+918310000414
contact@kannadabookpalace.com
+918310000414
contact@kannadabookpalace.com
₹100.00
| Book Deatils |
|---|
| Author : Kotresh, M. Javali |
| Publisher : Kappatgiri prakashana |
| Language : Kannada |
Timely Arrival: 4-8 Days to Your Doorstep
Safe and Secure: Your Payments Protected
Above order amount: 999
ಕೊಟ್ರೇಶ ಜವಳಿ ಅವರು ತಮ್ಮ ಮೊದಲ ಕವನ ಸಂಕಲ ಬಿಡುಗಡೆ ಮಾಡಿ ಓದುಗರ ಮನಗೆದ್ದು ಈಗ ಸ್ವರಚಿತ ಹನಿಗವನಗಳನ್ನು ಸಂಗ್ರಹಿಸಿ ಪುಸ್ತಕ ರೂಪ ನೀಡಲು ಮುಂದಾಗಿದ್ದಾರೆ. ಇವರು ಕೃಷಿಕರಾಗಿದ್ದು ಸಾಹಿತ್ಯದಲ್ಲಿ ಆಸಕ್ತಿ ಮೂಡಿರುವುದು ಹಳ್ಳಿಜೀವನಕ್ಕೆ ಹಿಡಿದ ಕನ್ನಡಿ. ಹಳ್ಳಿಗರು ತಮ್ಮ ಜೀವನವನ್ನೇ ಹಾಡಾಗಿಸಿಕೊಂಡಿರುತ್ತಾರೆ. ನೂರಾರು ಹಾಡುಗಳು ಬಾಯಿಪಾಠವಾಗಿರುತ್ತದೆ. ಜೊತೆಗೆ ತಾವೆ ಪದಗಳ ಕಟ್ಟಿ ಹಾಡುತ್ತಾರೆ. ಹಾಗಾಗಿ ಇವರಿಗೆ ಬರವಣಿಗೆ ಕವನ ರಚನೆ ಕಷ್ಟವೇನಿಲ್ಲ. ಸುಲಲಿತವಾಗಿ ಹೊಸಹೊಸ ಪದಪುಂಜಗಳ ಬಳಸಿ ಕವನಗಳ ರಚಿಸುತ್ತಾರೆ. ಜೊತೆಗೆ ಕವಿಗೋಷ್ಟಿಯಲ್ಲಿ ಭಾಗವಹಿಸುವುದು. ಅನೇಕ ಸಾಹಿತ್ಯ ಬಳಗದ ಸಾಹಿತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿರುತ್ತಾರೆ. ಇವರ ಬರಹಗಳಲ್ಲಿ ಪ್ರಾಂತೀಯ ಭಾಷಾ ಸೊಗಡು ಎದ್ದು ಕಾಣಿಸುತ್ತದೆ. “ರೈತನ ಬೆವರ ಹನಿಗಳು” ಹೆಸರು ಈ ಕೃತಿಗೆ ಸೂಕ್ತವಾಗಿದೆ. ದುಡ್ಡೆ ದೊಡ್ಡಪ್ಪ, ಲಜ್ಜಾಮಣಿ, ಕುರುಕ್ಷೇತ್ರ, ಸತ್ಯ ನ್ಯಾಯ ನೀತಿ, ಕಳೆದುಕೊಂಡ ಬಾಲ್ಯ, ಮ್ಯಾಲಿನ ಸಾಹೇಬದಂತ ಹನಿಗವನಗಳು, ಇತಿಹಾಸ, ಪುರಾಣ, ಮಹಾಭಾರತದ ವಿಷಯಗಳನ್ನು ತಮ್ಮ ಹನಿಗಳಲ್ಲಿ ಅಳವಡಿಸಿಕೊಂಡಿರುವುದು ಹೆಮ್ಮೆ ಎನಿಸುತ್ತದೆ. ಅಲ್ಲಲ್ಲಿ ತಿಳಿಹಾಸ್ಯ ಕೆಲವೆಡೆ ವಿಡಂಬನೆ, ಪ್ರಕೃತಿಯ ವರ್ಣನೆ ಎಲ್ಲವೂ ಸೊಗಸಾಗಿ ಮೂಡಿಬಂದಿದೆ. ಇನ್ನಷ್ಟು ಕೃತಿಗಳು ಬಿಡುಗಡೆಯಾಗಲಿ. ಓದುಗರು ಕೊಂಡು ಓದಲಿ. ನಿಮಗೆ ಶುಭಹಾರೈಕೆಗಳು.
ತುಳಸಿ ಭಟ್ (ಸಿಂಧು ಭಾರ್ಗವ, ಬೆಂಗಳೂರು)
ಸಂಪಾದಕರು, ಮಕ್ಕಳ ಕತೆಗಾರರು
ಸಂಸ್ಥಾಪಕರು ಬತ್ತದ ತೊರೆ ಸ್ನೇಹ ಬಳಗ, ಬೆಂಗಳೂರು
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2025 Kannada Book Palace All Rights Reserved
Reviews
There are no reviews yet.