SKU: 17349

ನನ್ನೂರ ಕೌದಿ

80.00

Author : Jahan Ara

Publishers Name : Showkath Ali

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ನನ್ನೂರ ಕೌದಿ

ನನ್ನನ್ನು ವಿಶೇಷವಾಗಿ ಆಕರ್ಷಿಸಿದ್ದು ಜಹಾನ್ ಆರಾ ಅವರ ಪರಿಶ್ರಮ, ಪರಿಚಿತವಾದ ಮತ್ತು ಜನಪದದೊಡನೆ ಬೆರೆತು ಹೋಗಿರುವ ಕೌದಿಗಳ ಕುರಿತಂತೆ ಅವರು ನಡೆಸಿದ ಪ್ರಯೋಗ ಎಷ್ಟೆಲ್ಲಾ ವ್ಯಾಪ್ತಿಯನ್ನು ಪಡೆಯಿತು ಅನ್ನುವುದೇ ಆಶ್ಚರ್ಯವೂ ಹೌದು ಮತ್ತು ಕುತೂಹಲವೂ ಹೌದು. ಅವರಿಗೆ ಕೌದಿ ಒಂದು ಕೌತುಕವೇ ಸರಿ. ಕೌದಿಯೆಂದರೆ ಬರೀ ಕೌದಿಯಷ್ಟೇ ಅಲ್ಲ, ಅದೊಂದು ಜೀವನಶೈಲಿ, ಒಂದು ಸೆಳೆತ ಎಂದು ಸಿಕ್ಕಾಗೆಲ್ಲ ಹೇಳುತ್ತಾರೆ. ಇನ್ನು ತಿಳಿದಂತೆ ಇವರು ಕನ್ನಡದ ಯುವ ಬರಹಗಾರು, ಭಾವನೆಗಳ ಮೆಟ್ಟಿಲುಗಳನ್ನು ಒಂದರ ನಂತರ ಮತ್ತೊಂದನ್ನು ಕಟ್ಟುತ್ತಾ ಹೋಗುವ ಪರಿ ತಾವು ನಡೆಸಿದ ಪ್ರಯೋಗದ ಉದ್ದಕ್ಕೂ ಪ್ರತಿಬಿಂಬಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದು ಹೇಗೆ ಸಾಧ್ಯವಾಯಿತು ಎಂದು ಆಲೋಚಿಸಿದರೆ, ಎರಡು ಮೂರು ಅಂಶಗಳು ಮುಂದೆ ಕಾಣಿಸುತ್ತವೆ: ಸೊಗಸಾದ ಶೈಲಿಯ ಬರವಣಿಗೆ, ಆತ್ಮೀಯ-ಸರಳ ಪ್ರಯೋಗಗಳ ಚೌಕಟ್ಟು. ಮಕ್ಕಳನ್ನು ಮತ್ತು ಸಮುದಾಯವನ್ನು ಬೆಸೆಯುವ ಸಂದರ್ಭಗಳಲ್ಲಿ ಪರಿಪೂರ್ಣ ಸ್ಥಳೀಯ ಮೆರಗು, ಸುಪರಿಚಿತ ಪದಗಳ ಬಳಕೆ ಮತ್ತು ನಡೆ. ಅತಿ ಸಹಜವಾಗಿ, ಸಾಮಾಜಿಕ ಹಿನ್ನೆಲೆಗಳಲ್ಲಿ ಆಗುಹೋಗುಗಳನ್ನು ಹೆಣೆಯುತ್ತಾ ಹೋಗಿ ಆ ಕೌದಿ ಗಳಲ್ಲಿ ಕಳೆದು ಹೋದರೇನೋ ಅನ್ನುವಷ್ಟರ ಮಟ್ಟಿಗೆ ಈ ಶಾಲಾ ಕಲಾ ಸಂಯೋಜಿತ ಪ್ರಯೋಗವನ್ನು ನಡೆಸಿ ಮನಸ್ಸುಗಳನ್ನು ಗೆದ್ದಿದ್ದಾರೆ.

ಕೌದಿಗಳಲ್ಲಿನ ಸೂಕ್ಷ ಹೊಲಿಗೆಗಳು, ಅವುಗಳ ಹಿಂದಿರುವ ಕೈಗಳು, ಅದರ ಹಿಂದಿರುವ ಕೌಶಲ್ಯ, ಕೌದಿ ಹೊಲೆಯುವ ಮಹಿಳೆಯರು ಪರಸ್ಪರ ಹಂಚಿಕೊಳ್ಳುವ ನೋವು-ನಲಿವುಗಳು, ಅದನ್ನು ಹೊದ್ದು ಮಲಗಿದವರ ಸಂಭ್ರಮ, ಸಂಕಟಗಳು, ಎಲ್ಲವುದರ ಹೂರಣ ನೀಡಿದ ಜಹಾನ್ ಆರಾ ಅವರಿಗೆ ಮನ ಪೂರ್ವಕ ಅಭಿನಂದನೆಗಳು.

ಕೃಷ್ಣಮೂರ್ತಿ ಟಿ.ಎನ್.

ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ

ಕಲಾ ಶಿಕ್ಷಣ ವಿಭಾಗ

ಇಂಡಿಯಾ ಫೌಂಡೇಷನ್ ಫಾರ್ ದಿ ಆಟ್ಸ್

ಬೆಂಗಳೂರು.

Rating This Book

Reviews

There are no reviews yet.

Be the first to review “ನನ್ನೂರ ಕೌದಿ”

Your email address will not be published. Required fields are marked *

Top Books