+918310000414
contact@kannadabookpalace.com
+918310000414
contact@kannadabookpalace.com
₹70.00
| Book Details |
|---|
| Author : SHIVARAJ BADIGER |
| Publisher : Giritare |
| Pages : 70 |
Timely Arrival: 4-8 Days to Your Doorstep
Safe and Secure: Your Payments Protected
Above order amount: 999
ಯಕ್ಕುಂಡಿಯ ಮನೆಯಂಗಳದ ಮೊಗೊಂದು ‘ಮನದಂಗಳದ ಹೂ’ ಮೂಲಕ ಅರಳಿ ಹೊರಜಗತ್ತಿಗೆ ಪರಿಚಯವಾಗುತ್ತಿರುವುದು ಸಂತೋಷ ಮತ್ತು ಹೆಮ್ಮೆ, ಶಿವರಾಜ ಬಡಿಗೇರ ಇವರಿಗೆ ಕಲೆ ರಕ್ತಗತವಾಗಿದೆ. ತಂದೆ ಮೌನೇಶ ಬಡಿಗೇರ ಅಜ್ಜ ತಮ್ಮಣ್ಣ ಬಡಿಗೇರ ಕರ್ಬಲ, ಭಜನೆ, ಡೊಳ್ಳಿನ ಪದಗಳಂತಹ ಜಾನಪದ ಕಲೆಯ ಪ್ರಸಿದ್ಧ ಕಲಾವಿದರು. ಯಕ್ಕುಂಡಿ ಮತ್ತು ಸುತ್ತಲಿನ ಹಳ್ಳಿಗಳಿಗೆ ಚಿರಪರಿಚಿತರು. ತಂದೆ ಮತ್ತು ಅಜ್ಜನಿಂದ ಕಲೆಯನ್ನು ಬಳುವಳಿಯಾಗಿ ಪಡೆದ ಶಿವರಾಜ ಬಡಿಗೇರ ತನ್ನ ಮುಗ್ಧ ಭಾವಗಳನ್ನು ಮುಕ್ತವಾಗಿ ಹಂಚಿಕೊಂಡು ಹೊರತಂದಿರುವ ಕವನ ಸಂಕಲನ ‘ಮನದಂಗಳದ ಹೂ.’
ಕವಿತೆ ಒಂದರ್ಥದಲ್ಲಿ ಗುಂಗು, ನಶೆ. ಕವಿತೆ ಕವಿಯ ಎದೆಯೊಳಗಿನ ಹತ್ತಾರು ಚಿತ್ರಗಳ ಚಿತ್ತಾರದ ಚಿತ್ರದಲ್ಲಿ ಹೊತ್ತು ತಂದ ಭಾವದ ಭಾಷೆ ಮನಸ್ಸಿನ ಕನಸುಗಳನ್ನು ಕನವರಿಸುವ ಕನ್ನಡಿ, ಭಾವದ ಸ್ಪರ್ಶಕ್ಕೆ ಅರಳಿ ಹೊರಳಿ ಹೊರಬಂದ ಹೊಸ ಭಾಷೆ. ಇಲ್ಲಿ ಶಿವರಾಜ ತಮ್ಮ ಎದೆಯೊಳಗಿನ ಭಾವದ ಹತ್ತಾರು ಚಿತ್ರಗಳನ್ನು ಭಾಷೆಯಾಗಿಸುವ ಪ್ರಯತ್ನ ಮಾಡಿದ್ದಾರೆ.
ಊರಿನ ಅಭಿಮಾನ, ಪ್ರಕೃತಿಯ ಪ್ರೀತಿ, ರೈತನ ಬದುಕು, ತನ್ನ ಜನಗಳ ಬಗೆಗಿನ ತುಡಿತ, ಶಾ ಕಲಿತ ಶಾಲೆ, ಬದುಕು. ಸಮಾಜ ಇವರ ಕವನ ಸಂಕಲನದೊಳಗಿನ ಸ್ಥಾಯಿ ಭಾವ.
ಮೊದಲ ಸಂಕಲನದ ಮೂಲಕ ಅಕ್ಷರ ಲೋಕಕ್ಕೆ ಪರಿಚಯವಾಗುತ್ತಿರುವ ಶಿವರಾಜ ಮುಂದಿನ ಹಾದಿ ತುಂಬಾ ದೊಡ್ಡದು ನಿರಂತರ ಓದಿನ ಮೂಲಕ ಗಟ್ಟಿಗೊಳಬೇಕಾದ ಜವಾಬ್ದಾರಿ, ಸವಾಲು, ಯುವ ಮಿತ್ರನ ಮುಂದಿದೆ.
ಮನದಾಸೆಯಲ್ಲಿ ‘ಮನದಂಗಳದ ಹೂ’ವನ್ನು ಕೈಗಿಡುತ್ತಿರುವ ಶಿವರಾಜ್ ಪ್ರಯತ್ನವನ್ನು ಪ್ರೋತ್ಸಾಹಿಸೋಣ. ಬೆನ್ನು ತಟ್ಟುತ್ತಾ ಬದಲಾವಣೆ ಜೊತೆಗೆ ಮತ್ತಷ್ಟು ಹೊಸದನ್ನು ಯುವಕವಿಯಿಂದ ನಿರೀಕ್ಷಿಸೋಣ….
ಅಭಿನಂದನೆಗಳು.
-ಅಂಬರೀಷ ಎಸ್. ಪೂಜಾರಿ,
ಅಧೀಕ್ಷಕರು
ಜಿಲ್ಲಾ ಕಾರಾಗೃಹ ರಾಮನಗರ.
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2025 Kannada Book Palace All Rights Reserved
Reviews
There are no reviews yet.