+918310000414
contact@kannadabookpalace.com
+918310000414
contact@kannadabookpalace.com
₹400.00 Original price was: ₹400.00.₹300.00Current price is: ₹300.00.
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಈ ಮೊದಲು ಈ ಕಾವ್ಯವನ್ನು ಪಿ. ಸುಬ್ರಾಯ ಭಟ್, ಡಾ.ಎಲ್.ಬಸವರಾಜು ಅವರು ಅರ್ಥೈಸಲು ಪ್ರಯತ್ನಿಸಿದ್ದರು. ಡಾ. ಮೈನುದ್ದೀನ್ ರೇವಡಿಗಾರ ಅವರು ರನ್ನನ ಕೃತಿಯನ್ನು ಅನ್ವಯಾ ನುಸಾರ ಅರ್ಥದೊಂದಿಗೆ ಪದ್ಯಾನುವಾದವನ್ನು, ಈ ಕೃತಿಯ ವಿಶೇಷತೆಯೆನ್ನುವ ಹಾಗೆ ‘ಹೊಸಗನ್ನಡ ಪದ್ಯರೂಪ’ ದಲ್ಲಿ ಹೆಣೆಯುವ ಪ್ರಯತ್ನ ಮಾಡಿದ್ದಾರೆ.
ಶಾಸನಗಳಿಗೆ ಪ್ರಾಚೀನ ಕೃತಿಗಳಿಗೆ ಹೊಸ ಅರ್ಥವಿವರಣೆ ಕೊಡುವ ಸಂಶೋಧನ ಕಾರ್ಯವನ್ನು ಹಿರಿಯ ವಿದ್ವಾಂಸರಾದ ಡಿ. ಎಲ್. ನರಸಿಂಹಾಚಾರ್. ಗೋವಿಂದ ಪೈ, ತೀನಂಶ್ರೀ, ಮುಗಳಿ, ಚಿದಾನಂದಮೂರ್ತಿ, ಎಂ.ಎಂ. ಕಲಬುರ್ಗಿ, ವೆಂಕಟಾಚಲಶಾಸ್ತ್ರಿ ಮುಂತಾದ ಹಿರೀಕರು ಆರಂಭಿಸಿ ಸಮರ್ಥ ಬುನಾದಿ ಹಾಕಿದರು. ಶಿವರುದ್ರಪ್ಪ, ಜಿ. ಎಸ್. ಸಿದ್ದಲಿಂಗಯ್ಯ, ಅ. ರಾ. ಮಿತ್ರ ಮುಂತಾದ ನೂರಾರು ಅಧ್ಯಾಪಕರು ಈ ಪಠ್ಯಗಳನ್ನು ತರಗತಿಗಳಲ್ಲಿ ಜೀವಂತಗೊಳಿಸಿ ವಿದ್ಯಾರ್ಥಿಗಳಿಗೆ ದಾಟಿಸಿದರು. ಈ ಕಾರ್ಯವನ್ನು ನಮ್ಮ ತಲೆಮಾರಿನ ಕನ್ನಡ ಅಧ್ಯಾಪಕರು-ಸಂಶೋಧಕರು ಹೇಗೆ ಮುಂದುವರೆಸಿದ್ದೇವೆ? ಈ ಪ್ರಶ್ನೆಯನ್ನು ಕೇಳಿಕೊಳ್ಳಬೇಕಿದೆ. ತರಗತಿಗಳಲ್ಲಿ ಪ್ರಾಚೀನಸಾಹಿತ್ಯ ಪಾಠಮಾಡುವ ಅಧ್ಯಾಪಕರೂ ಕಡಿಮೆಯಾಗುತ್ತಿದ್ದಾರೆ ಎಂಬ ಮಾತೂ ಕೇಳಿಬರುತ್ತದೆ. ಆದರೆ ಇದೇ ಸನ್ನಿವೇಶದಲ್ಲಿ ‘ಕವಿರಾಜಮಾರ್ಗ’ ವನ್ನು ಇಟ್ಟುಕೊಂಡು ದೇಶೀಪಠ್ಯದಲ್ಲಿ ಅಡಗಿರುವ ವಿಶ್ವಾತ್ಮಕ ಭಾಷೆಯನ್ನು ಶೋಧಿಸಲು ಶೆಲ್ಡನ್ ಲ್ಡನ್ ಪೋಲಾಕರಂತಹ ವಿದೇಶಿ ವಿದ್ವಾಂಸರು ಪ್ರಯತ್ನ ಮಾಡಿದ್ದಾರೆ. ಶಾಸನಗಳ ಭಾಷೆ ಮತ್ತು ಶಿಲ್ಪಿಗಳ ಮೇಲೆ ಇತಿಹಾಸಜ್ಞರಾದ ಎಸ್. ಶೆಟ್ಟರ್ ಅಪೂರ್ವ ಕೆಲಸ ಮುಗಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಮ್ಮ ತಲೆಮಾರಿನ ಕನ್ನಡ ಪ್ರಾಧ್ಯಾಪಕರಿಗೂ ಪ್ರಾಚೀನ ಪಠ್ಯಗಳ ಮೇಲೆ ಹೊಸ ವಿಶ್ಲೇಷಣೆ ವ್ಯಾಖ್ಯಾನ ಮಾಡುವ ಸವಾಲನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಬೇಕು. ಹೊಸ ದೃಷ್ಟಿಕೋನಗಳಲ್ಲಿ ಮರಳಿ ನಮ್ಮ ಅಭಿಜಾತ ಪಠ್ಯಗಳಿಗೆ ಹೋಗಲು ಸಾಧ್ಯವಾಗಬೇಕು. ಇಲ್ಲದಿದ್ದರೆ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ಹೊಡೆದಾಡಿ ಪಡೆದುದಕ್ಕೆ ಏನು ಅರ್ಥ? ಈ ದಿಸೆಯಲ್ಲಿ ರೇವಡಿಗಾರ ಅವರು ಮಾಡಿರುವ ಅನ್ವಯಾನುಸಾರದ ಯತ್ನಗಳು ಯಾವ ಬಗೆಯಲ್ಲಿ ಪ್ರಚೋದನೆ ಕೊಡುತ್ತವೆಯೊ ತಿಳಿಯದು. ಆದರೆ ಇಂತಹ ಯತ್ನಗಳು ತರಗತಿಗಳಲ್ಲಿ ಪಾಠಮಾಡುವವರಿಗೆ ಖಂಡಿತ ಕೈಪಿಡಿಯಂತೆ ನೆರವಾಗಬಲ್ಲವು. ಈ ಬಗೆಯ ಅರ್ಥವಿವರಣೆಯ ಕೃತಿಗಳು ಮೂಲಪಠ್ಯವನ್ನು ಓದುವ ಕುಶಲತೆ ಕಡಿಮೆಗೊಳಿಸುತ್ತವೆಯೇ ಎಂಬ ಶಂಕೆಯೂ ಸುಳಿಯುತ್ತದೆ. ಇಂತಹ ಪಾಂಡಿತ್ಯದ ಯತ್ನಗಳ ಪಾವಟಿಗೆ ಹತ್ತಿ ಸಂಶೋಧನೆಗೆ ಚಲಿಸಲು ನಮಗೆ ಸಾಧ್ಯವಾಗಬೇಕು. ವ್ಯಕ್ತಿಪ್ರಯತ್ನಗಳು ಸಮೂಹವನ್ನೂ ಸೆಳೆಯುವ ವಿದ್ಯಮಾನಗಳಾಗಬೇಕು.
