+918310000414
contact@kannadabookpalace.com
+918310000414
contact@kannadabookpalace.com
Ph: 080-26702010
Email: hemanthasahitya@gmail.com
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಡಾ|| ಸಾಲಗಾಮೆ ವೆಂಕಟಸುಬ್ಬಯ್ಯ ರಂಗಣ್ಣ ಅವರು ಹುಟ್ಟಿದ್ದು 1898ರಲ್ಲಿ, ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಮತ್ತು ಮೈಸೂರು ಮಹಾರಾಜಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಇಂಗ್ಲಿಷ್ ಎಂ.ಎ. ಪದವಿಯಲ್ಲಿ ಮೊದಲ ರ್ಯಾಂಕ್ ಗಳಿಸಿ ಚಿನ್ನದ ಪದಕ ಪಡೆದು ಖ್ಯಾತರಾದವರು. ಬೆಂಗಳೂರು, ತುಮಕೂರು ಮತ್ತು ಮೈಸೂರುಗಳಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, 1955ರಲ್ಲಿ ನಿವೃತ್ತರಾಗುವಾಗ ಮೈಸೂರು ಮಹಾರಾಜ ಕಾಲೇಜಿನ ಪ್ರಾಂಶುಪಾಲರಾಗಿ ಖ್ಯಾತರಾದವರು. ಬಹುಮುಖ ಪ್ರತಿಭೆಯ ರಂಗಣ್ಣನವರು ಅಧ್ಯಾಪಕ ವೃತ್ತಿಯ ಜೊತೆ ಜೊತೆಗೆ ಸೌಟಿಂಗ್‌ನಲ್ಲಿ ಅತ್ಯುಚ್ಚ ಪ್ರಶಸ್ತಿಯಾದ ‘ರಜತ ಗಜ’ ಪಡೆದು ಗೌರವಿಸಲ್ಪಟ್ಟವರು. ಇವರ ವಿದ್ವತ್ತನ್ನು ಮೆಚ್ಚಿಕೊಂಡು ಮೈಸೂರು ವಿಶ್ವವಿದ್ಯಾನಿಲಯ 1970ರಲ್ಲಿ ಇವರಿಗೆ ಗೌರವ ಡಾಕ್ಟೋರೇಟ್ ಇತ್ತು ಸನ್ಮಾನಿಸಿತು, ಕನ್ನಡ ಸಾಹಿತ್ಯ ಪರಿಷತ್ತು 1976ರಲ್ಲಿ ಶಿವಮೊಗ್ಗ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಮಾಡಿ ಗೌರವ ಸಲ್ಲಿಸಿತು.
ಸಹಕಾರಿ ಬ್ಯಾಂಕಿಂಗ್ ಕ್ಷೇತ್ರಗಳಲ್ಲೂ ತಮ್ಮ ಅಪಾರ ಕೌಶಲ್ಯವನ್ನು ಮೆರೆದು, ಸಾಹಿತ್ಯ ಕ್ಷೇತ್ರದಲ್ಲಿ ವಿಮರ್ಶಾ ಕ್ಷೇತ್ರದಲ್ಲಿ ಕನ್ನಡ ಸಾಹಿತ್ಯಕ್ಕೊಂದು ಹೊಸ ಆಯಾಮ ಕಲ್ಪಿಸಿ ಕೊಟ್ಟವರು. ವಚನ ಸಾಹಿತ್ಯಕ್ಕೆ ಅವರು ನೀಡಿರುವ ಕೊಡುಗೆ ಅಪಾರ. “ಶೈಲಿ ವಚನಗಳ ರಂಗಣ್ಣ” ಎಂದೇ ಅನ್ವರ್ಥರಾದ ರಂಗಣ್ಣನವರು, ನಿವೃತ್ತರಾದ ನಂತರ ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟಿನ ಸಂಪಾದಕರಾಗಿ ಸೇವೆ ಸಲ್ಲಿಸಿದರು.
ಈಗ ನಾಲ್ಕನೆಯ ಆವೃತ್ತಿಯಾಗಿ ಹೊರ ಬರುತ್ತಿರುವ “ರಂಗಬಿನ್ನಪ” ರಂಗಣ್ಣನವರ ಕೃತಿ ರತ್ನ. ಇದಕ್ಕೆ 1965ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದು ಗೌರವಿಸಲ್ಪಟ್ಟಿದೆ.
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.