+918310000414
contact@kannadabookpalace.com
+918310000414
contact@kannadabookpalace.com
₹160.00
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಹೊಸ ತಲೆಮಾರಿನ ಮಹತ್ವದ ಲೇಖಕರಲ್ಲೊಬ್ಬ ರಾದ ವಿಕಾಸ ಹೊಸಮನಿ ಅವರ ಮೊದಲ ಲಲಿತ ಪ್ರಬಂಧಗಳ ಸಂಕಲನ ‘ಮಿಂಚಿನ ಬಳ್ಳಿ’. ಈ ಸಂಕಲನದಲ್ಲಿ ವಿವಿಧ ವಿಷಯಗಳ ಕುರಿತು ಬರೆದ ಹದಿನೈದು ವೈವಿಧ್ಯಮಯ ಪ್ರಬಂಧಗಳಿವೆ. ವಿಕಾಸ ಹೊಸಮನಿ ಅವರ ಅಪಾರವಾದ ಓದು, ದಣಿವರಿಯದ ಕುತೂಹಲ, ಸಮೃದ್ಧ ಜೀವನಾನುಭವ, ಅಗಾಧವಾದ ಜೀವನಪ್ರೀತಿ, ವಿಮರ್ಶಕನ ಚಿಕಿತ್ಸಕ ದೃಷ್ಟಿ ಮತ್ತು ತುಂಟತನವನ್ನು ಈ ಸಂಕಲನದ ಪ್ರತಿ ಪುಟದಲ್ಲೂ ಕಾಣಬಹುದು. ಕಥನ ಪ್ರಬಂಧ, ಲಲಿತ ಪ್ರಬಂಧ, ಹರಟೆ, ವಿಡಂಬನೆ, ಪ್ರಸಂಗ ಮತ್ತು ವ್ಯಕ್ತಿಚಿತ್ರಗಳನ್ನು ಇಲ್ಲಿನ ಪ್ರಬಂಧಗಳಲ್ಲಿ ಹದವರಿತು ತಂದಿರುವುದನ್ನು ಕಾಣಬಹುದು. ‘ಮಿಂಚಿನ ಬಳ್ಳಿ’ ಸಂಕಲನದ ಪ್ರಬಂಧಗಳು ಓದುಗರಿಗೆ ಮನರಂಜನೆ ನೀಡುವುದರ ಜೊತೆಗೆ ಸಮಕಾಲೀನ ಸಮಾಜ, ಸಂಸ್ಕೃತಿ ಮತ್ತು ಸಾಹಿತ್ಯದ ಕುರಿತು ಚಿಂತನೆ ಮಾಡುವಂತೆ ಪ್ರೇರೇಪಿಸುತ್ತವೆ.
ವಿಕಾಸ ಹೊಸಮನಿ ಅವರು ‘ಮಿಂಚಿನ ಬಳ್ಳಿ’ ಕೃತಿಯಲ್ಲಿ ಬೆಳುವಲ ನಾಡೆಂದು ಖ್ಯಾತಿ ಪಡೆದ ವಾಯುವ್ಯ ಕರ್ನಾಟಕ ಭಾಗದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಕ ಚಿತ್ರಣವನ್ನು ತುಂಬ ಅರ್ಥಪೂರ್ಣವಾಗಿ ಹಾಗೂ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಧಾರವಾಡ ಭಾಗದ ಭಾಷಾ ಶೈಲಿಯ ಸಮರ್ಥ ಬಳಕೆ ಈ ಪ್ರಬಂಧಗಳ ಓದಿನ ರುಚಿಯನ್ನು ಹೆಚ್ಚಿಸಿದೆ. ಉತ್ತರ ಕರ್ನಾಟಕದ ದಿಗ್ಗಜರಾದ ರಾ.ಕು., ಎನ್ನೆ, ಧಾರವಾಡಕರ್, ಗದಗಕರ್, ಸುಂಕಾಪುರ, ವಾಡಪ್ಪಿ, ಸುನಂದಾ ಬೆಳಗಾಂವಕರ, ಶ್ರೀನಿವಾಸ ವೈದ್ಯ, ಗಿರಡ್ಡಿ ಗೋವಿಂದರಾಜ ಸೇರಿದಂತೆ ಹಲವು ಲೇಖಕರು ಸಮೃದ್ಧವಾಗಿ ಬೆಳೆಸಿದ ಲಲಿತ ಪ್ರಬಂಧ ಪರಂಪರೆಯನ್ನು ಸಮರ್ಥವಾಗಿ ಮುಂದುವರೆಸಿಕೊಂಡು ಹೋಗಬಲ್ಲ ಪ್ರತಿಭೆ ಮತ್ತು ಸಾಮರ್ಥ್ಯ ವಿಕಾಸ ಹೊಸಮನಿ ಅವರಿಗಿದೆ. ಓದು ಭಾರವೆಂದು ಭಾಸವಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಅಕ್ಷರಶಃ ವಾಚನ ಸುಖ ನೀಡುವ ಕೃತಿ ‘ಮಿಂಚಿನ ಬಳ್ಳಿ’. ಇದು ಕನ್ನಡ ಲಲಿತ ಪ್ರಬಂಧ ಪ್ರಕಾರಕ್ಕೆ ಒಂದು ಉತ್ತಮ ಕೊಡುಗೆಯಾಗಿದೆ.
-ಭವ್ಯ ಭಟ್
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.