SKU: 17374

ಮರದೊಳಗಣ ತಿರುಳು

220.00

ಮಹಿಳಾ ಅಧ್ಯಯನದ ಕುರಿತ ಬರೆಹಗಳು

Author : ಡಾ. ಯಸ್ವಾಮಿ ಈ

Publishers Name : ಯಾಜಿ ಪ್ರಕಾಶನ

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ಹೆಣ್ಣಿನ ಸಹಭಾಗಿತ್ವ ಇಲ್ಲದೆ ಧರ್ಮ, ಜಾತಿ, ವರ್ಗ, ಅಂಗ, ಸಂಸ್ಕೃತಿ, ಭಾಷೆ ಸಮಾನತೆಯಂತಹ ಪರಿಕಲ್ಪನೆಗಳು ಸೊರಗಿನಿಂತವೆ. ಇದಕ್ಕೆ ‘ಅಧಿಕಾರ’ ಮತ್ತು ‘ಜ್ಞಾನ’ವೂ ಹೊರತಲ್ಲ. ಇವೆಲ್ಲವೂ ಸಶಕ್ತವಾಗಬೇಕಾದರೆ ಮಹಿಳಾ ದೃಷ್ಟಿಕೋನದ ಅಗತ್ಯತೆ ಇದೆ ಎನ್ನುವ ತಾತ್ವಿಕತೆಯನ್ನು ಇಲ್ಲಿನ ಲೇಖನಗಳು ಮಂಡಿಸುತ್ತವೆ. ಮಹಿಳಾ ಅಧ್ಯಯನ ಮತ್ತು ಡಾ. ಬಾಬಾಸಾಹೇಬರ ಬರೆಹಗಳನ್ನು ಗಂಭೀರವಾಗಿ ಅಭ್ಯಸಿಸಿರುವ ಡಾ. ಯರಿಸ್ವಾಮಿ ಈ ಅವರ ಓದು, ಗ್ರಹಿಕೆ, ವಿಶ್ಲೇಷಣೆಗೆ ಒಂದು ಮಾದಲಿಯಂಬಿವೆ ಇಲ್ಲಿಯ ಬರೆಹಗಳು, ಪುರುಷಕೇಂದ್ರಿತ ಸಂಗತಿಗಳನ್ನು ಮಹಿಳಾ ಕೇಂದ್ರಿತವಾಗಿ ನೋಡುವ ಒಂದು ಕ್ರಮವನ್ನು ವೈಜ್ಞಾನಿಕವಾಗಿ, ಸಂಶೋಧನಾ ಶಿಸ್ತಿನೊಂದಿಗೆ ಇಲ್ಲಿ ಮಂಡಿತವಾಗಿರುವುದು ಗಮನಾರ್ಹ ಸಂಗತಿ ಯಾಗಿದೆ.

ಈ ಕೃತಿಯು ಮಹಿಳೆಯನ್ನು ‘ಪ್ರತ್ಯೇಕವರ್ಗ’ವೆಂದು ಭಾವಿಸದೇ ಅದೊಂದು ಅಂಗಸಂಬಂಧಿಯಾದ ತಿಳುವಳಿಕೆ ಎಂದು ಪರಿಭಾವಿಸುತ್ತದೆ. ಇದರಿಂದಾಗಿಯೇ ಸ್ತ್ರೀವಾದ ಏಕರೂಪಿಯಲ್ಲ, ಬಹುರೂಪಿ ಎನ್ನುವ ಅಭಿಪ್ರಾಯವನ್ನು ಮುನ್ನೆಲೆಗೆ ತರುತ್ತದೆ. “ಮಹಿಳೆಯರ ಶೋಷಣೆಯ ನೆಲೆಗಳನ್ನು ಅರ್ಥಮಾಡಿಕೊಳ್ಳಬೇಸಾದರೆ ಜಾತಿ ಶ್ರೇಣೀಕರಣದ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದು ಅಗತ್ಯ” ಎಂದು ನಂಜರುವ ಇಲ್ಲಿಯ ಬರೆಹಗಳು ವರ್ತಮಾನದ ಅನೇಕ ಬಿಕ್ಕಟ್ಟುಗಳಿಗೆ ಮುಖಾಮುಖಿಯಾಗುತ್ತಲೇ ಪರಿಹಾರವನ್ನು ಸೂಚಿಸುತ್ತವೆ. ಸ್ವೀವಾದಿಗಳು ಹೆಚ್ಚು ಉಲ್ಲೇಖಿಸದ ಸಂವಿಧಾನವನ್ನು ಅದು ಹೇಗೆ ಮಹಿಳಾ ಸಬಲೀಕರಣಕ್ಕೆ ಕಾರಣವಾಗಿದೆ ಎನ್ನುವ ಅಂಶವನ್ನು ಪ್ರಾಚೀನ, ಮಧ್ಯಕಾಲೀನ, ಆಧುನಿಕ ಸಂದರ್ಭಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಶ್ಲೇಷಿಸಿರುವುದು ವಿಜನ್ಯವಾಗಿದೆ. ಶ್ರೀವಾದದ ಪ್ರವೇಶಕ್ಕೆ ಒಂದು ಪಠ್ಯವಾಗಿರುವ ಇಲ್ಲಿಯ ಲೇಖನಗಳು ತೋರು ಗಂಬದಂತಿವೆ.

ಡಾ.ವೆಂಕಟಗಿರಿ ದಳವಾಯಿ

ಪ್ರಾಧ್ಯಾಪಕರು

ಕನ್ನಡ ವಿಶ್ವವಿದ್ಯಾಲಯ, ಹಂಪಿ

Rating This Book

Reviews

There are no reviews yet.

Be the first to review “ಮರದೊಳಗಣ ತಿರುಳು”

Your email address will not be published. Required fields are marked *