SKU: 13582

ರನ್ನನ ಹೊಸಗನ್ನಡ ಗದಾಯುದ್ಧ

Original price was: ₹150.00.Current price is: ₹140.00.

Author : ಡಾ. ಮೈನುದ್ದೀನ ರೇವಡಿಗರ

Publishers Name : ಹಂಬಲ ಪ್ರಕಾಶನ

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ಇಂತಹ ಕಾವ್ಯ ಅಥವಾ ಶಾಸ್ತ್ರಗ್ರಂಥಗಳನ್ನು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಇಳಿಸಿಕೊಳ್ಳುವಾಗ ಅನುವಾದಕರ ಹೊಣೆ ಗುರುತರವಾದುದು. ಮೂಲದ ಪದ್ಯಗಳ ತಿರುಳನ್ನು ಕಾಪಾಡುವುದಲ್ಲದೆ ಅವರಲ್ಲಿನ ಒಟ್ಟು ಸಾರಾಂಶ ಕೊಡುವುದಲ್ಲದೆ, ಅಲ್ಲಿನ ಶಬ್ದಗಳ ಹುರುಳನ್ನು ಹಿಡಿದಿಡಬೇಕು. ಇರುವುದನ್ನು ಬಿಡಕೂಡದು. ಇಲ್ಲದಿರುವುದನ್ನು ಸೇರಿಸಕೂಡದು, ಅತ್ಯುತ್ತಿ ಅಥವಾ ಅನುಕ್ತಿ ದೋಷಗಳಿಗೆ ಎಡೆಗೊಡ ದಿರಲು ಮೈನುದ್ದೀನರು ಎಚ್ಚರ ವಹಿಸಿದ್ದಾರೆಂಬುದು ಹೆಚ್ಚು ಮೆಚ್ಚುಗೆಗೆ ಅರ್ಹವಾಗುತ್ತದೆ.

‘ಗದಾಯುದ್ಧ’ ಹಳಗನ್ನಡದ ಸುಪ್ರಸಿದ್ಧ ಚಂಪೂ ಕಾವ್ಯ ಹಾಗೂ ರನ್ನನನ್ನು ಅಜರಾಮರಗೊಳಿಸಿದ ಮಹಾಕಾವ್ಯ ಅದನ್ನು ಮೈನುದ್ದೀನ ರೇವಡಿಗಾರರು ಇಂದಿನ ಜನಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಅವರು ಮಾಡಿರುವ ಈ ಬಗೆಯ ಅನುವಾದ ಸರಿಯೆ, ಸಾಧುವೆ ಎಂಬ ಕೇಳಿಗೆ ಉತ್ತರ ಕೊಡಬೇಕಾಗುತ್ತದೆ. ನನ್ನ ಅರಿವಿನ ಅಳತೆಯಲ್ಲಿ ಹೇಳುವುದಾದರೆ, ನಮ್ಮ ಪ್ರಾಚೀನ ಸಾಹಿತ್ಯವನ್ನು ಹೊಸಕಾಲಕ್ಕೆ ದಾಟಿಸಬೇಕಾದರೆ, ಇರುವ ಹಲವು ಹಾದಿಗಳಲ್ಲಿ ಇದು ಲೇಸು. ಜನರು ದಿನನಿತ್ಯ ವ್ಯವಹರಿಸುವ ಭಾಷೆಯನ್ನು ಅಳವಡಿಸಿ ದುಡಿಸಿಕೊಳ್ಳುವುದು ಸರಿ.

ಇಂಥ ಪದ್ಯಾನುವಾದಗಳು ನಮ್ಮ ಮಹತ್ವದ ಕಾವ್ಯಸಂಪತ್ತನ್ನು ಕಾಪಾಡಿ ಮುಂದಿನ ತಲೆಮಾರಿಗೆ ದಾಟಿಸುವ ಪ್ರಕ್ರಿಯೆಗೆ ಕಸುವು ತುಂಬುತ್ತವೆ. ಇದು ಈ ಪದ್ಯಾನುವಾದದ ಉಪಕಾರ, ಇದು ಮೈನುದ್ದೀನರ ಸಾಧನೆ ಹಾಗೂ ಸಾರ್ಥಕ ಪ್ರಯತ್ನದ ಫಲಕೃತಿ.

Rating This Book

Reviews

There are no reviews yet.

Be the first to review “ರನ್ನನ ಹೊಸಗನ್ನಡ ಗದಾಯುದ್ಧ”

Your email address will not be published. Required fields are marked *

Top Books

ಬದುಕಿನೊಳಗಿನ ಭಾವಗಳು

Original price was: ₹200.00.Current price is: ₹190.00.