SKU: 17710

ಒತ್ತಡ

80.00

ಅಧ್ಯಾತ್ಮಿಕ ಚಿಂತನದ ಮೂಲಕ ಉದ್ದಿಮೆ ಕ್ಷೇತ್ರದಲ್ಲಿ ಒತ್ತಡದ ನಿರ್ವಹಣೆ.

Book Details
Author : ಸುಭಾಶ್ಚಂದ್ರ ಸಕ್ರೋಜಿ.
Publisher : ನಿರ್ಮಲ ಭಾರತಿ ಪ್ರಕಾಶನ

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 999

share This book

Book Description

ಈ ಅಮೂಲ್ಯವಾದ ಕೃತಿಯನ್ನು ಶ್ರೀ ಸುಭಾಶ್ಚಂದ್ರ ಸಕ್ರೋಜಿಯವರು ರಚಿಸಿದ್ದು ನಮಗೆಲ್ಲಾ ಅಭಿಮಾನದ ಮತ್ತು ಆನಂದದ ವಿಷಯವಾಗಿದೆ. ಮೂಲ ಕೃತಿಯೊಂದನ್ನು ತಮ್ಮ ಮಾತೃಭಾಷೆಗೆ ತರ್ಜುಮೆಗೊಳಿಸುವಲ್ಲಿ ವಹಿಸಿದ ಆಸಕ್ತಿ ಅವರು ಕನ್ನಡ ಭಾಷೆಗೆ ಹೊಂದಿದ ಗೌರವದ ವಿಷಯವಾಗಿದೆ. ಈ ಕೃತಿ ತುಂಬಾ ವಾಸ್ತವಿಕ ಸತ್ಯತೆಗಳಿಂದ ರಚಿತಗೊಂಡಿದ್ದ-ರಿಂದ ಇದೊಂದು ವೈಚಾರಿಕ ಕೃತಿಯಾಗಿದೆ. ಇಲ್ಲಿ ಬರುವ ‘ಒತ್ತಡ’ದ ಕುರಿತಾದ ಬೇರೆ ಬೇರೆ ದಾರ್ಶನಿಕರಿಂದ ಬಂದ ವ್ಯಾಖ್ಯಾನಗಳು, ವಿವರಣೆಗಳು, ಉದಾಹರಣೆಗಳು ತುಂಬಾ ಪ್ರಾಯೋಗಿಕ ಹಿನ್ನೆಯಲ್ಲಿ ಬರೆಯಲ್ಪಟ್ಟಿವೆ. ಇವೆಲ್ಲವುಗಳಸಮಗ್ರತೆಯನ್ನು, ಅರ್ಥವನ್ನು ಅಧ್ಯಾತ್ಮಿಕ ಆಧಾರದ ಮೇಲೆ ಹೇಳಲ್ಪಟ್ಟಿರುವದರಿಂದ ಪ್ರತಿಯೊಬ್ಬರಿಗೂ ಬೇಗ ತಿಳಿಯುವಲ್ಲಿ ಮತ್ತು ಓದಿದ್ದನ್ನು ವಿಶ್ವಾಸಕ್ಕೆ ತಂದುಕೊಳ್ಳಲು ಸಾಧ್ಯವಾಗಿದೆ. ಓದುಗರು ಹೆಚ್ಚು ಭಾವುಕರಾಗದೆ, ಹೆದರದೆ ಬರುವ ಎಲ್ಲ ಸಂಗತಿಗಳನ್ನು ತಮ್ಮೊಳಗೆ ವಿಮರ್ಶೆಗೆ ಒಳಪಡಿಸಿಕೊ ಳ್ಳುವಂತಾಗಿದೆ. ಈ ಕೃತಿಯಲ್ಲಿ ವಿಶೇಷವಾಗಿ ಉದ್ದಿಮೆಗಳಲ್ಲಿಯ ಬಗೆ ಬಗೆಯ ಕೆಲಸ ಕಾರ್ಯಗಳನ್ನು ಮಾಡುವ ಹಿರಿಯ ಕಿರಿಯ ಉದ್ದಿಮೆದಾರರಿಗೂ ಹಾಗೂ ಕಾರ್ಮಿಕರಿಗೂ ಎಂಥ ಪ್ರಸಂಗಗಳು ಬರುತ್ತವೆ ಹಾಗೂ ಆ ಮೂಲಕ ಒತ್ತಡ ಪ್ರತಿಯೊಬ್ಬನಲ್ಲೂ ಸಂಭವಿಸುವಂತ ಹವುಗಳಾಗಿವೆ. ಇವುಗಳಿಗೆಲ್ಲಾ ಪರಿಹಾರೋಪಾಯಗಳ ಸ್ಪಷ್ಟ ವಿಚಾರಗಳನ್ನು ಹೇಳಿ ಕೊಟ್ಟಿದ್ದಾರೆ. ಒತ್ತಡದ ಪರಿಹಾರದಲ್ಲಿ ಅಧ್ಯಾತ್ಮಿಕತೆಯ ಮಹತ್ವವನ್ನು, ಪ್ರಾಮುಖ್ಯತೆಯನ್ನು ಹಾಗೂ ಅದರ ಅನಿವಾರ್ಯತೆಯನ್ನು ವೈಜ್ಞಾನಿಕ ಮುಖಾಮುಖಿಯಲ್ಲಿ ಅನಾವರಣಗೊಳಿಸುತ್ತಾ ಬಂದಿರುವ ವಿಷಯ ತುಂಬಾ ಗಮನಾರ್ಹವಾದುದು.

ಒತ್ತಡದ ಪ್ರಸ್ತಾವನೆಯಿಂದ ಪ್ರಾರಂಭಗೊಂಡ ಈ ‘ಒತ್ತಡ’ ಕೃತಿ ಒಟ್ಟು 14 ಪ್ರಕರಣಗಳನ್ನು ಒಳಗೊಂಡಿದ್ದು ಎಲ್ಲವನ್ನು ಸಮಗ್ರವಾದ ಮತ್ತು ಅಷ್ಟೇ ಖಚಿತವಾದ ಅಭಿಪ್ರಾಯಗಳನ್ನು ಹೊಂದಿದ್ದು ಒತ್ತಡವನ್ನು ಕಳೆದುಕೊಳ್ಳಲಿಕ್ಕೆ ತುಂಬಾ ಮಹತ್ವದ ಕೃತಿಯಾಗಿದೆ. ಈ ಕೃತಿಯು ವಿಶೇಷ ತರಬೇತಿಗಳಾದ ಡಿ.ಇಡಿ; ಬಿ.ಇಡಿ ಮತ್ತು ಬಿ.ಪಿ.ಇಡಿ. ವರ್ಗಗಳಿಗೆ ಪಠ್ಯಪುಸ್ತಕವಾಗುವಲ್ಲಿ ಮತ್ತು ಕಾರಖಾನೆಗಳಲ್ಲಿ ISO 9000 ಮತ್ತು ISO 14000 ಸರ್ಟಿಫಿಕೇಶನ್ ತರಬೇತಿಗಳಲ್ಲಿ ಅನುಕೂಲವಾಗುವ ಎಲ್ಲ ಅರ್ಹತೆಯನ್ನು ಹೊಂದಿದೆ.
ಬಿ. ಪಿ. ಹಿರೇಸೋಮಣ್ಣವರ

Rating This Book

Reviews

There are no reviews yet.

Be the first to review “ಒತ್ತಡ”

Your email address will not be published. Required fields are marked *

Top Books