+918310000414
contact@kannadabookpalace.com
+918310000414
contact@kannadabookpalace.com
₹110.00 Original price was: ₹110.00.₹100.00Current price is: ₹100.00.
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಸುಂದರಿಯ ತಲೆಯಲ್ಲಿ ಮುಂಗುರುಳಾಗುವ ಆಸೆ… ರಮಣಿಯ ಎದೆಗೂಡಲಿ ತಲೆಯಿಟ್ಟು ಮಲಗುವ ಆಸೆ… ಇಂತಹ ನಾವು ನೀವೆಲ್ಲ ಬಯಸುವ ಹಲವು ಸುಂದರ ಆಸೆಗಳನ್ನು ಹೊಂದಿ ತಮ್ಮ ಗಝಲ್ ಗಳ ಮೂಲಕ ಯುವ ಮನಸುಗಳನ್ನು ಕದಡುವ ಗಝಲ್ ಕಾರ “ಕಂಸ” ಅವರ ಪೂರ್ಣ ಹೆಸರು ಕಂಚುಗಾರನಹಳ್ಳಿ ಸತೀಶ್. ಮೂಲಭೂತವಾಗಿ ಯುವ ಕಥೆಗಾರ, ಕಾದಂಬರಿಕಾರರಾದ ಇವರು ಕಾವ್ಯವನ್ನು ಬರೆದಿದ್ದಾರೆ. ಈಗ ಪ್ರೇಮಕಾವ್ಯದ ಗಝಲ್ ಕಡೆಗೆ ಹೊರಳಿರೋದು ಸಂತೋಷದಾಯಕ. ಇವರನ್ನು ಗಝಲ್ ಲೋಕಕ್ಕೆ ಸ್ವಾಗತಿಸುವೆ.
ಇವರು ಈಗಾಗಲೇ ‘ಸ್ಯಾನಿಟರಿ ಪ್ಯಾಡ್” ಕಾದಂಬರಿ, “ಮುಂದೇನಾಯ್ತು?” ಕಥಾ ಸಂಕಲನ, “ಬಂಗಾರದ ಹನಿಗಳು’ ಕಾವ್ಯ ಸಂಕಲನ ಮತ್ತು “ಚಿಂಟು-ಪಿಂಟು ಮತ್ತು ಮಿಂಚುವಿನ ಸಂಚಲನ” ಮಕ್ಕಳ ಕಾದಂಬರಿ ಕೃತಿಗಳ ಜೊತೆ ಜೊತೆಗೆ ಕೆಲವು ಇತರೇ ಬರಹಗಳನ್ನು ಸಾಹಿತ್ಯ ಲೋಕಕ್ಕೆ ನೀಡಿ ಒಂದೆರಡು ಪುರಸ್ಕಾರ ಸಹ ಪಡೆದು ಯುವ ಲೇಖಕರ ಸಾಲಿನಲ್ಲಿ ಹೆಸರು ಮಾಡಿದ್ದಾರೆ.
ಮನಸೆಂಬ ಮಂದಿರದಲ್ಲಿ ನೆಮ್ಮದಿಯ ಹುಡುಕುತ್ತಾ ಬಂದಳು ಹಗಲು ಇರುಳು ಎನ್ನದೆ ನಿದ್ದೆಗಣ್ಣಲ್ಲೇ ನಡೆದಾಡಿದೆ ನನ್ನವಳು ನಕ್ಕಾಗ ಕಂಸ ಅವರು ಈಗ “ನನ್ನವಳು ನಕ್ಕಾಗ” ಎಂಬ ಮೋಹಕ ಗಝಲ್ ಸಂಕಲನದ ಮೂಲಕ ಪ್ರೇಮಲೋಕದ ತಮ್ಮ ಸಖಿಯರಿಗೆ ಮುತ್ತಿಟ್ಟು ಗಝಲ್ ಕಾವ್ಯಕ್ಕೆ ತಮ್ಮದೇ ರಿಯಲ್ಲಿ ಮುದ ತುಂಬಲು ಹೊರಟಿದ್ದಾರೆ. ಬೊಂಬೆಯಂತಿರುವ ಪ್ರಿಯೆ ಮುದ್ದಾದ ಮೇರೆಗೆ ಮುತ್ತಿಡುವೆಯಾ ಅಮೃತವರ್ಷಿಣಿಯ ತೋಳ ಬಂಧನದಲ್ಲಿ ಪ್ರೇಮಖೈದಿಯಾಗಿಹನಮ ಕಂಸ
ಹೀಗೆ ಈ ಸಂಕಲನದ ಉದ್ದಕ್ಕೂ ಗಝಲ್ ಬಯಸುವ ನವಿರಾದ ಪ್ರೀತಿ-ಪ್ರೇಮ-ಪ್ರಣಯ ಹಾಗೂ ವಿರಹ ವೇದನೆ ಅಷ್ಟೇ ಅಲ್ಲದೇ ಅದಕ್ಕೂ ಮುಖ್ಯವಾಗಿ ಸಮಾಜಮುಖಿ ಚಿಂತನೆಗಳ ಗಝಲ್ ಗಳನ್ನು ಸಹ ನೀಡಿದ್ದಾರೆ. “ಕಂಸ” ಅವರಿಗೆ ಎಲ್ಲ ರೀತಿಯಲ್ಲೂ ಶುಭವಾಗಲಿ ಎಂದು ಹಾರೈಸುವೆ.
ಡಾ.ಸಿದ್ಧರಾಮ ಹೊನ್ದಲ್
ಕರ್ನಾಟಕ ಸಾಹಿತ್ಯ ಅಕಾಡೆಮಿ
ಪ್ರಶಸ್ತಿ ಪುರಸ್ಕೃತ ಲೇಖಕರು, ಶಹಾಪುರ
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.