SKU: 15335

Nanna Thamma Shankara

Original price was: ₹295.00.Current price is: ₹250.00.

Book Details
Author : Ananth Naag
Publisher : Total Kannada
ASIN ‏ : ‎ B00MEALD9G
Language ‏ : ‎ Kannada

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ಏಕೆ ಈ ಶಂಕರ್ ನಾಗ್ ಹುಚ್ಚು ನಮ್ಮ ಜನರಿಗೆ?

ಬೆಂಗಳೂರಿನಲ್ಲಿ ಸುಮಾರು 1,00.000 ಆಟೋರಿಕ್ಷಾಗಳು ಇರಬಹುದು. ಅವುಗಳಲ್ಲಿ ಸುಮಾರು 80% ಆಟೋಗಳ ಮೇಲೆ ಶಂಕರ್ ನಾಗ್ ಚಿತ್ರವಿದೆ. ಆಶ್ಚರ್ಯವೆಂದರೆ ಶಂಕರ್ ನಾಗ್ ಕಾಲಾನಂತರದಲ್ಲಿ ಹುಟ್ಟಿ ಇಂದು ಆಟೋ ಚಾಲಕರಾಗಿರುವ ಎಷ್ಟೋ ಮಂದಿ ತಮ್ಮ ಆಟೋಗಳ ಹಿಂದೆ ಶಂಕರ್‌ನಾಗ್‌ರ ಚಿತ್ರಗಳನ್ನು ಅಂಟಿಸಿಕೊಂಡಿದ್ದಾರೆ. ಇದು ಕೇವಲ ಅಭಿಮಾನವಲ್ಲ.. ಬದಲಿಗೆ ಕನ್ನಡಿಗರಿಗೆ ಅವರ ಮೇಲಿರುವ ಪ್ರೀತಿ. ಬಹುಶಃ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೇರುನಟ ಡಾ. ರಾಜ್ ನಂತರ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಏಕೈಕ ನಟ ಎಂದರೆ ಅದು ಶಂಕರ್ ನಾಗ್ ಮಾತ್ರ..

ಕನ್ನಡದ ನಿಮ್ಮ ಎಲ್ಲಾ ಕಾಲದ ಅಚ್ಚು ಮೆಚ್ಚಿನ ಹತ್ತು ಚಲನಚಿತ್ರಗಳ ಪಟ್ಟಿ ಮಾಡಿ ನೋಡಿ. ಅದರಲ್ಲಿ ಕಡಿಮೆ ಎಂದರೂ ಮೂರು ಶಂಕರ್ ನಾಗ್ ನಟಿಸಿದ. ನಿರ್ದೇಶಿಸಿದ ಚಿತ್ರಗಳಿರುತ್ತವೆ. ಮಾಲ್ಗುಡಿ ಡೇಸ್ ಭಾರತದ ಟೆಲಿವಿಷನ್ ಇತಿಹಾಸದಲ್ಲಿ ಎಂದೂ ಮರೆಯಲಾಗದ ಒಂದು ಅನುಭವ ನೀಡುವ * ಕಲಾಕೃತಿ ಅಂತ ಚಿತ್ರಪ್ರೇಮಿಗಳ ಅಭಿಪ್ರಾಯ. ಕನ್ನಡ ಚಲನಚಿತ್ರಗಳ ಧ್ವನಿಮುದ್ರಣಕ್ಕೆ ಮದ್ರಾಸಿನ ಮೇಲೆ ಅವಲಂಬಿಸಿದ್ದ ಕಾಲದಲ್ಲಿ ಬೆಂಗಳೂರಿನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಸಂಕೇತ್ ಎಲಾಕ್ಟ್ರಾನಿಕ್ಸ್‌ ಎಂಬ ಧ್ವನಿಮುದ್ರಣ ಸ್ಟುಡಿಯೋವನ್ನು ಸ್ಥಾಪಿಸಿದ ಹೆಗ್ಗಳಿಕೆ ಶಂಕರ್ ನಾಗ್‌ರದ್ದು.

