+918310000414
contact@kannadabookpalace.com
+918310000414
contact@kannadabookpalace.com
Mobile No: 9880802551
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ನಾವು ಅನೇಕ ಕಾರಣಗಳಿಗೆ ಮರಗಳನ್ನು ನೆಡುತ್ತೇವೆ: ಮರಮುಟ್ಟಿಗಾಗಿ, ಹಣ್ಣು, ಔಷಧಗಳು, ಎಣ್ಣೆ ಮತ್ತು ಮರದ ಅಂಟು, ಬಣ್ಣ ಇತ್ಯಾದಿಗಾಗಿ. ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸುಂದರವಾಗಿಸಲು, ನಮ್ಮ ಮನೆಯನ್ನು ಶಬ್ದ ಹಾಗು ಧೂಳಿನಿಂದ ರಕ್ಷಿಸಲು, ಬೆಟ್ಟ ಗುಡ್ಡಗಳ ಅಥವಾ ಹೊಳೆ ನದಿಗಳ ದಡವನ್ನು ಶೀಘ್ರ ಭೂಸವೆತದಿಂದ ರಕ್ಷಿಸಲು. ಹಬ್ಬ ಹರಿದಿನಗಳಲ್ಲಿ ಹೂವು ಹಣ್ಣುಗಳನ್ನು ಪಡೆಯಲು ಇತ್ಯಾದಿ ಉದ್ದೇಶಗಳಿಗೂ ಮರಗಳನ್ನು ನೆಡುತ್ತೇವೆ.
ನಮ್ಮ ಉದ್ದೇಶ ಏನೇ ಇರಲಿ, ನಾವು ಕೆಲವು ಮರಗಳನ್ನು ನೆಟ್ಟಾಗ ಹಾಗು ಅವುಗಳ ಆರೈಕೆ ಮಾಡಿದಾಗ, ನಮ್ಮ ಮನೆ ಹಾಗು ಅಕ್ಕ-ಪಕ್ಕದವರಿಗೆ, ಕಾಡು ಪ್ರಾಣಿ- ಪಕ್ಷಿಗಳಿಗೆ, ಹಾಗು ಕೀಟಗಳಿಗೆ ಮತ್ತು ಇಡೀ ಭೂಮಿಗೆ ಲಾಭಗಳು ಸಹಜವಾಗಿ ಲಭಿಸುತ್ತವೆ. “ಜಾಗತಿಕವಾಗಿ ಆಲೋಚಿಸಿ. ಸ್ಥಳೀಯವಾಗಿ ಕಾರ್ಯನಿರ್ವಹಿಸಿ” ఎంబ ನಾಣ್ಣುಡಿಯಂತೆ ನಾವು ನಡೆದುಕೊಳ್ಳಬಹುದು. ಗಿಡಗಳನ್ನು ನೆಡುವುದು ನಾವೊಬ್ಬರೇ ಅಲ್ಲ ಎಂದು ತಿಳಿದುಕೊಂಡಿರುವುದು ಸೂಕ್ತ. ಬೀಜಗಳ ಪ್ರಸರಣದಲ್ಲಿ ಪಕ್ಷಿಗಳು ಬಾವಲಿಗಳು, ಅಳಿಲುಗಳು, ಇಲಿಗಳು, ಇರುವೆಗಳು ಹಾಗು ಅನೇಕ ಇತರ ಕೀಟಗಳು ನೆರವಾಗುತ್ತವೆ. ಆದ್ದರಿಂದ ಮುಂದಿನ ಪೀಳಿಗೆಗ ನಮ್ಮ ಪರಿಸರಕ್ಕೆ ಮರಗಳು ಎಷ್ಟು ಮುಖ್ಯ ಎಂಬ ಅರಿವನ್ನು ಬೆಳಸುವುದು ಹಾಗೂ ಪರಿಸರದ ಬಗ್ಗೆ ಜವಾಬ್ದಾರಿ ಹಾಗು ಕಾಳಜಿಯನ್ನು ಪೋಷಿಸಲು ನೆರವಾಗುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಲೇಖಕರಾದ
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.