SKU: 13009

ಸಂತೇಬೆನ್ನೂರು ಪರಿಸರದ ಸಾಂಸ್ಕೃತಿಕ ಚಹರೆಗಳು

165.00

Author: ಷಕೀಬ್ ಎಸ್ ಕಣದ್ಮನೆ

Publishers Name: ಉನ್ನತಿ ಪ್ರಕಾಶನ.

Out of stock

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ಕರ್ನಾಟಕದಲ್ಲಿ ಪ್ರತಿಯೊಂದು ಹಳ್ಳಿಗಳು ತನ್ನದೇ ಆದ ಸಾಂಸ್ಕೃತಿಕ ಚಹರೆಗಳನ್ನು ಉಳಿಸಿಕೊಂಡು ಬಂದಿದೆ. ಇದರಲ್ಲಿ ದಾವಣಗೆರೆ ಜಿಲ್ಲೆಯ ಸಂತೇಬೆನ್ನೂರು ಪರಿಸರವು ತನ್ನದೇ ಆದ ಸಂಸ್ಕೃತಿಗಳನ್ನು ಹೊಂದಿದೆ. ‘ಸಂತೇಬೆನ್ನೂರು ಪರಿಸರದ ಸಾಂಸ್ಕೃತಿಕ ಚಹರೆಗಳು’ ಎಂಬ ಈ ಕೃತಿಯಲ್ಲಿ ಯುವ ಸಾಹಿತಿ ‘ಕನ್ನಡ ಸಾಂಸ್ಕೃತಿಕ ಗತವೈಭವ ಅಕಾಡೆಮಿ’ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ, ಸಾಮಾಜಿಕ ಸೇವೆಯ ಜೊತೆಗೆ ಕನ್ನಡ ಸಾಹಿತ್ಯ ಸೇವೆ ಮಾಡುತ್ತಿರುವ ಡಾ. ಷಕೀಬ್ ಎಸ್ ಕಣದ್ದನೆ ಅವರು ಸಂತೇಬೆನ್ನೂರು ಪರಿಸರದ ಆಚರಣೆ, ಹಬ್ಬ, ಜಾತ್ರೆ, ಕೃಷಿ, ಪಶುಸಂಗೋಪನೆ, ವಾಸ್ತುಶಿಲ್ಪ, ಜನಪದ ಕಲೆ, ಜನಪದರ ನಂಬಿಕೆಗಳನ್ನು ಅನಾವರಣ ಮಾಡಿರುವ ಒಂದು ವಿಶಿಷ್ಟ ಕೃತಿಯಾಗಿದೆ. ಈ ಕೃತಿಯಲ್ಲಿ ಡಾ. ಷಕೀಬ್ ಅವರ ಶ್ರಮ, ಏಕಾಗ್ರತೆ ಮತ್ತು ಕ್ಷೇತ್ರಕಾರ್ಯದ ದಕ್ಷತೆ ಎದ್ದು ಕಾಣುತ್ತದೆ. ಹಾಗೆಯೇ ಈ ಪುಸ್ತಕವು ಸಂಸ್ಕೃತಿಯಿಂದ ಭಿನ್ನವಾದಂತಹ ಕಲೆಯಾಗಿರದೆ. ಬದಲಿಗೆ ಮನುಷ್ಯನ ಬದುಕಿನೊಂದಿಗೆ ಮೂಡಿ ಬಂದ ಜೀವಂತ ಕಲೆಯಾಗಿದೆ. ಆದುದರಿಂದಲೇ ಈ ಜನಪದ ಸಂಸ್ಕೃತಿಗಳು ನಮ್ಮ ಪ್ರಸ್ತುತ ಸಂಸ್ಕೃತಿಯ ಪ್ರತೀಕವೂ ಹೌದು. ವೈವಿಧ್ಯತೆಯ ಸೂಚಕವೂ ಹೌದು. ಈ ನಿಟ್ಟಿನಲ್ಲಿ ಇಂತಹ ಪ್ರಾದೇಶಿಕ ಸಾಂಸ್ಕೃತಿಕ ಅಧ್ಯಯನಗಳು ಪ್ರತಿ ಗ್ರಾಮ ಮತ್ತು ಹಳ್ಳಿಗಳಲ್ಲಿ ನಡೆಯಬೇಕಿದೆ.

ಡಾ. ಜಯರಾಮಯ್ಯ ವಿ.

ಪ್ರಾಧ್ಯಾಪಕರು

ದಾವಣಗೆರೆ ವಿಶ್ವವಿದ್ಯಾನಿಲಯ

ಶಿವಗಂಗೋತ್ರಿ, ದಾವಣಗೆರೆ

Rating This Book

Reviews

There are no reviews yet.

Be the first to review “ಸಂತೇಬೆನ್ನೂರು ಪರಿಸರದ ಸಾಂಸ್ಕೃತಿಕ ಚಹರೆಗಳು”

Your email address will not be published. Required fields are marked *

Top Books