+918310000414
contact@kannadabookpalace.com
+918310000414
contact@kannadabookpalace.com
₹300.00
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಕಥೆಗಳ ರೂಪದಲ್ಲಿ ರುಕ್ಕಿಣಿ ಯವರು, ಹೊಸಗನ್ನಡದಲ್ಲಿ, ಸರಳ ಗದ್ಯದಲ್ಲಿ ಪ್ರಶೋತ್ತರಗಳನ್ನು ಪೂರ್ವ ಕಥೆಗಳನ್ನು ಒಳಗೊಂಡಂತೆ ‘ರಾಮಾಯಣ ಪರೀಕ್ಷಣಂ’ ಗ್ರಂಥವನ್ನು ಹೊಸ ಶೈಲಿಯಲ್ಲಿ ವಿದ್ಯಾರ್ಥಿಗಳಿಗೆ, ಸಾಮಾನ್ಯ ಓದುಗರಿಗೆ ಮನೋಹರ ಕಥೆಗಳ ಮೂಲಕ ನೀಡಿದ್ದಾರೆ.
-ಪ್ರೊ. ಜಿ. ಅಶ್ವತ್ಥನಾರಾಯಣ
ಸಾಹಿತಿಗಳು, ನಿವೃತ್ತ ಕನ್ನಡ ಪ್ರಾಧ್ಯಾಪಕರು
ಯಾವುದೇ ಒಂದು ಕೃತಿ, ಅದು ಧಾರ್ಮಿಕ, ಸಾಮಾಜಿಕ, ವೈಜ್ಞಾನಿಕ ಒ ಹೀಗೆ ಯಾವುದೇ ವಿಷಯಕ್ಕೆ ಸಂಬಂಧಿಸಿದ್ದಾಗಿರಲಿ. ಓದುಗರ ಮನಮುಟ್ಟುವಂತೆ ಅದನ್ನು ರಚಿಸುವುದು ಸುಲಭವಲ್ಲ. ಆ ನಿಟ್ಟಿನಲ್ಲಿ ಅನೇಕ ಕೃತಿಕಾರರು ಪ್ರಾಮಾಣಿಕ ಪ್ರಯತ್ನವನ್ನೇನೋ ಮಾಡುತ್ತಾರೆ. ಆದರೆ ಅದರಲ್ಲಿ ಎಲ್ಲರೂ ಸಫಲರಾಗುತ್ತಾರೆಂದು ಹೇಳಲಾಗದು. ಆ ಸಾಮರ್ಥ್ಯ ಸಿದ್ಧಿಸುವುದು ಅವರಲ್ಲಿ ಕೆಲವರಿಗೆ ಮಾತ್ರ ಶ್ರೀಮತಿ ರುಕ್ಕಿಣಿ ರಘುರಾಮ್ ಅವರ ಕೃತಿ ‘ರಾಮಾಯಣ ಪರೀಕ್ಷಣಂ’ ಅನ್ನು ಅವಲೋಕಿಸಿದಾಗ ಈ ನಿಟ್ಟಿನಲ್ಲಿ ಅವರು ನಿಶ್ಚಿತವಾಗಿ ಸಫಲರಾಗಿದ್ದಾರೆಂದು ನನಗೆ ಅನ್ನಿಸಿತು. ಕಾರಣ ಕೃತಿಯ ಕತ್ರ್ರುವೇ ಹೇಳುವಂತೆ ಡಿ.ವಿ.ಜಿ.ಯವರ ‘ಶ್ರೀರಾಮ ಪರೀಕ್ಷಣಂ’ನಿಂದ ಪ್ರಭಾವಿತವಾದ ಈ ಕೃತಿಯ ವಸ್ತುವನ್ನು ಕುರಿತ ಅವರ ನಿರೂಪಣೆ ಅಷ್ಟು ಪ್ರಭಾವಶಾಲಿಯಾಗಿದೆ. ಅದರಲ್ಲೂ ಭಾರತೀಯ ಸಂಸ್ಕೃತಿಯ ಮೇಲೆ ಮಹತ್ತರವಾದ ಪ್ರಭಾವವನ್ನು ಬೀರಿರುವ ರಾಮಾಯಣದ ವಿವಿಧ ಪಾತ್ರಗಳನ್ನು ಚಿನ್ನಿಸಲು ರುಕ್ಕಿಣಿ ಅವರು ಕಥಾರೂಪವನ್ನು ಬಳಸಿಕೊಂಡಿರುವುದು