ ಪುಸ್ತಕಗಳು ನಮ್ಮ ಮುಂದಿವೆ.
-ಎನ್. ವಿದ್ಯಾಶಂಕರ್
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.