+918310000414
contact@kannadabookpalace.com
+918310000414
contact@kannadabookpalace.com
₹120.00
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಭುವನೇಶ್ವರಿ ರು. ಅಂಗಡಿ ಅವರು ತಮ್ಮೂರು, ತಮ್ಮನೆ, ತಮ್ಮ ಸುತ್ತಮುತ್ತ ಕಂಡುಂಡ ಘಟನೆಗಳನ್ನು ಮತ್ತು ತಮ್ಮ ಅನುಭವಕ್ಕೆ ದಕ್ಕಿದ ಆಲೋಚನೆಗಳನ್ನು ವಾಸ್ತವದ ನೆಲೆಗಟ್ಟಿನಲ್ಲಿ ನಿಂತು ಅಕ್ಕರ ಹಂದರವನ್ನು ಸುಂದರವಾಗಿ ಕಟ್ಟಿಕೊಟ್ಟಿರುವುದರಿಂದ ಇದು ತುಂಬಾ ಭಿನ್ನ ಕೃತಿಯಾಗಿದೆ. ಈ ಕೃತಿಯ ಪಡಿಯಚ್ಚು’ ಇದ್ದಿದ್ ಇದ್ದಂಗೆ ತಲೆಬರಹವೇ ಹೇಳುವಂತೆ ಯಾವ ಮುಲಾಜಿಗೂ ಒಳಗಾಗದೇ “ದಾಕ್ಷಿಣ್ಯಪರ ನಾನಲ್ಲ, ನ್ಯಾಯ ನಿಷ್ಠುರಿ’ ಎನ್ನುವಂತೆ ಊರು ಬಿಟ್ಟು ಗುಳೆ ಹೋಗುವವರಿಗೆ ಬುದ್ಧಿಮಾತು ಹೇಳುತ್ತಾರೆ. ಹೆಂಡತಿಯನ್ನು ಸಾಕುತ್ತೇನೆ ಎನ್ನುವ ಗಂಡಸರಿಗೆ ಕಟು ಮಾತಿನಿಂದ ಟೀಕೆ ಮಾಡಿ ಚಾಟಿ ಬೀಸಿ ಹೆಣ್ಣಿನ ಹಿರಿತನವನ್ನು ಕಟ್ಟಿಕೊಟ್ಟಿರುವರು ಹಾಸ್ಟೆಲ್ ಅನ್ನು ಗುಡಿಗೆ ಹೋಲಿಸಿ ಅಲ್ಲಿ ಏನೆಲ್ಲಾ ಕಲಿಯಬಹುದು ಎನ್ನುವುದನ್ನು ಹೇಳುವಾಗ ಟೀಚರಂತೆ ಕಾಣುತ್ತಾರೆ. ಇಂದು ಹಬ್ಬ ಹರಿದಿನಗಳು. ಧರ್ಮ ಆಚರಣೆಗಳು ಎಷ್ಟೊಂದು ದಾರಿತಪ್ಪಿವೆ ಎಂಬುದನ್ನು ತೆರೆದಿಡುತ್ತಾ, ಹತ್ತಿಪ್ಪತ್ತು ವರುಷಗಳ ಹಿಂದೆ ಅವೆಲ್ಲಾ ಹೇಗಿದ್ದವು!! ಮನುಷ್ಯ ಸಂಬಂಧಗಳನ್ನು ಹೇಗೆ ಬೆಸೆದು ಗಟ್ಟಿಗೊಳಿಸುತ್ತಿದ್ದವು ಎಂಬುದನ್ನು ತುಲನೆ ಮಾಡಿ ಓದುಗರ ಮುಂದಿಡುತ್ತಾರೆ. ಇಲ್ಲಿ ಆಯ್ದುಕೊಂಡ ಇಪ್ಪತ್ತು ವಿಷಯಗಳಿಗೆ ನ್ಯಾಯ ಒದಗಿಸಿದ್ದಾರೆ. ಪ್ರತಿ ಲೇಖನದ ತಲೆಬರಹವನ್ನು ಓದುತ್ತಿದ್ದಂತೆ ಲೇಖನದ ಒಳಗೆ ಪ್ರವೇಶಿಸಲು ಮನಸು ಕಾತರಿಸುವಂತೆ ಆಕರ್ಷಕ ತಲೆಬರಹ ನೀಡುವಲ್ಲಿ ಲೇಣುಕಿ ಜಾಣ್ಯ ಮೆರೆದಿದ್ದಾರೆ. ಬರವಣಿಗೆಯಲ್ಲಿ ನಿಷ್ಟವಾದದ ಜೊತೆಗೆ ಆಪ್ತತೆಯೂ ಓದುಗನನ್ನು ಮುದಗೊಳಿಸುತ್ತದೆ. ಲೇಖಕಿ ಹಾಸ್ಟೆಲ್ ಅನುಭವ ಹೇಳುವ ವಿದ್ಯಾರ್ಥಿಯಾಗಿ, ರಜೆಯ ಗೋಳನ್ನು ಹೇಳುವ ಟೀಚರ್ ಆಗಿ, ಮಕ್ಕಳಿಗೆ ಒಳ್ಳೆಯ ಮಾರ್ಗ ನೀಡುವ ತಾಯಿಯಾಗಿ, ಊರ ಜನರಿಗೆ ಬುದ್ದಿ ಹೇಳುವ ಹಿರಿಯ ಯಜಮಾನಿಯಾಗಿ, ವಾಲಕಿಯಾಗಿ,, ಹೀಗೆ ಹಲವು ಪಾತ್ರಗಳಲ್ಲಿ ನಿಂತು ಇವರು ಮಾತನಾಡಿದಂತೆ ಅನುಭವ ಆಗುತ್ತದೆ. ಜಾಗತೀಕರಣದಿಂದ ಶ್ರೀಸಾಮಾನ್ಯನ ಬದುಕಿನ ತಲ್ಲಣಗಳನ್ನು ತಿಳಿಸುತ್ತಾ ವಿಷಾದಪಡುತ್ತಾರೆ. ರೋಷಗೊಳ್ಳುತ್ತಾರೆ. ಇಲ್ಲಿರುವ ಎಲ್ಲ ಲೇಖನಗಳಲ್ಲಿ ಸಮಾಜದ ಬಗ್ಗೆ ಇರುವ ಅಪಾರ ಕಾಳಜಿ ಮತ್ತು ಬದಲಾವಣೆಯ ತುಡಿತಗಳು ಎದ್ದು ಕಾಣುತ್ತವೆ. ಬರೆವಣಿಗೆಯ ಮೇಲೆ ಹಿಡಿತ ಸಾಧಿಸಿರುವ ಇವರ ಬರೆಹಗಳಲ್ಲಿ ಗ್ರಾಮೀಣ ಭಾಷೆಯ ಸೊಗಡಿನ ಕಂಪು ಇದೆ. ಹೀಗಾಗಿ ಪ್ರತಿ ಲೇಖನವೂ ಓದಿಸಿಕೊಂಡು ಹೋಗುತ್ತದೆಯಲ್ಲದೇ, ಅಲ್ಲಲ್ಲಿ ಕಚಗುಳಿ ಇಟ್ಟು ನಗಿಸುವಲ್ಲಿ ಹಿಂದೆ ಬೀಳುವುದಿಲ್ಲ. ಇನ್ನಷ್ಟು ಸಾಹಿತ್ಯ ಕೃತಿಗಳು ಇವರಿಂದ ಮೂಡಿ ಬರಲಿ ಎಂದು ಹಾರೈಸುವೆ.
ಶಂಕರ ಹಲಗತ್ತಿ
ಪ್ರಧಾನ ಕಾರ್ಯದರ್ಶಿ
ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ.
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.