+918310000414
contact@kannadabookpalace.com
+918310000414
contact@kannadabookpalace.com
₹120.00
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಇವು ‘ಲೋಕ ಲೋಲಕದಲ್ಲಿ ಹೃದಯ ಹೂತಿಟ್ಟ’ವನ ಹಾಡುಗಳು. ನಾನು, ಬಂಜರು ಭೂಮಿಯೊಂದು ತೊಟ್ಟಿಕ್ಕಿದ ಮೊದಲ ಹಾಗೂ ಕೊನೆಯ ಮಳೆಹನಿಯನ್ನು ಬಿಡದೆ ಇಂಗಿಸಿಕೊಳ್ಳುವಂತೆ ಈ ಕವಿತೆಗಳನ್ನು ನನ್ನೆದೆಗೆ ಬಾಚಿಕೊಂಡಿದ್ದೇನೆ. ಇಲ್ಲಿ ಬುಡ್ಡಿ ದೀಪದ ಕಣ್ಣೀರೂ ಇದೆ, ಕಡ್ಡಿ ಕೊರೆದವರ ಕುಹಕದ ಬೆಳಕೂ ಇದೆ, ಬಳಿ ಸಾರಿಯೂ ಬೆಳಕಂತೆ ದೂರಾದವಳ ನೆನಪೂ ಇದೆ. ಕವಿ ಸುರೇಶ ಈ ಸಂಕಷ್ಟಗಳ ಕುಲುಮೆಯಲ್ಲಿ ಕುದ್ದ ಕಾಳು. ಎಳೆಯ ಚಿಗುರುಗಳನ್ನು ವಿಮರ್ಶೆ ಎಂಬ ಎಲೆ ಮರೆಯಲ್ಲಿಯೇ ಚಿವುಟಿ, ಹೊಸಕಿ ಹಿಂದೆ ತಳ್ಳುವ ಈ ಬೌದ್ಧಿಕ ಅತಿಸಾರದ ಕಾಲದಲ್ಲಿ, ನಡೆದಷ್ಟೂ ಬೀದಿಯಲ್ಲಿ, ಕವಿತೆ- ಕನಸುಗಳನ್ನು ಎರಚುತ್ತ ಹೋಗುವ ಸುರೇಶರಂಥ ಸಂವೇದನಶೀಲರ ಸಾಲುಗಳನ್ನು ಸಂಭ್ರಮಿಸಬೇಕಾದುದು ನಮ್ಮ ನೈತಿಕ ಜವಾಬ್ದಾರಿಯಾಗಿದೆ.
ಜೀವಸೆಲೆಯನ್ನೇ ಬತ್ತಿಸುವ, ಸಂತೆಯಲಿ ಸತ್ತವನ ಜೇಬಿಗೂ ಕತ್ತರಿ ಹಾಕುವ, ಪ್ರೀತಿಯೆಂಬ ಸಹವಾಸಕ್ಕೆ ಸೋತರೂ ಸಂಕಟವನ್ನೇ ಉಣಿಸುವ ಈ ಭಾವಶೂನ್ಯದ ವೇಳೆಯಲ್ಲಿ ಕವಿಮಿತ್ರ ಸುರೇಶ ಎದೆ ಒದ್ದೆಗೊಳಿಸುವ ಎಷ್ಟೊಂದು ಪದ್ಯಗಳನ್ನಿಲ್ಲಿ ಪೋಣಿಸಿಟ್ಟಿದ್ದಾನೆ. ‘ನೆಲ ಮುಗಿಲ, ಮನದಿಗಿಲ, ಜ್ಞಾನದ ಸಿಡಿಲಾದ’ ಬಾಬಾ ಸಾಹೇಬರ ಕಾಳಜಿಗಳ ಕಡಲಿಗೆ ಮುಖಾಮುಖಿಯಾಗಿ ನಿಂತು ಸಾಮರಸ್ಯದ ದಡವ ಹುಡುಕುತ್ತಿದ್ದಾನೆ. ಇಲ್ಲಿ ಯೋಚನೆ, ಆಲೋಚನೆ, ಯೋಜನೆಗಳೆಲ್ಲವೂ ಕವಿತೆಯಾಗಿವೆ. ತಾವೋ ಹೇಳುತ್ತಾನೆ. “ಬಣ್ಣಿಸಬಹುದಾದ ದಾರಿ ನಿತ್ಯದ ದಾರಿ ಅಲ್ಲ, ಹೇಳಬಹುದಾದ ಹೆಸರು ನಿತ್ಯದ ಹೆಸರಲ್ಲ” ಹಾಗೆಯೇ ನಿತ್ಯ ಹುಟ್ಟದ ಕವಿತೆ ನಮ್ಮ ಪ್ರೀತ್ಯಗಳನ್ನು ನಡೆಯಿಸುವುದರಿಂದ ಕವಿ ಮತ್ತು ಕವಿತೆಗಳಿಲ್ಲದ ಸಮಾಜಕ್ಕೆ ಯಾವ ಅರ್ಥವೂ ಇಲ್ಲ. ಕವಿ ಸುರೇಶ ರಾಜಮಾನೆ ಪ್ರಸ್ತುತ ಕವಿತೆಗಳಲ್ಲಿ ಬಿಸಿಲ ಕೊಯ್ದು ಬೆಳಕಿನ ತುಂಡುಗಳಾಗಿಸಿ ನಮ್ಮ ಮುಂದಿಟ್ಟು ನಿರಾಳನಾಗಿದ್ದಾನೆ. ನಾವು ನೀಗಿಸಿಕೊಳ್ಳುವ ನೆಲಗಳಾಗಬೇಕಿದೆ ಅಷ್ಟೆ. ಬನ್ನಿ ಬಾಚಿಕೊಳ್ಳೋಣ ಬೆಳಕನ್ನು, ಇಲ್ಲಿ ಕಳೆದುಕೊಳ್ಳಬೇಕಾದುದು ಏನೂ ಅಲ್ಲವೆ?
ಡಾ. ರಾಜಶೇಖರ ಮಠಪತಿ (ರಾಗಂ)
ಬೆಂಗಳೂರು
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.