SKU: 2049

Shilpakala Devalayakke daari

350

ಲೇಖಕರು : Sri Srinivasmurthy N S

PUBLISHERS ADDRESS : IBH Prakashana # 18/1, 2nd main 2nd cross, N R Colony, Bangalaore-560004

Ph: 080-26676003

Email: ibhprakashana@gmail.com

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ನಾನು ಎನ್. ಎಸ್. ಶ್ರೀನಿವಾಸಮೂರ್ತಿಯವರನ್ನು ಈಗೆರಡು ವರ್ಷಗಳ ಹಿಂದೆ ಹುಂಚದಲ್ಲಿ ನಡೆದ ಇತಿಹಾಸ ಅಕಾದೆಮಿಯ ವಾರ್ಷಿಕ ಸಮ್ಮೇಳನದಲ್ಲಿ ಭೇಟಿ ಮಾಡಿದ್ದೆ. ಅದಕ್ಕೂ ಮೊದಲು ಫೋನ್ ನಲ್ಲಿ ಮಾತನಾಡಿದ್ದುಂಟು. ಮೃದು ಧ್ವನಿಯ. ಆದರೆ ಹೇಳುವ ವಿಷಯವನ್ನು ಸ್ಪಷ್ಟವಾಗಿ ತಿಳಿಸುವ ಅವರೊಡನೆ ಹಲವಾರು ಶೈಲಿಗಳ ಬಗ್ಗೆ, ಆನೇಕ ಐತಿಹಾಸಿಕ ಸಂಗತಿಗಳ ಬಗ್ಗೆ ಮಾತನಾಡಿದ್ದುಂಟು ವಿಶೇಷತ: ಕಾಳಾಮುಖ ಪಂಥ ಹಾಗೂ ಕಾಲಭೈರವನ ವಿಷಯಗಳನ್ನು ಕುರಿತಂತೆ ಅವರೊಡನೆ ನಡೆಸಿದ ಮಾತುಕತೆ ನನಗೆ ಹೊಸ ಹೊಳಹುಗಳನ್ನು ತಂದುಕೊಟ್ಟಿರುವುದುಂಟು.

ಸಂಶೋಧನೆ, ವಿಜ್ಞಾನದಲ್ಲಿ ಜನಪ್ರಿಯ ವಿಜ್ಞಾನವೆಂಬ ವಿಭಾಗವಿದೆಯಷ್ಟೆ ಆದರಲ್ಲಿ ವೈಜ್ಞಾನಿಕ ವಿವರಗಳಿಗಿಂತ ಹೆಚ್ಚಿಗೆ, ವಿಜ್ಞಾನದಿಂದ ಒದಗುವ ಪ್ರಯೋಜನಗಳ ಬಗ್ಗೆ ಹೇಳಲಾಗುತ್ತದೆ. ಶ್ರೀನಿವಾಸಮೂರ್ತಿಯವರ ಇತಿಹಾಸದ ಬರವಣಿಗೆ ಆದೇ ಶೈಲಿಯದು. ಇದನ್ನು ಜನಪ್ರಿಯ ಇತಿಹಾಸ ಎನ್ನಬಹುದು.

ಇತಿಹಾಸದ ಪ್ರಕಾರದಲ್ಲಿ ಕಳೆದೆರಡು ವತಕಗಳಿಂದ ಸಕ್ರಿಯರಾಗಿರುವ ಅವರು ವ್ಯಕ್ತಿಯಿಂದ ಬ್ಯಾಂಕ‌ರ್, ಪ್ರವೃತ್ತಿಯಿಂದ ಇತಿಹಾಸ ಆಸಕ್ತ ಅವರು ಜನರಿಗೆ ಸರಳವಾಗಿ ಇತಿಹಾಸವನ್ನು ತಿಳಿಸುವ ಕಾರ್ಯವನ್ನು ನಾಡಿನ ಹಲವಾರು ಪತ್ರಿಕೆಗಳಲ್ಲಿ 300 ಕ್ಕೂ ಅಧಿಕ ಲೇಖನಗಳ ಮೂಲಕ ತೃಪಿಸುವ ಕೆಲಸವನ್ನು ಮಾಡುತ್ತಿರುವರು.

ಶ್ರೀ ಶ್ರೀನಿವಾಸ ಮೂರ್ತಿ ಎನ್ ಎಸ್ ರವರು ಪ್ರಸಿದ್ದ ಗಣಿತ ಲೇಖಕರಾಗಿದ್ದ ಶ್ರೀ ಸೀತಾರಾಮ ರಾವ್ ಎನ್ ಎಸ್ ಅವರ ಪುತ್ರರಾಗಿದ್ದು ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರದಲ್ಲಿ ತಮ್ಮ ಆರಂಭಿಕ ವಿದ್ಯಾಭ್ಯಾಸ ಮುಗಿಸಿ ನಂತರ ಕುವೆಂಪು ವಿಶ್ವವಿಧ್ಯಾನಿಲಯದಲ್ಲಿ ಎಂ ಎಸ್ಸಿ ಸ್ನಾತಕೋತ್ತರ ಪದವಿ ಪಡೆದರು. ನಂತರ ನಾಲ್ಕು ವರ್ಷ ಅಂಚೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿ ಈಗ ಕಳೆದ 24 ವರ್ಷದಿಂದ ಕರ್ಣಾಟಕ ಬ್ಯಾಂಕಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೂಲತಹ ಶಿವಮೊಗದಲ್ಲಿ ನೆಲಸಿದ್ದು ಪ್ರಸ್ತುತ ಕಾರ್ಯ ನಿರ್ಮಿತ್ತ ಬೆಂಗಳೂರಿನ ಪ್ರಾದೇಶಿಕ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಫೇಸ್ ಬುಕ್ ಮಾಧ್ಯಮವನ್ನೂ ಅವರು ಚೆನ್ನಾಗಿ ಬಳಸುತ್ತಿರುವರು. ಅಂಡಿಯನ್ ಮಾನ್ಯುಮೆಂಟ್ಸ್ ಎಂಬ ಅವರ ಫೇಸ್ ಬುಕ್ ಪುಟ ತುಂಬ ಜನಪ್ರಿಯವಾಗಿದೆ.

ಶಂಕರ ಅಜ್ಜಂಪುರ

ಸಂಪಾದಕ

ಇವರು ನಮ್ಮ ಇತಿಹಾಸ ತಜ್ಞರು ಮಾಲಿಕೆ

Rating This Book

Reviews

There are no reviews yet.

Be the first to review “Shilpakala Devalayakke daari”

Your email address will not be published. Required fields are marked *

Top Books