+918310000414
contact@kannadabookpalace.com
+918310000414
contact@kannadabookpalace.com
Ph: 080-26702010
Email: hemanthasahitya@gmail.com
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಕನ್ನಡ ವಿಶ್ವವಿದ್ಯಾಲಯ, ಹಂಪಿಯಲ್ಲಿ ಯುಜಿಸಿ ಪ್ರಾಯೋಜಿತ ಮಹಿಳಾ ಅಧ್ಯಯನ ಕೇಂದ್ರವು 2005ರಲ್ಲಿ ಸ್ಥಾಪನೆಗೊಂಡು ಶೈಕ್ಷಣಿಕ, ಸಂಶೋಧನಾತ್ಮಕ ಮತ್ತು ವಿಸ್ತರಣಾ ಕೆಲಸವನ್ನು ವಿಶೇಷವಾಗಿ ನಡೆಸುತ್ತಿದೆ. ಕೇಂದ್ರ ಕಳೆದ ಎರಡು ವರ್ಷಗಳಲ್ಲಿ ಮಹಿಳಾ ಅಧ್ಯಯನಕ್ಕೆ ಸಂಬಂಧಿಸಿದಂತೆ ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ ಪುಸ್ತಕವನ್ನು ಪ್ರಕಟಿಸಲಾಗಿದೆ. ಕೇಂದ್ರದ ವತಿಯಿಂದ ಮಹಿಳಾ ಅಧ್ಯಯನಕ್ಕೆ ಸಂಬಂಧಿಸಿದಂತೆ ಆಕರ ನಿರ್ಮಾಣದ ಕೆಲಸವನ್ನು ಈ ಪ್ರಕಟಣೆಗಳ ಮೂಲಕ ಆರಂಭಿಸಲಾಗಿದೆ.
ಮಹಿಳಾ ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಈ ಪುಸ್ತಕಗಳು ಮೂಲಭೂತ ವಿಷಯಗಳನ್ನು ಪರಿಚಯಿಸಿಕೊಡುತ್ತವೆ. ಮಹಿಳಾ ಅಧ್ಯಯನ ಮತ್ತು ಸ್ವೀವಾದಕ್ಕೆ ಸಂಬಂಧಿಸಿದಂತೆ ಸೈದ್ದಾಂತಿಕ ಸಂಗತಿಗಳನ್ನು ಇಲ್ಲಿ ಚರ್ಚಿಸಲಾಗಿದೆ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಸಂಶೋಧಕರಿಗೂ ಈ ಕೃತಿಗಳು ಸದಾಲೋಚಕ ಗ್ರಂಥಗಳಾಗಿ ಸಹಕಾರಿಯಾಗಿದೆ. ಮಹಿಳಾ ಅಧ್ಯಯನಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಗ್ರಂಥಗಳು ಹೆಚ್ಚು ನಿರ್ಮಾಣವಾಗಬೇಕು ಎನ್ನುವ ನಮ್ಮ ಮಹಿಳಾ ಅಧ್ಯಯನ ಕೇಂದ್ರದ ಆಶಯಕ್ಕೆ ಅನುಗುಣವಾಗಿ ಈ ಕೃತಿಗಳು ಪ್ರಕಟವಾಗುತ್ತಿವೆ.
ಡಾ. ಡಿ. ಮಂಗಳಾ ಪ್ರಿಯದರ್ಶಿನಿ ಅವರು ‘ಸ್ತ್ರೀವಾದ ಮತ್ತು ಮಹಿಳಾ ಅಧ್ಯಯನ : ಒಂದು ಪ್ರವೇಶಿಕೆ’ ಎನ್ನುವ ಪುಸ್ತಕದಲ್ಲಿ ಸಾಮಾಜಿಕ ಸನ್ನಿವೇಶದಲ್ಲಿ, ಲಿಂಗಾಧಾರಿತ ಸಮಾಜದಲ್ಲಿ ಮಹಿಳೆಯ ಸ್ಥಾನಮಾನ, ಅವಕಾಶಗಳು, ಒತ್ತಡಗಳು ಮತ್ತು ಸಾಧ್ಯತೆಗಳನ್ನು ವಿವೇಚಿಸಿದ್ದಾರೆ. ತುಂಬಾ ಮಹತ್ವದ ಪ್ರಶ್ನೆಗಳನ್ನು ಪರಿಚಯಿಸುತ್ತಲೇ ಸರಳವಾದ ರೀತಿಯಲ್ಲಿ ನಿರೂಪಿಸಿ ಉತ್ತಮ ಪ್ರವೇಶಿಕೆ ಒದಗಿಸಿದ್ದಾರೆ. ಇವರಿಗೆ ಕನ್ನಡ ವಿಶ್ವವಿದ್ಯಾಲಯದ ಪರವಾಗಿ ವಿಶೇಷ ಕೃತಜ್ಞತೆಗಳು
– ಬಿ. ಎ. ವಿವೇಕ ರೈ ಕುಲಪತಿ
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.