ಕೃತಿಯನ್ನು ಮತ್ತಷ್ಟು ಆಸಕ್ತಿದಾಯಕವನ್ನಾಗಿ ಮಾಡಿದೆ. ಇದರೊಂದಿಗೇ ರುಕ್ಕಿಣಿ ರಘುರಾಮ್ ಅವರ ಪುತ್ರ ಅರ್ಜುನ್ ನಿಟ್ಟೂರು ಕೃತಕ ಬುದ್ದಿಮತ್ತೆಯ ಬಳಕೆಯ ಮೂಲಕ ಈ ಕೃತಿಗಾಗಿ ಸಿದ್ಧಗೊಳಿಸಿರುವ ಚಿತ್ರಗಳ ಭಾವನಾತ್ಮಕ ಪ್ರಭಾವವು ‘ರಾಮಾಯಣ ಪರೀಕ್ಷಣಂ’ನ ಮೆರುಗು ಇಮ್ಮಡಿಯಾಗುವಂತೆ ಮಾಡಿದೆ. ಶ್ರೀಮತಿ ರುಕ್ಕಿಣಿ ರಘುರಾಮ್ ಅವರಿಂದ ನಮ್ಮ ಸಾಂಸ್ಕೃತಿಕ ಹಿರಿಮೆಯನ್ನು, ಅಸ್ಥಿತೆಯನ್ನು ಸಾರ್ವಜನಿಕರಿಗೆ ಸಮರ್ಥವಾಗಿ ಪರಿಚಯಿಸುವ ಮತ್ತಷ್ಟು ಕೃತಿಗಳು ಹೊರಬರಲಿ ಎಂದು ಆಶಿಸುತ್ತೇನೆ.
-ಡಾ. ಬಿ.ಆರ್. ಗುರುಪ್ರಸಾದ್
ನಿವೃತ್ತ ಇಸ್ರೋ ವಿಜ್ಞಾನಿ, ಲೇಖಕರು, ಪ್ರಸ್ತುತ ನೆಹರು ತಾರಾಲಯದ ನಿರ್ದೇಶಕರು
ರಾಮಾಯಣದ ಪಾತ್ರಗಳ ಅಂತರಂಗ ಹೊಕ್ಕು, ಆಲ್ಲೊಂದು ಸಂವಾದ ನಡೆಸಿದರೆ ಏನಾಗುತ್ತದೆ? ಏನಾಗುತ್ತದೆಯೆಂದರೆ ಇಂಥದ್ದೊಂದು ಕೃತಿ ಮೂಡಿಬರುತ್ತದೆ ಇದು ವಿಭಿನ್ನವೂ ಹೌದು, ವಿಶಿಷ್ಟವೂ ಕೂಡಾ. ಬಹಳ ಮುಖ್ಯ ಎನಿಸಿದ್ದು ರುಕ್ಕಿಣಿಯವರ ಸೂಕ್ಷ್ಮ ಸಂವೇದನೆ ಮತ್ತು ಸಕಾರಾತ್ಮಕ ದೃಷ್ಟಿಕೋನ. ಕೃತಿಕಾರನ ಮನಸ್ಸಿನಂತೆ ತಾನೇ ಕೃತಿ ಹಾಗಾಗಿ ಇದೊಂದು ಸಂವೇದನಾಪೂರ್ಣ ಕೃತಿಯಾಗಿ ಕಾಣಿಸಿಕೊಂಡಿದೆ.
ವಾಲ್ಮೀಕಿ ಹೇಳದ ಸನ್ನಿವೇಶಗಳು ಇಲ್ಲವೆ ಆದರೆ ಅವು ವಾಲ್ಮೀಕಿ ಹೇಳಿದ ಸನ್ನಿವೇಶಗಳನ್ನು ಆ ಸಮಯದಲ್ಲಿ ಇಲ್ಲದವರಿಗೆ ತಿಳಿಸಲು ಹುಟ್ಟಿಕೊಂಡಿದೆ. ಹಾಗಾಗಿ ಇದೊಂದು ಸ್ವತಂತ್ರ ಕೃತಿಯಾಗುತ್ತಲೇ ವಾಲ್ಮೀಕಿಯ ಮನೋಭಾವದ ವಿಸ್ತಾರವೂ ಆಗಿದೆ. ಈ ತಂತ್ರ ಅಸಾಧಾರಣವಾದದ್ದು. ಇದು ಹೊಸ ರಾಮಾಯಣ; ಆದರೆ ಹಳೆಯ ರಾಮಾಯಣದ ವಿಶಿಷ್ಟ ಅನುಸಂಧಾನ.
-ವಿದ್ವಾನ್- ಜಗದೀಶಶರ್ಮಾ ಸಂಪ
ಖ್ಯಾತ ಲೇಖಕರು
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.