SKU: 16143

ರಣಧುರಂಧರ ಛತ್ರಪತಿ ಶಿವಾಜಿ

360.00

ಮಹಾರಾಜರ ಹತ್ತು ನಿರ್ಣಾಯಕ ಯುದ್ಧಗಳು ಮತ್ತು ಕಟ್ಟಕಡೆಯ ಯುದ್ಧ: ಒಂದು ವಿಶ್ಲೇಷಣೆ

Author : ಗುರುಪ್ರಸಾದ ಭಟ್

Publishers Name : ಯಾಜಿ ಪ್ರಕಾಶನ

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ಡಾ. ರಾಜ್‌ಕುಮಾರ್ ನಟಿಸಿರುವ ಹತ್ತು ಸರ್ವ ಶ್ರೇಷ್ಠ ಚಿತ್ರಗಳಾವುವು? ರಾಹುಲ್ ದ್ರಾವಿಡ್‌ನ ಹತ್ತು ಅತ್ಯುತ್ತಮ ಇನ್ನಿಂಗ್ಸ್ ಯಾವುವು? ಈ ಪರಿಯ ವಿಶ್ಲೇಷಣೆ ಚಲನಚಿತ್ರ ಹಾಗೂ ಕ್ರೀಡಾರಂಗಗಳಲ್ಲಿ ಸರ್ವೇಸಾಮಾನ್ಯ. ಆದರೆ ಇತಿಹಾಸದ ಓದಿನಲ್ಲಿ ಅಂತಹ ಅದ್ಭುತ ಸಂಶೋಧನಾತ್ಮಕ ಕೆಲಸವನ್ನು ನನ್ನ ಆತ್ಮೀಯ ಸ್ನೇಹಿತರಾದ ಗುರುಪ್ರಸಾದ್ ಭಟ್ ಅವರು ಈ ಕೃತಿಯಲ್ಲಿ ಮಾಡಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜ್ ೧೬೪೫ರಿಂದ ೧೬೮೦ರವರೆಗೆ ಕಾದಾಡಿದ ಯುದ್ಧಗಳ ಸಂಖ್ಯೆ, ಸುಮಾರು ೨೩೧. ಅವರ ಕಡೆಯ ಯುದ್ಧದ ಜೊತೆ ಇನ್ನೂ ಹತ್ತು ‘ನಿರ್ಣಾಯಕ’ ಯುದ್ಧಗಳನ್ನು ಅವುಗಳಲ್ಲಿ ಆರಿಸಿಕೊಂಡು, ಅತ್ಯಂತ ತಾರ್ಕಿಕವಾಗಿ ಹಾಗೂ ಸತ್ಯಾಧಾರಿತ ಮಾಹಿತಿಗಳ ಹಿನ್ನೆಲೆಯಲ್ಲಿ ಭಟ್ ನಮಗಿಲ್ಲ ನೀಡಿದ್ದಾರೆ. “ಇತಿಹಾಸವನ್ನು ಹೀಗೂ ಅರ್ಥೈಸಿಕೊಂಡರೆ ಎಷ್ಟು ಚೆನ್ನ” ಎಂದು ಇದನ್ನೋದುವ ನಿಮಗೆ ಅನ್ನಿಸದೇ ಇರದು! ಭಟ್ ಆರಿಸಿಕೊಂಡಿರುವ ಹತ್ತು ನಿರ್ಣಾಯಕ ಯುದ್ಧಗಳಲ್ಲಿ ಎರಡರಲ್ಲಿ ಶಿವಾಜಿಗೆ ತೀವ್ರ ಸೋಲುಂಟಾಗುತ್ತದೆ. ಗೆಲುವಿನ ಇನ್ನೆಂಟು ಯುದ್ಧಗಳ ಜೊತೆ ಸೋಲಿನ ಇವೆರಡನ್ನೂ ಒಟ್ಟು ಮಾಡಿರುವ ಅಂಶ, “ನಿರ್ಣಾಯಕ” ಎಂಬ ಪದಕ್ಕೆ ಭಟ್ ನೀಡಿರುವ ಅತ್ಯಂತ ವಸ್ತು ನಿಷ್ಠವಾದ ಹಾಗೂ ಗೌರವದ ಸಂಕೇತ.

ಯುದ್ಧ ನಡೆದದ್ದು ಏಕೆ? ಹೇಗೆ? ಬಳಸಿದ ಯುದ್ಧತಂತ್ರಗಳಾವುವು? ಫಲಾಫಲಗಳೆಂತು? ಗೆಲುವಿನಿಂದ ಗಳಿಸಿದ್ದೇನು? ಸೋಲಿನಿಂದ ಕಲಿತ ದ್ದೇನು? -ಹೀಗೆ ಈ ಕೃತಿ ಕೆಲವೇ ಕೆಲವು ನಿರ್ಣಾಯಕ ಯುದ್ಧಗಳ ಹಿನ್ನೆಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಒಟ್ಟು ವ್ಯಕ್ತಿತ್ವವನ್ನೇ ಕಟ್ಟಿಕೊಡುತ್ತದೆ. ಈ ನಿಟ್ಟಿನಲ್ಲಿ ಭಟ್ ಅವರ ಸಂಶೋಧನಾ ಪ್ರವೃತ್ತಿ ಹಾಗೂ ಶಿವಾಜಿಯ ಪರನಾದ ಶ್ರದ್ಧೆ-ಅನುಕರಣೀಯ ಹಾಗೂ ಶ್ಲಾಘನೀಯ. ಭರತಮಾತೆಯನ್ನು ಪೂಜಿಸುವ ಎಲ್ಲ ಸಜ್ಜನಬಂಧು ಗಳಿಗೂ ಶಿವಾಜಿಯ ಈ ಕದನಕಥನ ನಿಜಕ್ಕೂ ಪ್ರೇರಣಾದಾಯಕ…

Rating This Book

Reviews

There are no reviews yet.

Be the first to review “ರಣಧುರಂಧರ ಛತ್ರಪತಿ ಶಿವಾಜಿ”

Your email address will not be published. Required fields are marked *

Top Books