SKU: 16409

ಕಾವ್ಯ ಕನ್ನಿಕೆ

120.00

Author : ಶ್ರೀ ಮತಿ ರೇಣುಕಾ ಶಿವಕುಮಾರ

Publishers Name : ಎಚ್ ಎಸ್ ಆರ್ ಪ್ರಕಾಶನ

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ಕವಿ ಪರಿಚಯ
ಹಾಲಕ್ಕಿ ನುಡಿಯುವ ಯಾಲಕ್ಕಿ ಕಂಪಿನ ನಗರಿ ಹಾವೇರಿ ಜಿಲ್ಲೆಯ ಪುಟ್ಟ ಹಳ್ಳಿ ತಿಪಲಾಪುರ ಎಂಬ ಗ್ರಾಮದಲ್ಲಿ ಶ್ರೀ ಮತಿ ಅನಸೂಯಾ ಹನುಮಂತಪ್ಪ ಆಲದಕಟ್ಟಿ ಇವರ ಉದರದಲ್ಲಿ ಜನಿಸಿದ ಶ್ರೀ ಮತಿ ರೇಣುಕಾ ಶಿವಕುಮಾರ ಅವರು ಪ್ರಾಥಮಿಕ ಹಾಗೂ ಪ್ರೌಢಶಾಲಾ, ಕಾಲೇಜು ಶಿಕ್ಷಣವನ್ನು‌ ಹಾವೇರಿಯಲ್ಲಿ ಮುಗಿಸಿದರು.ಶ್ರೀ ಯುತ ಶಿವಕುಮಾರ ಅವರನ್ನು ಕೈ ಹಿಡಿದು ವಿವಾಹದ ನಂತರ ವೃತ್ತಿಪರವಾಗಿ ಹದಿನೈದು ವರ್ಷಗಳಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹಾಗೂ ಶ್ರೀ ಮತಿ ರೇಣುಕಾ ಶಿವಕುಮಾರವರು ತಮ್ಮದೇ ಆದ “ಶ್ರೀ ರೇಣುಕಾಂಬಾ ಎಂಟರ್ ಪ್ರೈಸಸ್” ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಉತ್ತಮ ಗೃಹಿಣಿ,ಪದವೀಧರೆ,
ಸ್ನೇಹಜೀವಿ ಕನಸುಗಾರ್ತಿ ,ಭಾವಜೀವಿ ,ಛಲಗಾರ್ತಿಯಾದ ಇವರಿಗೆ ಮೊದಲಿಂದಲೂ ಬರೆಯುವ ಗೀಳು .ಕಾಲೇಜು ದಿನಗಳಿಂದಲೂ ಮನದಲ್ಲಿ ಮೂಡಿದ ಭಾವಗಳನ್ನು ಆಗಾಗ ಬರೆಯುವದನ್ನು ಹವ್ಯಾಸವಾಗಿ ರೂಡಿಸಿಕೊಂಡಿದ್ದರು.ಬರಹ ಎಂದರೆ ಇಷ್ಟದ ಕೆಲಸವಾಗಿತ್ತು ಲೇಖನಿ ಹಿಡಿದರೆ ಏನಾದರೂ ಗೀಚಬೇಕೆಂಬ ತವಕ ಮನದಲ್ಲಿ ಮೂಡುತ್ತಿತ್ತು.ನನ್ನ ಸುತ್ತಮುತ್ತಲಿನ ಪರಿಸರ, ವಾತಾವರಣ ,ಹಾಗೂ ಶಾಲಾ ಕಾಲೇಜುಗಳಲ್ಲಿ ಪ್ರವಾಸಕ್ಕೆಂದು ಕರೆದುಕೊಂಡು ಹೋಗುತ್ತಿದ್ದ ಅನೇಕ ಸುಂದರ ಪ್ರೇಕ್ಷಣಿಯ ಸ್ಥಳಗಳು ರಮಣೀಯ ಜಲಪಾತಗಳು ಪ್ಯಕೃತಿಯ ಸೊಬಗು ಕವಿತೆಗಳನ್ನ ಬರೆಯಲು ಅವರಿಗೆ ಪ್ರೇರಣೆಯಾಗಿದ್ದವು.

