SKU: 17998

ಶಿಲ್ಪಕಲಾ ದೇವಾಲಯಕ್ಕೆ ದಾರಿ

220.00

Book Details
Author : ಶ್ರೀನಿವಾಸ ಮೂರ್ತಿ ಎನ್ ಎಸ್
Publisher : ಕದಂಬ ಪ್ರಕಾಶನ

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ಭಾರತೀಯರಾದ ನಮ್ಮ ಪಾಲಿಗೆ ದೇವಾಲಯಗಳು ಜೀವನಮಾರ್ಗಕ್ಕೆ ಅವಶ್ಯಕವಾದ ಶ್ರದ್ಧಾಕೇಂದ್ರಗಳಾಗಿವೆ. ದೇವಾಲಯಗಳು ಸಮಾಜ-ಸಂಸ್ಕೃತಿ ಇತಿಹಾಸ-ಧರ್ಮ ಕ್ಷೇತ್ರಗಳಿಗೆ ಅಪಾರವಾದ ಕೊಡುಗೆಯನ್ನು ನೀಡುತ್ತಾ ನಮ್ಮೊಟ್ಟಿಗೆ ಸಾಗಿ ಬಂದಿವೆ. ಇವುಗಳ ಆಳ-ವೈಶಾಲ್ಯಗಳ ಬಗೆಗೆ ಚಿಂತನ-ಮಂಥನಗಳೂ ನಡೆದುಕೊಂಡು ಬಂದಿವೆ. ಅಲಯಗಳ ಬಗೆಗಿನ ನಮ್ಮ ಶ್ರವಣಾತ್ಮಕ ಅರಿವಿಗಿಂತ ಮಿಗಿಲಾಗಿ ಅವುಗಳನ್ನು ಕಣ್ಣುಂಬ ಕಂಡು ಮಾನಸಿಕ ಸಂತೋಷ-ಸಮಾಧಾನ-ಶಾಂತಿಗಳನ್ನು ಪಡೆಯಬೇಕೆಂದು ನಾವು ಸದಾ ಹಂಬಲಿಸುತ್ತೇವೆ.
ದೇವಾಲಯಗಳನ್ನು ವಿಭಿನ್ನವಾದ ದೃಷ್ಟಿಯಿಂದ ಕಂಡು, ಅವುಗಳನ್ನು ಸಾಮಾನ್ಯ ಜನರಿಗೆ ಪರಿಚಯಿಸುವ, ಹತ್ತಿರ ತರುವ ಕಾರ್ಯವನ್ನು ನಮ್ಮ ವಿದ್ವಾಂಸರು, ನಡೆಸಿಕೊಂಡು ಬಂದಿದ್ದಾರೆ. ಇದರಿಂದಾಗಿ ನಮಗೆ ಆಲಯಗಳು ನಡೆದುಬಂದ ದಾರಿ, ಅವುಗಳ ಇಂದಿನ ಸ್ಥಿತಿಗತಿ, ಅದರ ಸುಧಾರಣೆಗೆ ನಾವು ಮಾಡಬೇಕಾದ ಪ್ರಯತ್ನಗಳ ಅರಿವು ಮೂಡುತ್ತದೆ. ಇವೆಲ್ಲವೂ ನಮ್ಮ ಅಧ್ಯಾತ್ಮ ಬದುಕನ್ನು ಗಟ್ಟಿಗೊಳಿಸುತ್ತಾ ಸಾಗುತ್ತದೆ ಎಂದು ಹೇಳಬಹುದು. ದೇವಾಲಯಗಳನ್ನು ತಮ್ಮ ಚಿತ್ರ-ಸಾಹಿತ್ಯಗಳೆರಡರ ಮೂಲಕ ಪರಿಚಯಿಸುತ್ತ ನಮ್ಮೊಂದಿಗೆ ಮುಂಚೂಣಿಯಲ್ಲಿರುವವರು ಎನ್.ಎಸ್. ಶ್ರೀನಿವಾಸಮೂರ್ತಿ ಅವರು
ಶ್ರೀನಿವಾಸಮೂರ್ತಿ ಎನ್‌ಎಸ್. ಇವರ ಲೇಖನಗಳು, ಅತ್ಯುತ್ತಮ ಚಿತ್ರಗಳು, ಕೃತಿಗಳ ಅಲ್ಪವಾದ ಅರಿವನ್ನು ನಾನು ಹೊಂದಿರುವೆನಾದರೂ ಅವರನ್ನು ಒಂದಷ್ಟು ಸುದೀರ್ಘವಾದ ಸಮಯದೊಂದಿಗೆ ಕಂಡು ಮುಕ್ತವಾಗಿ ಮಾತನಾಡುವ ಅವಕಾಶವು ಇಲ್ಲಿಯವರೆಗೆ ದೊರೆತಿರಲಿಲ್ಲ ‘ಹವ್ಯಾಸಿ ವೀಕ್ಷಣಾ ಬಳಗದ ಪ್ರವಾಸದ ಸಂದರ್ಭದಲ್ಲಿ ಅವರ ಮತ್ತು ನನ್ನ ನಡುವಿನ ಸಂಬಂಧವು ಗಟ್ಟಿಗೊಂಡಿದೆ ಎಂದು ಹೇಳಬಲ್ಲವನಾಗಿದ್ದೇನೆ. ಶ್ರೀಯುತರು ಅಲಯಗಳ ಇತಿಹಾಸ, ಧರ್ಮ, ಸಾಂಸ್ಕೃತಿಕ ಸದಭಿರುಚಿಯನ್ನು ತಮ್ಮ ಕ್ಯಾಮರಾದ ಕಣ್ಣಿನಲ್ಲಿ ನಮಗೆ ಪಾರದರ್ಶಕ ರೀತಿಯಲ್ಲಿ ದರ್ಶಿಸುತ್ತಿರುವುದು ನಮ್ಮ ಸೌಭಾಗ್ಯವೇ ಆಗಿರುತ್ತದೆ.
ಶ್ರೀನಿವಾಸಮೂರ್ತಿ ಅವರು ದೇವಾಲಯಗಳನ್ನು ಕುರಿತಾಗಿ ರಚಿಸಿರುವ ಅಂಕಣ ಬರಹಗಳು, ಅವರ ಕೃತಿಗಳು ಇನ್ನಿತರ ಬರಹಗಳೆಲ್ಲವೂ ‘ಚಿತ್ರಸಾಹಿತ್ಯದಿಂದ ತುಂಬಿರುತ್ತವೆಂದು ಹೇಳಬಹುದಾಗಿದೆ. ಅವರ ಕ್ಯಾಮರವು ಮನೋಹರವಾದ ದೃಶ್ಯಗಳನ್ನು ಹರಿತವಾದ ಹದದಲ್ಲಿ ಶೂಟ್ ಮಾಡಬಲ್ಲದ್ದಾಗಿದೆ. ಇದರಿಂದ ನಮಗೆ ಒಂದು ಅಲಯದ ನಿರ್ದಿಷ್ಟ ವಾಸ್ತುಸ್ಥಿತಿಗಳು, ಅಲ್ಲಿನ ಕಲಾಸೌರಭ, ಮೂರ್ತಿಶಿಲ್ಪಗಳ ನಿರ್ದಿಷ್ಟತೆಗಳು ನಮ್ಮ ಒಳಗಣ್ಣನ್ನು ಮುಟ್ಟುತ್ತವೆ. ದೇವಾಲಯಗಳ ಬಗೆಗೆ ಅಪಾರವಾದ ಒಲವು, ಅಭಿಮಾನಗಳನ್ನು ಹೊಂದಿರುವ ಯಾರಿಗಾದರೂ ಇವರ ಚಿತ್ರನಡಿಗೆಯು ದೇವಾಲಯಗಳನ್ನು ಕಾಣುವ ದಿಕ್ಕನ್ನೇ ಬದಲಾಯಿಸುತ್ತವೆ.
ಅವರು ಇದೀಗ ದೇವಾಲಯಗಳನ್ನು ಕುರಿತಾದ ಸಹೃದಯ ಓದುಗರಿಗೆ ತಮ್ಮ ಏಳನೆಯ ವಿಶಿಷ್ಟ ಕೃತಿಯನ್ನು ತಲುಪಿಸುತ್ತಿದ್ದಾರೆ. ಹದಿನಾಲ್ಕು ಜಿಲ್ಲೆಗಳ ಐವತ್ತು ದೇವಾಲಯಗಳ ಹೂರಣ ತುಂಬಿರುವ ಇವರ ಇಲ್ಲಿನ ಕೃತಿಗೆ ‘ಬೆನ್ನುಡಿ’ಯನ್ನು ಬರೆಯುವ ಭಾಗ್ಯವು ನನಗೆ ಸಂದಿರುತ್ತದೆ. ಇಂತಹ ಅಪೂರ್ವವಾದ ಅವಕಾಶಕ್ಕೆ ನಾನು ಸಂಭ್ರಮಿಸುತ್ತಿದ್ದೇನೆ. ಶ್ರೀನಿವಾಸಮೂರ್ತಿಯವರಿಂದ ಮತ್ತಷ್ಟು ಕೃತಿಗಳು ಹೊರಬಂದು ನಮ್ಮ ದೇವಾಲಯ-ಸಂಸ್ಕೃತಿಯು ಎಲ್ಲೆಡೆ ಹರಡಲಿ ಎಂದು ಹಾರೈಸುತ್ತೇನೆ.

Rating This Book

Reviews

There are no reviews yet.

Be the first to review “ಶಿಲ್ಪಕಲಾ ದೇವಾಲಯಕ್ಕೆ ದಾರಿ”

Your email address will not be published. Required fields are marked *

Top Books