Tag Best selling
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
ಚಂದ್ರಕಲಾ ಎಂ ಇಟಗಿಮಠ –
ಡಾ. ಮೈನುದ್ಧಿನ ರೇವಡಿಗಾರ ಅವರ ರನ್ನನ ಸಾಹಸ ಭೀಮ ವಿಜಯಂ
(ಗದಾಯುದ್ಧ) ಹೊಸಗನ್ನಡ ಪದ್ಯಾನುವಾದ ಹೊಸ ರೀತಿಯ ಅರ್ಥೈಸುವಿಕೆಗೆ ಅನ್ವಯಿಸಿ ಎಲ್ಲರಿಗೂ ಸರಳ ಸರಾಗವಾಗಿ ತಿಳಿಯುವಂತೆ ಹಳಗನ್ನಡ ಪದ್ಯವನ್ನು ರನ್ನನು ರಚಿಸಿರುವಂತೆಯೇ ರಚಿಸಿದ ಡಾ. ಮೈನುದ್ದಿನ ಅವರಿಗೆ ಅನಂತ ಧನ್ಯವಾದಗಳು. ಹಾಗೆಯೇ ಇದನ್ನುವುದುತ್ತ ಕುಳಿತರೆ ಹಾಗೆಯೇ ಓದಿಸಿ ಕೊಂಡು ಹೋಗುತ್ತದೆ ಇದರಲ್ಲಿ ಪ್ರಥಮ ಆವಾಸ ದ್ವಿತೀಯ ಆವಾಸ ವೆಂಬ ಹತ್ತು ಆವಾಸಗಳನ್ನೊಳಗೊಂಡಬಹಳಷ್ಟು ಅರ್ಥ ಪೂರ್ಣ ಹೊತ್ತಿಗೆಯಾಗಿದೆ ಪ್ರತಿಯೊಬ್ಬರೂ ಕೊಂಡು ಓದಲೇ ಬೇಕಾದ ಅಗತ್ಯ ಪುಸ್ತಕ ವೆಂಬುದು ನನ್ನ ಅನಿಸಿಕೆ.
🙏🏼🙏🏼
ಎಮ್ . ಸಿ. ನಡಗೇರಿ (verified owner) –
ರನ್ನ ಮಹಾ ಕವಿಯ “ಗದಾಯುದ್ಧ” ರನ್ನನ ಕಾವ್ಯ ಪ್ರತಿಭೆಗೆ ದಕ್ಕಿದ ಮಹಾಕಾವ್ಯ..! “ನೀರೊಳಗಿರ್ದು ಬೆಮರುತನುರುಗ ಪತಾಕಮ್”..! ರನ್ನನ ಕಾವ್ಯ ಪ್ರತಿಭೆ ಗರಿಗೆದರುತ್ತದೆ..!! ವ್ಯಾಸಭಾರತವನ್ನು ಸಿಂಹಾವಲೋಕನ ಕ್ರಮದಿಂದ ಇಡೀ ಮಹಾಭಾರತ ಕಥೆಯನ್ನು ಕಾವ್ಯದಲ್ಲಿ ಅವಲೋಕಿಸಿದ್ದಾನೆ..! ಈ ಕಾವ್ಯವನ್ನು ಇಂಗ್ಲೀಷಿಗೆ ಸೂಕ್ತವಾದ ರೀತಿಯಲ್ಲಿ ಅನುವಾದಿಸಿದರೆ.. ನೋಬೆಲ್ ಬಹುಮಾನ ಬರುತ್ತದೆ..!! ಈ ಕಾವ್ಯವನ್ನು ಈಗಾಗಲೇ ಪ್ರೊಫೆಸರ್ ತೀ.