+918310000414
contact@kannadabookpalace.com
+918310000414
contact@kannadabookpalace.com
₹150.00
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಡಾ. ದೊರೇಶ ಇವರು ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸರ್ಕಾರಿ ಸೇವೆಗೆ ಸೇರಿ ವೃತ್ತಿ ಬದುಕಿನಲ್ಲಿ ಬೋಧನೆಯ ಜೊತೆಗೆ ಬರವಣಿಗೆ ಮತ್ತು ಸಂಘಟನಾ ಕಾರ್ಯಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಬಹುರೂಪ, ನಿರ್ವಚನ, ಕದ್ರ ಮತ್ತು ಇತರ ಕಥೆಗಳು, ಅಲೆಮಾರಿಯ ಜಾಡು ಕೃತಿಗಳನ್ನು ಪ್ರಕಟಿಸಿದ್ದಾರೆ. ಸುಮಾರು ಅನೇಕ ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಕರಾಗಿ, ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದಾರೆ. ಸಂಶೋಧನಾ ಲೇಖನಗಳನ್ನು ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ. ಕುವೆಂಪು ಓದು, ಬೇಂದ್ರೆ ಕಾವ್ಯ ರಸಗ್ರಹಣ ಶಿಬಿರ, ಕನಕ ನಡೆ ನುಡಿ ಕಾರ್ಯಗಾರ, ಗಾಂಧಿ ಮತ್ತು ಯುವಜನತೆ ಕಾರ್ಯಗಾರ,ಯು.ಜಿ.ಸಿ ಸಹಯೋಗ ದೊಂದಿಗೆ ಎರಡು ದಿನದ ರಾಷ್ಟ್ರೀಯ ವಿಚಾರ ಸಂಕಿರಣ, ಚಲನಚಿತ್ರ ಅಕಾಡೆಮಿ, ಬೆಂಗಳೂರು ಸಹಯೋಗದೊಂದಿಗೆ ಮೂರು ದಿನಗಳ ಸಿನಿಮೋತ್ಸವ ಕಾರ್ಯಕ್ರಮ… ಹೀಗೆ ಹಲವು ಸಂಘಸಂಸ್ಥೆಗಳ ಸಹಯೋಗದೊಂದಿಗೆ 70ಕ್ಕೂ ಅಧಿಕ ವಿಶೇಷ ಉಪನ್ಯಾಸ ಕಾರ್ಯಕ್ರಮಗಳ ಸಂಘಟಕರಾಗಿ ಆಯೋಜಿಸಿದ್ದಾರೆ. ಕಾಲೇಜು, ಸಂಘಸಂಸ್ಥೆ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪ್ರದಾನ ಉಪನ್ಯಾಸ ಮತ್ತು ಭಾಷಣಕಾರರಾಗಿ ವಿವಿಧ ವ್ಯಕ್ತಿ, ವಸ್ತು, ವಿಷಯವನ್ನು ಕುರಿತಂತೆ 200 ಕ್ಕೂ ಅಧಿಕ ಉಪನ್ಯಾಸವನ್ನು ನೀಡಿದ್ದಾರೆ. ಶ್ರೀಯುತರು ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಡೂರಿನಲ್ಲಿ ಕನ್ನಡ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರು ಹಾಗೂ ನಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶ್ರೀ ವಿನಯ ಆರ್.ಕೆ. ಇವರು ಕನ್ನಡ ಸಹಾಯಕ ಪ್ರಧ್ಯಾಪಕರಾಗಿ ಸರ್ಕಾರಿ ಸೇವೆಗೆ ಸೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿಕಾಲಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನೇಕ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸಾಹಿತ್ಯಕ ಕಾರ್ಯಕ್ರಮಗಳನ್ನು ಸಂಘಟಿಸಿ ಆಯೋಜಿಸಿದ್ದಾರೆ. ಅಧ್ಯಾಪನ, ಬರವಣಿಗೆ ಮತ್ತು ಇನ್ನಿತರ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾಹಿತ್ಯದಲ್ಲಿ ವಿಶೇಷ ಒಲವನ್ನು ಹೊಂದಿರುವ ಇವರು ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಹಲವಾರು ಸಮ್ಮೇಳನ, ವಿಚಾರಸಂಕಿರಣಗಳಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸಿದ್ದಾರೆ. ಇವರ ಅನೇಕ ಸಂಶೋಧನಾ ಲೇಖನಗಳು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.