+918310000414
contact@kannadabookpalace.com
+918310000414
contact@kannadabookpalace.com
₹110.00 Original price was: ₹110.00.₹100.00Current price is: ₹100.00.
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಭುವನೇಶ್ವರಿ ರು. ಅಂಗಡಿ ಅವರು ಭರವಸೆಯ ಬರಹಗಾರ್ತಿ, ಸಾಹಿತ್ಯ ವಲಯದ ಪ್ರವೇಶ ಇತ್ತೀಚಿನದಾದರೂ ಹತ್ಯಯುತ ಸಂಗತಿಗಳನ್ನು ಕುಶಲತೆಯಿಂದ ಹೆಣೆಯುವ ಚೌಶಲ್ಯ ಸಿದ್ಧಿಸಿದೆ. ‘ಕಪ್ಪಜಿಪ್ಪಿನೊಳಗಿನ ಮುತ್ತು’ ಹಾಗೂ ‘ಸೈದಿಲೆ ನಗು’ವಿನ ಮೂಲಕ ಕಾವ್ಯ ಪ್ರಪಂಚಕ್ಕೆ ಪರಿಚಯಿಸಿ ಕೊಂಡಿದ್ದಾರೆ. ‘ಪಡಿಯಷ್ಟು’ ಎಂಬುದು ಇತ್ತೀಚಿನ ಕೃತಿಯಾಗಿದ್ದು, ಲೇಖನಗಳನ್ನು ಕೂಡ ಬರೆಯಬಲ್ಲೆ ಎಂಬುದನ್ನು ತೋರಿಸಿದ್ದಾರೆ. ಶಿಕ್ಷಕಿಯಾಗಿರುವ ಇವರಿಗೆ ಮಕ್ಕಳ ಒಡನಾಟ ಒಡಲ ತುಂಬಾ ಅನುಭವಗಳನ್ನು ಕಚ್ಚಿಕೊಳ್ಳಿದೆ. ತರಗತಿಯ ಕೋಣೆಯ ಸಂದರ್ಭ, ಶಾಲೆಯ ಸನ್ನಿವೇಶ, ಮಕ್ಕಳ ಅಭಿಪ್ರಾಯಗಳು, ಅವರ ಕೌಟುಂಬಿಕ, ಸಾಮಾಜಿಕ ಹಿನ್ನೆಲೆಗಳು ಶಿಕ್ಷಕನಾದವನಿಗೆ ಅಗಾಧವಾದ ಆಲೋಚನೆಗಳನ್ನು ಕಬ್ಬಿಕೊಡುತ್ತವೆ. ಮಕ್ಕಳ ಮನಸ್ಸಿನ ಭುವನೇಶ್ವರಿಯವರು ಇಂತಹ ಸಂಗತಿಗಳನ್ನು ವಿಷಯ ವಸ್ತುವನ್ನಾಗಿಸಿಕೊಂಡು ರಸವತ್ತಾಗಿ ಚಿತ್ರಿಸುವುದರ ಜೊತೆಗೆ ತೌಲನಿಕವಾಗಿ ಶಿಕ್ಷಣ ವ್ಯವಸ್ಥೆಯನ್ನು ನೋಡುವ ಪ್ರಯತ್ನವನ್ನು ಇಲ್ಲಿಯ ಲೇಖನಗಳಲ್ಲಿ ಮಾಡಿದ್ದಾರೆ ಪ್ರತಿಯೊಂದು ಶಾಲೆಯ ಸನ್ನಿವೇಶ. ಮತ್ತು ಮಕ್ಕಳ ಕಲಿಕೆಯ ಮಾರ್ಗ ವಿಜನ್ಯವಾಗಿರುವುದರಿಂದ ಸಾರ್ವತ್ರಿಕವಾಗಿ ಒಂದೇ ಸಿದ್ಧಾಂತದ ರೂಪಣೆ ಸಾಧುವಲ್ಲ ಶಾಲಾ ಸನ್ನಿವೇಶದ ಅನೇಕ ವೈರುಧ್ಯಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಅಕ್ಷರ ತೋರಣ ಕಟ್ಟಿದ್ದಾರೆ. ಪ್ರತಿ ಸಾಲುಗಳಲ್ಲಿ ಮಕ್ಕಳ ಕಾಳಜಿ ಎದ್ದು ಕಾಣುತ್ತದೆ.
ಮಕ್ಕಳ ಕಲಿಕೆಯ ಬಲವರ್ಧನೆಗೆ ಲಭ್ಯವಿರುವ ಶಿಕ್ಷಣದ ಸೌಲಭ್ಯಗಳು, ಪಠ್ಯ ಹಾಗೂ ಪಕ್ಷೇತರ ಚಟುವಟಿಕೆಗಳು, ಗೃಹಪಾರ. ಬಾಲ್ಯವಿವಾಹ, ಹೆಣ್ಣು ಮಕ್ಕಳ ಶಿಕ್ಷಣ ಹೀಗೆ ಮಕ್ಕಳ ಬಾಲ್ಯ, ಶಿಕ್ಷಣ, ಶಾಲೆ ಇವುಗಳ ಸುತ್ತಮುತ್ತಲಿನ ಸಂಗತಿಗಳನ್ನು ಅಕ್ಷರಗಳ ಮೂಲಕ ಎರಕಹೊಯ್ದು ಓದುಗರು ಬಿ೦ದಿಸುವಂತೆ ಮಾಡುವಲ್ಲಿ ಇಲ್ಲಿಯ ಲೇಖನಗಳು ಯಶಸ್ವಿಯಾಗಿವೆ.
ತನ್ನ ಕಾರ್ಯಕ್ಷೇತ್ರದ ಒಳರಗನ್ನು ವಿಮರ್ಶಿಸುವ ಮತ್ತು ಹೊಸ ಹೊಳಹುಗಳನ್ನು ರೂಪಿಸುವ ಹಿನ್ನೆಲೆಯಲ್ಲಿ ಶಿಕ್ಷಕ ಪದಾ ಕ್ರಿಯಾಶೀಲನಾಗುವ ಅವಶ್ಯಕತೆ ಇದೆ. ಇದನ್ನು ಅರ್ಥ ಮಾಡಿಕೊಂಡಿರುವ ಭುವನೇಶ್ವರಿಯವರು ಶಾಲೆಯನ್ನು ಮಕ್ಕಳ ಪರವಾಗಿಸುವ ನಿಟ್ಟಿನಲ್ಲಿ ಕಾರ್ಯತತ್ಪರರಾಗಿದ್ದಾರೆ. ಮಕ್ಕಳು ಹಾಗೂ ಶಿಕ್ಷಣ ಬಗೆಗಿನ ನೋಟ ಇನ್ನಷ್ಟು ವಿಸ್ತಾರಗೊಂಡು ಇನ್ನಷ್ಟು ಲೇಖನಗಳು ಹೊರಬಂದು ಬೆಳಗಲಿ ಎಂದು ಆಶಿಸುತ್ತೇನೆ.
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.