ನಂ. ಶ್ರೀಕಂಠಯ್ಯ ನವರು.. ಎಲ್. ಬಸವರಾಜ ಅವರು ಹಳಗನ್ನಡ ಗದಾಯುದ್ಧ ಕಾವ್ಯವನ್ನು ಸಂಗ್ರಹಿಸಿದ್ದಾರೆ.. ಪ್ರಾಚಾರ್ಯರಾಗಿರುವ ಕನ್ನಡ ಪ್ರಾಧ್ಯಾಪಕ ಡಾ. ಮೈನುದ್ದೀನ್ ರೇವಡಿಗಾರ ಸರ್ ಅವರು ಹೊಸಗನ್ನಡದಲ್ಲಿ ಸೆರೆ ಹಿಡಿದಿರುವುದು ಮಹದುಪ ಕರಿಸಿದಂತಾಗಿದೆ… ವೈಶಂಪಾಯನ ಸರೋವರದ ಮಹಾ ವರ್ಣನೆ ರಮ್ಯವಾಗಿ ಚಿತ್ರಿತವಾಗಿದೆ.. ಭೀಮನ ಗದೆಯ ಹೊಡೆತಕ್ಕೆ ದುರ್ಯೋಧನನ ತೊಡೆ ಮುರಿದು ಆತ ನೆಲಕ್ಕೆ ಅಪ್ಪಳಿಸಿದಾಗ ಸಿಟ್ಟಿನಿಂದ ಭೀಮ ದುರ್ಯೋಧನನ ಕಿರೀಟವನ್ನು ತನ್ನ ಬಲಗಾಲಿನಿಂದ ಒದ್ದಾಗ ಕೃಷ್ಣ ಅದಕ್ಕೆ ಆಕ್ಷೇಪವನ್ನು ಎತ್ತುತ್ತಾನೆ. ಚಕ್ರವರ್ತಿ ತೀರಿ ಹೋಗಿದ್ದಾನೆ.. ಆತನಿಗೆ ಅವಮಾನಿಸುವದು ಧರ್ಮ ಒಪ್ಪದು.. ಎಂದು ಹೇಳುವಲ್ಲಿ ಅನುಕಂಪ ಒತ್ತರಿಸಿ ಬರುತ್ತದೆ.. ಒಟ್ಟಿನಲ್ಲಿ ರನ್ನನ ಗದಾಯುದ್ಧ ಕಾವ್ಯವು ಕನ್ನಡ ಸಾರಸತ್ವ ಲೋಕದಲ್ಲಿ ಅಜರಾಮರವಾಗಿದೆ…! ಡಾ. ಮೈನುದ್ದೀನ ರೇವಡಿಗಾರ ಅವರು ಕಠಿಣ ಪದಗಳ ಅರ್ಥ ಕೊಡುವುದರ ಜೊತೆಗೆ ಹೊಸಗನ್ನಡದಲ್ಲಿ ಪದ್ಯಗಳನ್ನು ರಚಿಸಿ ಕೊಟ್ಟಿದ್ದಾರೆ. ಇದರಿಂದ ರನ್ನನ ಗದಾಯುದ್ದವನ್ನು ಸುಲಭವಾಗಿ ಓದಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
ಸುರೇಶ ಎಲ್.ರಾಜಮಾನೆ (verified owner) –
ಡಾ. ಮೈನುದ್ದಿನ್ ರೇವಡಿಗಾರ ಅವರ ಸಾಹಸಭೀಮ ವಿಜಯಂ ಕೃತಿಯು ಜಗತ್ತಿಗೆ ಈಗಾಗಲೆ ಪರಿಚಯವಿರುವ ಗದಾಯುದ್ಧವೇ ಆದರೂ ಈ ಕೃತಿಯಲ್ಲಿ ತುಂಬಾ ಸರಳವಾಗಿ ಗದಾಯುದ್ಧವನ್ನು ಹೊಸಗನ್ನಡ ರೂಪದಲ್ಲಿ ಪರಿಚಯಿಸಿದ ಪದ್ಯಗಳು ರನ್ನನ ಕಾವ್ಯವನ್ನು ಅರಗಿಸಿಕೊಳ್ಳುವಲ್ಲಿ ತುಂಬಾ ಸಹಾಯಮಾಡುತ್ತವೆ. ಕನ್ನಡದಲ್ಲಿ ಇಂಥಹದ್ದೊಂದು ಪ್ರಯೋಗವಾಗಿರುವದು ಖುಷಿಯ ವಿಷಯ ಅದೂ ನಮ್ಮ ಬಾಗಲಕೋಟೆಯವರೇ ಮಾಡಿದ್ದು ಹೆಮ್ಮೆಯ ವಿಷಯ.