SKU: 14610

ನನ್ನ ಪುಸ್ತಕಗಳ ಆತ್ಮಚರಿತ್ರೆ

410.00

Author : ಕೆ.ಸತ್ಯನಾರಾಯಣ

Publishers Name : ಯಾಜಿ ಪ್ರಕಾಶನ

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ಕಳೆದ ಮೂರುವರೆ ದಶಕಗಳಲ್ಲಿ ನಾನು ಸುಮಾರು ಇಪ್ಪತ್ತೆರಡು ವರ್ಷ ಕರ್ನಾಟಕದಿಂದ ಹೊರಗೇ ಇದ್ದೇನೆ. ಆದರೂ ಬರವಣಿಗೆಯ ಕಾವು, ಗತಿ ಮತ್ತು ಪ್ರಸ್ತುತತೆ ಮುಕ್ಕಾಗದಂತೆ ಬರೆದುಕೊಂಡು ಬಂದಿದ್ದೇನೆ. ಹಾಗೆಂದು ಓದುಗವರ್ಗ ತನ್ನ ಪ್ರೋತ್ಸಾಹದಲ್ಲಿ ಮೌನದಲ್ಲಿ, ಮನ್ನಣೆಯಲ್ಲಿ ನನಗೆ ತಿಳಿಸಿದೆ. ತಿಳಿಸುತ್ತಲೇ ಬಂದಿದೆ. ಇಲ್ಲದಿದ್ದರೆ ಇಷ್ಟೊಂದು ಬರೆಯಲು ಹೇಗೆ ಸಾಧ್ಯ? ಕನ್ನಡ ಸಂವೇದನೆಯಿಂದ ಭಾರತದ ಬದುಕನ್ನು ಬೇರೆ ಪ್ರಾಂತ್ಯಗಳ ಸಂವೇದನೆ ಮತ್ತು ಅನುಭವದ ಮೂಲಕ ಕರ್ನಾಟಕದ ಬದುಕನ್ನು ಶೋಧಿಸುತ್ತಾ ನನ್ನ ಬರವಣಿಗೆ ಬೇರೆ ಯಾವ ಸಮಕಾಲೀನ ಲೇಖಕರ ಬರವಣಿಗೆಯಲ್ಲೂ ಕಾಣದಂತಹ ವಿಸ್ತಾರ, ವಿನ್ಯಾಸ ಮತ್ತು ಪ್ರಯೋಗಶೀಲತೆಯನ್ನು ರೂಢಿಸಿ ಕೊಂಡಿದೆ. ಕೃತಿ-ಆಕೃತಿ-ಸಂಸ್ಕೃತಿ ಮೂರೂ ದೃಷ್ಟಿಯಿಂದಲೂ ನನ್ನ ಬರವಣಿಗೆ ಅನನ್ಯವಾಗಿದೆ. ವಿಶಿಷ್ಟವಾಗಿದೆಯೆಂದು ನಾನು ನಮ್ರವಾಗಿ ಆದರೆ ಸಕಾರಣವಾದ ಹೆಮ್ಮೆಯಿಂದ ನಿವೇದಿಸಿಕೊಳ್ಳಲು ಬಯಸುತ್ತೇನೆ. ಸಂವೇದನಾಶೀಲ ಓದುಗವರ್ಗದ ಬೆಚ್ಚನೆಯ ಪ್ರೀತಿಯಲ್ಲಿ ಮಿಂದು ಬೆಂದಿರುವ ನಾನು ಕನ್ನಡ ಓದುಗರಿಗೆ ಮತ್ತೊಮ್ಮೆ ಮತ್ತು ನಿರಂತರವಾಗಿ ವಂದನೆಗಳನ್ನು ಹೇಳುತ್ತಾ ನನ್ನ ಬರವಣಿಗೆಯನ್ನು ಮುಂದುವರಿಸಿಕೊಂಡು ಹೋಗುತ್ತೇನೆ.

ನಿಮ್ಮ ಪ್ರೀತಿಯ

-ಕೆ.ಸತ್ಯನಾರಾಯಣ

Rating This Book

Reviews

There are no reviews yet.

Be the first to review “ನನ್ನ ಪುಸ್ತಕಗಳ ಆತ್ಮಚರಿತ್ರೆ”

Your email address will not be published. Required fields are marked *