ಶಾಲಾ ಕಾಲೇಜು ದಿನಗಳಿಂದಲೂ ಬರೆಯುವ ಹವ್ಯಾಸ ರೂಢಿಸಿಕೊಂಡಿದ್ದ ರೇಣುಕಾರವರು.
ಕವನ ,ಚುಟುಕು,ಪ್ರಬಂದ ,ಲೇಖನಗಳನ್ನು ಬರೆಯುವುದರಲ್ಲಿ ಎತ್ತಿದ ಕೈ.ಜೊತೆಗೆ ಕಥೆ ಕಾದಂಬರಿ ,ಹಾಗೂ ಧಾರ್ಮಿಕ ಗ್ರಂಥಗಳನ್ನು ಓದುವುದನ್ನು ಇಂದಿಗೂ ರೂಡಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೇ ಪ್ರತಿದಿನ ಧ್ಯಾನ ಮಾಡುವುದು ಮತ್ತು ಶ್ಲೋಕಗಳನ್ನ ಹೇಳುವುದು. ನಾನಾ ಬಗೆಯ ರಂಗೋಲಿ ಬಿಡಿಸುವುದು ಇವರಿಗೆ ಅಚ್ಚುಮೆಚ್ಚು..ಇತ್ತಿಚಿಗೆ ಅನೇಕ ಕವನ ಚುಟುಕುಗಳನ್ನ ವಿವಿಧ ಸಾಹಿತ್ಯ ಬಳಗದಲ್ಲಿ ಬರೆದು ಸುಮಾರು 1500ಕ್ಕೂ ಹೆಚ್ಚು ಅಭಿನಂದನ ಪತ್ರ,ಪ್ರಶಸ್ತಿ ಪತ್ರಗಳನ್ನ ಪಡೆದಿದ್ದಾರೆ. ಇವರ ಕವನ, ಚುಟುಕು ಹಾಗೂ ಲೇಖನಗಳು, ವಿಮರ್ಶೆಗಳು ಈಗಾಗಲೇ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಬೆಳವಾಡಿ ಮಲ್ಲಮ್ಮ,ಪುನೀತ ರಾಜರತ್ನ ಪ್ರಶಸ್ತಿ, ಕಾವ್ಯಶ್ರೀ ಪ್ರಶಸ್ತಿ, ಸಾಹಿತ್ಯ ಶಿರೋಮಣಿ ಪ್ರಶಸ್ತಿ, ರಾಷ್ಟ್ರ ಕವಿ ಕುವೆಂಪು ಪ್ರಶಸ್ತಿಯನ್ನು ಪಡೆದಿದ್ದಾರೆ.

ಈಗಾಗಲೇ ರೇಣುಕಾರವರ ಮೊದಲನೇ ಕವನ ಸಂಕಲನ “ಕಾವ್ಯ ಚಂದ್ರಿಕೆ” ಓದುಗರ ಮೆಚ್ಚುಗೆಯನ್ನು ಪಡೆದಿದೆ. ಈಗ ಮತ್ತೊಂದು ಹೆಜ್ಜೆಯನ್ನಿಡುತ, “ಕಾವ್ಯ ಕನ್ನಿಕೆ” ಎಂಬ ಎರಡನೇ ಕವನ ಸಂಕಲನ ಸಾಹಿತ್ಯ ಲೋಕದಲ್ಲಿ‌ ಸಂಚರಿಸುತ್ತಾ ರಾರಾಜಿಸಲು ಬರುತ್ತಿದೆ.

ಶ್ರೀ ಮತಿ ರೇಣುಕಾ ಶಿವಕುಮಾರವರ ಸಾಹಿತ್ಯ ಸೇವೆಯು ನಿರಂತರವಾಗಿ ಸಾಗಲಿ ಎಂಬುದೇ ನಮ್ಮೆಲ್ಲರ ಆಶಯ ಶುಭವಾಗಲಿ.

ಎಚ್ ಎಸ್ ಆರ್ ಅಜಯ್ ಪ್ರಕಾಶನ ಬೆಂಗಳೂರು

Rating This Book

Reviews

There are no reviews yet.

Be the first to review “ಕಾವ್ಯ ಕನ್ನಿಕೆ”

Your email address will not be published. Required fields are marked *

Top Books