+918310000414
contact@kannadabookpalace.com
+918310000414
contact@kannadabookpalace.com
₹90.00
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಅರಳು ಹುರಿದಂತೆ ಸಿಹಿ ಮಾತುಗಳನ್ನಾಡುವ ನಗುಮುಖದ ಸೋದರಿ ಚುನನೇಕರಿ ಅಂಗಡಿ ತನ್ನ ಅತೀವ ಆಸಕ್ತಿಯಿಂದ ವಿಜ್ಞಾನ ಹಾಗೂ ಗಣಿತ ವಿಷಯಗಳಲ್ಲಿ ಪ್ರಾವೀಣ್ಯತೆ ಪಡೆದುಕೊಂಡು ಕ್ರಿಯಾಶೀಲ ಶಿಕ್ಷಕಿಯಾಗಿ, ಮಕ್ಕಳು ತಮ್ಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಈ ಎರಡು ವಿಷಯಗಳು ದಾರಿದೀಪವಾಗಿ ಮುನ್ನಡೆಸಲಿ ಎಂಬ ಉದ್ದೇಶದಿಂದ ಬೋಧನಾ ಕೌಶಲ್ಯ ಬೆಳೆಸಿಕೊಂಡವರು. ಈ ಬೋಧನಾ ಕೌಶಲ್ಯದ ಜೊತೆಗೆ ಸಾಹಿತ್ಯಕ ಸತ್ವ ಬೆಳೆಸಿಕೊಳ್ಳುವ ತವಕದಿಂದ ಪದ್ಯ ರಚಿಸಿ ಪ್ರಕಟಿಸಿ ಓದುಗರಿಗೆ ನೀಡುವ ಉತ್ತಮ ಪ್ರಯೋಗದಿಂದ ತುಂಬಾ ಯಶಸ್ವಿಯಾಗಿದ್ದಾರೆ.
ಈಗಾಗಲೇ ‘ಕಪ್ಪೆಚಿಪ್ಪಿನೊಳಗಿನ ಮುತ್ತು”, “ನೈದಿಲೆ ನಗು”, “ಹಾಡಿನ ಬಂಡಿ” ಮೂರು ಕವನ ಸಂಕಲನಗಳನ್ನು ಹಾಗೂ “ಪಡಿಯಚ್ಚು”, “ಸಾಲಗುಡಿ” ಎಂಬ ಗದ್ಯ ಲೇಖನಗಳನ್ನು ಪ್ರಕಟಿಸುವ ಮೂಲಕ ಸಾಹಿತಿಗಳ ಸಾಲಿನಲ್ಲಿ ಮಹತ್ವದ ಸ್ಥಾನ ಪಡೆದಿದ್ದಾರೆ. “ನಾವೇ ದೇವು” ಎಂಬ ನಾಲ್ಕನೆಯ ಕವನ ಸಂಕಲನಕ್ಕೆ ನನಗೆ ಮುನ್ನುಡಿ ಬರೆಯಲು ವಿನಂತಿಸಿಕೊಂಡರು. ಆ ವಿನಂತಿಯನ್ನು ಮಾನ್ಯ ಮಾಡಿ ನನ್ನ ಕೆಲವು ಅನಿಸಿಕೆಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ.
ತಮ್ಮ ವಿಷಯಗಳಿಗೆ ಒತ್ತು ಕೊಡುವ ವಾಸ್ತವ ಸಂಗತಿಗಳನ್ನು ಕವನಗಳ ಮೂಲಕ ತಿಳಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ವಿಜ್ಞಾನ, ಗಣಿತ ಹಾಗೂ ಇತರ ವಿಷಯಗಳನ್ನು ಪದ್ಯದ ಮೂಲಕ ಕಲಿಸುವ ಸುಲಭ ಉಪಾಯದೊಂದಿಗೆ ಓದುಗರನ್ನು ಆಕರ್ಷಿಸುವ ಕೆಲಸ ಮಾಡಿದ್ದಾರೆ. ಕಿರಿಯರು ಹಿರಿಯರು ಎಂಬ ಭೇದ ಭಾವವಿಲ್ಲದೆ ಎಲ್ಲರೂ ಓದಿ ಹಾಡಿ ಸಂತೋಷಪಡುವ ಹಾಗೂ ಇತರ ವಿಷಯಗಳ ಬಗೆಗೆ ಹೆಚ್ಚಿನ ಜ್ಞಾನ ಸಂಗ್ರಹಿಸಿಕೊಳ್ಳುವ ಸಂದರ್ಭಗಳನ್ನು ಒದಗಿಸಿದ್ದಾರೆ. ಕವನ ಸಂಕಲನದ ಶೀರ್ಷಿಕೆಗಳೇ ಅಚ್ಚರಿ ಹುಟ್ಟಿಸುವ ನಿಟ್ಟಿನಲ್ಲಿ ಮೂಡಿಬಂದಿವೆ. ಒಳಗಿನ ವಸ್ತುಗಳೂ ಸೂಕ್ತವಾಗಿವೆ.
ಒಟ್ಟಿನಲ್ಲಿ ಭರವಸೆ ಮೂಡಿಸಿರುವ ಲೇಖಕಿಯ ಸ್ವಂತ ಊರು ನಾಯಕನೂರು, ಅದರ ಮೇಲಿನ ಅಭಿಮಾನದಿಂದ “ಅಂಚು” (ಅಂಗಡಿ ಭುವನೇಶ್ವರಿ) ಎಂಬ ಪ್ರಕಾಶನ ಸಂಸ್ಥೆಯಿಂದ ಊರಿಗೆ ಹೆಸರು ತರುವ ಕೆಲಸ ಮಾಡಿದ ಕವಿಯತ್ರಿ ಶ್ರೀಮತಿ ಭುವನೇಶ್ವರಿ ಅವರಿಗೆ ಕನ್ನಡ ತಾಯಿ ಭುವನೇಶ್ವರಿ ದೇವಿ ಇನ್ನೂ ಹೆಚ್ಚಿನ ವೈವಿಧ್ಯಮಯ ಕೃತಿಗಳನ್ನು ರಚಿಸುವ ಶಕ್ತಿ ಸಾಮರ್ಥ್ಯ ನೀಡಲಿ ಎಂದು ಹಾರೈಸುತ್ತೇನೆ.
ನಿಂಗಣ್ಣ ಕುಂಟಿ (ಇಟಗಿ)
ಹಿರಿಯ ಮಕ್ಕಳ ಸಾಹಿತಿಗಳು
005-ಬಿ ಬ್ಲಾಕ್, ರೋಟನ್ ಅಪಾರ್ಟ್ ಮೆಂಟ್
ಗಜಾನನ ಮಹಾಲೆ ಮಾರ್ಗ (ಕಾಲೇಜು ರಸ್ತೆ)
ಕೆ. ಸಿ. ಪಾರ್ಕ್ ಹತ್ತಿರ, ಧಾರವಾಡ-580008
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.