SKU: 15490

OUDARYADA URULALLI

299.00

Book Details
Author : Dr.K.Shivarama Karant
SIN ‏ : ‎ B07GLLWP15
Publisher ‏ : ‎ VASANTHA PRAKASHANA

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ಆಧುನಿಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಡಾ. ಕೋಟ ಶಿವರಾಮ ಕಾರಂತರಿಗೆ ಒಂದು ವಿಶಿಷ್ಟವಾದ ಉನ್ನತ ಸ್ಥಾನವಿದೆ. 1902 ಅಕ್ಟೋಬರ್ 1ರಂದು ಜನಿಸಿದ ಕಾರಂತರದು ಕಥೆ, ಕಾದಂಬರಿ, ಗೀತನಾಟಕ, ಶಿಶುಸಾಹಿತ್ಯ ವಿಜ್ಞಾನ ಸಾಹಿತ್ಯ ಯಕ್ಷಗಾನ- ಹೀಗೆ ಎಲ್ಲದರಲ್ಲೂ ಹಿರಿಯ ಸಾಧನೆ. ಅವರ ಬಗ್ಗೆ “ಆಡು ಮುಟ್ಟಿದ ಸೊಪ್ಪಿಲ್ಲ, ಕಾರಂತರು ಕೈಯಾಡಿಸದ ಕ್ಷೇತ್ರವಿಲ್ಲ” ಎಂಬ ಮಾತು ಜನಜನಿತವಾಗಿದೆ. ‘ಕೋಳಿ ಸಾಕಣೆ’ಯಿಂದ ಹಿಡಿದು ‘ವಿಜ್ಞಾನ ಪ್ರಪಂಚ’ದವರೆಗೆ ಅವರ ಬರಹದ ಹರವು. ಬಾಲಕ ಬಾಲಕಿಯರಿಗಾಗಿ ಇವರು ರಚಿಸಿಕೊಟ್ಟಿ ‘ಬಾಲಪ್ರಪಂಚ’ದ ಮೂರು ಸಂಮಟಗಳು ಹಾಗೂ ‘ವಿಜ್ಞಾನ ಪ್ರಪಂಚ’ದ ನಾಲ್ಕು ಸಂಪುಟಿಗಳು ಅತ್ಯಂತ ಉಪಯುಕ್ತ ಕೃತಿಗಳಾಗಿ, ಎಲ್ಲರ ಮೆಚ್ಚುಗೆ ಗಳಿಸಿವೆ. ಕಾರಂತರು ‘ಸಿರಿಗನ್ನಡ ಅರ್ಥಕೋಶ’ ರಚಿಸಿ, ನಿಘಂಟು ಕ್ಷೇತ್ರದಲ್ಲೂ ತಮ್ಮ ಸಾಧನೆಯನ್ನು ಮೆರೆದಿದ್ದಾರೆ. ದೇಶ ವಿದೇಶಗಳಲ್ಲಿ ಸಂಚರಿಸಿ, ಪ್ರವಾಸ ಸಾಹಿತ್ಯವನ್ನೂ ರಚಿಸಿದ್ದಾರೆ.

ನೃತ್ಯ ಮತ್ತು ಯಕ್ಷಗಾನಗಳಲ್ಲಿ ಪರಿಣತಿ ಪಡೆದಿರುವ ‘ಕಡಲ ತೀರದ ಭಾರ್ಗವ ಎಂದು ಖ್ಯಾತರಾಗಿರುವ ಕಾರಂತರಂತಹ ವ್ಯಕ್ತಿ ಯಾವ ರಾಷ್ಟ್ರಕ್ಕಾದರೂ ಭೂಷಣ. ತಮ್ಮ ಸ್ವಂತ ಭಾಷೆಯಲ್ಲೇ ತಮ್ಮ ಆರೋಚನೆಗಳನ್ನು ಪ್ರಕಟಿಸಿದರೂ, ಅವರು ವಿಶ್ವಮಾನವರು. ಪ್ರಪಂಚದ ಇತರ ಸಾಹಸಿಗಳಂತೆ ಇವರೂ ಸಮಾಜದಿಂದ ಪ್ರತ್ಯೇಕವಾಗಿ ನಿಲ್ಲುವ ವ್ಯಕ್ತಿ: ಧ್ರುವಕಾರೆ.

ಕಾರಂತರು ಒಬ್ಬ ವ್ಯಕ್ತಿಯಲ್ಲ, ಒಂದು ಶಕ್ತಿ, ಒಂದು ಸಂಸ್ಥೆ. ಅವರು ಕೃತಿವೀರರು, ಸಾಹಸಜೀವಿ, ಸಮಾಜದ ವಿಮರ್ಶಕ, ಪ್ರಯೋಗಪ್ರಿಯ, ಕಲೆ, ಸಾಹಿತ್ಯ, ನೃತ್ಯ ಪ್ರವಾಸ, ಖಂಡಿತವಾದ ಈ ಒಂದೊಂದರಲ್ಲಿಯೂ ಕಾರಂತರದ್ದೇ ವಿಶಿಷ್ಟ ಛಾಪು. ನೇರವಾದ ನಡೆ ನುಡಿ, ಉಲ್ಲಾಸ ಪ್ರವೃತ್ತಿ, ಉದ್ಯಮಶೀಲವಾದ ಚೇತನ, ಪ್ರವಾಸಪ್ರಿಯ, ವಿಸರ್ಗಪ್ರೇಮಿ. ತಮ್ಮ ಅನುಭವಕ್ಕೆ ನಿಲುಕದ ಯಾವ ಒಂದು ಮಾತನ್ನೂ ಅವರು ಅಡರು ಬರೆಯರು

ಕಮ್ಮ ‘ಮೂಕಜ್ಜಿಯ ಕನಸುಗಳು’ ಕಾದಂಬರಿಗಾಗಿ ಭಾರತೀಯ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಗೌರವವಾದ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಕೆರಂತರಿಗೆ ಕೇಂದ್ರ ಸರಕಾರವು ‘ಪದ್ಮಭೂಷಣ’ ಪ್ರಶಸ್ತಿ ನೀಡಿ ಗೌರವ ಸೂಚಿಸಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಇವರಿಗೆ ಲಭಿಸಿದೆ. ನಾಡಿನ ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನಿತ್ತು ಗೌರವಿಸಿವೆ

Rating This Book

Reviews

There are no reviews yet.

Be the first to review “OUDARYADA URULALLI”

Your email address will not be published. Required fields are marked *

Top Books