ಆ್ಯಕ್ಸಿಡೆಂಟ್ ಅನ್ನೋ ಒಂದು ಚಿತ್ರ ನೋಡಿ.. ಯು ವಿ ನೋ ಹೂ ಶಂಕರ್ ನಾಗ್ ಇಸ್. ಅಂತ ಬೆಟ್ ಮಾಡೋ ಜನ ಉಂಟು. ಅಷ್ಟೊಂದು ಅಭಿಮಾನ ಏಕೆ? ಕೇವಲ 12 ವರ್ಷಗಳ ಸಮಯದಲ್ಲೇ ಸುಮಾರು 80 ಚಿತ್ರಗಳಲ್ಲಿ ನಟಿಸಿ. ಒಂದಕ್ಕಿಂತ ಒಂದು ಉತ್ತಮ ಚಿತ್ರಗಳನ್ನು ನಿರ್ದೇಶಿಸಿದ ಚೈತನ್ಯ ಈ ಮನುಷ್ಯನಿಗೆ ಎಲ್ಲಿಂದ ಬಂತು?

ಶಂಕರ್ ಇದ್ದಿದ್ರೆ ನಮ್ಮ ಕನ್ನಡ ಚಿತ್ರರಂಗ ಎಲ್ಲೋ ಇರುತ್ತಿತ್ತು ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. 2014ರ ಈ ಹೊತ್ತಿನಲ್ಲಿ ಬೆಂಗಳೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಮೆಟ್ರೋ ರೈಲನ್ನು … ಆಗಿನ ಕಾಲಕ್ಕೇ ಕಾರ್ಯ ರೂಪಕ್ಕೆ ತರಲು ಬಯಸಿದ್ದರು ಶಂಕರ್ ನಾಗ್. ಕೇವಲ ಚಲನಚಿತ್ರಗಳಷ್ಟೇ ಅಲ್ಲ, ಇಡೀ ಬೆಂಗಳೂರಿಗೆ ಅವರಂತಹ ಒಬ್ಬ ದೂರ ದೃಷ್ಟಿ ಮತ್ತು ವಿಶಾಲ ದೃಷ್ಟಿ ಇರುವ ನಾಯಕ ಬೇಕಿತ್ತು. ಬೇಕಿದೆ.. ಎಂದು ಹೇಳುವವರು ಸಾವಿರಾರು ಮಂದಿ.

ಈ ಎಲ್ಲ ಪ್ರಶ್ನೆಗಳಿಗೆ. ಅವರನ್ನು ಬಹಳ ಹತ್ತಿರದಿಂದ ಬಲ್ಲ, ಅವರೊಂದಿಗೆ ಹುಟ್ಟಿ ಬೆಳೆದ ಅವರ ಅಣ್ಣ ಶ್ರೀ ಅನಂತ ನಾಗ್‌ರಿಂದಲೇ ಉತ್ತರ ಪಡೆಯಬಹುದೇ? ಈ ಪ್ರಶ್ನೆಗಳ ಉತ್ತರಗಳ ಜೊತೆಗೆ. ಶಂಕ‌ರ್ ನಾಗ್‌ರ ಬದುಕು.. ಅವರ ಮನಸ್ಸು ಯೋಚಿಸುತ್ತಿದ್ದ ರೀತಿ.. ಅವರ ಕನಸುಗಳು.. ಅವರ ಕಾರ್ಯ ವೈಖರಿ.. ಬದುಕಿನೆಡೆಗಿನ ಅವರ ಅದಮ್ಯ ಉತ್ಸಾಹ.. ಇವುಗಳ ಪರಿಚಯವು ಆಗಬಹುದೇ?

ಓದಿ ನೋಡಿ.. ಶ್ರೀ ಅನಂತ ನಾಗ್‌ರ ಪ್ರೀತಿಯ, ಕನ್ನಡಿಗರ ಅಭಿಮಾನದ.. ನನ್ನ ತಮ್ಮ ಶಂಕರ.

Rating This Book

Reviews

There are no reviews yet.

Be the first to review “Nanna Thamma Shankara”

Your email address will not be published. Required fields are marked *

Top Books