+918310000414
contact@kannadabookpalace.com
+918310000414
contact@kannadabookpalace.com
₹120.00
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಮಹಿಳಾ ಸಾಹಿತ್ಯವೆಂದರೆ ಒಂದು ಕಾಲಕ್ಕೆ ಆಡುಗೆ ಮನೆ ಸಾಹಿತ್ಯ ಎನ್ನುವ ಕಾಲವಿತ್ತು ಆದರೆ ಇತ್ತೀಚೆಗೆ ಮಹಿಳೆ ತಾನು ಕಂಡ ಸಮಾಜದಲ್ಲಿನ ಸಮಸ್ಯೆ ಸಾಧನೆ ಏರಿಳಿತಗಳಿಗೆ ಸ್ಪಂದಿಸುವ ಸಾಹಿತ್ಯವನ್ನು ರಚಿಸುತ್ತಿದ್ದಾಳೆ ಎನ್ನುವುದಕ್ಕೆ ಸವಿತಾ ಮುದ್ದಲ್ ರವರ ಸಾಹಿತ್ಯವೇ ಸಾಕ್ಷಿಯಾದಂತಿದೆ. ಬರೀ ಮೊಬೈಲ್ನಲ್ಲಿ ಕಳೆದುಹೋಗುವ ಈಗಿನ ಕಾಲದಲ್ಲಿ ತಮ್ಮ ಮನೆ ನಿಭಾಯಿಸುವ ಗುರುತರ ಜವಾಬ್ದಾರಿ ನಡೆವೆಯು ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕಾವ್ಯ. ಕತೆ,ಲೇಖನ, ಸ್ಪರ್ಧೆ ಇತ್ಯಾದಿ ಯಲಿ ಮೇಲುಗೈ ಸಾಧಿಸುತ್ತಿರುವ ಲೇಖಕಿ ಸವಿತಾ ಮುಚ್ಚಲ್‌ರವರು.
ರಾಯಚೂರು ಜಿಲ್ಲೆಯ ಐತಿಹಾಸಿಕ ಪಟ್ಟಣ ಮುದಗಲ್ಲಿನವರಾದ ಸವಿತಾರವರು ಓದಿದ್ದು ಬಿ.ಕಾಂ, ಎಮ್ ಬಿ ఎ. ಅದರು ಅಭಿರುಚಿ ಸಾಹಿತ್ಯವಾಗಿದೆ. ನಿತ್ಯವು ಅವರ ಲೇಖನಗಳು ನಾಡಿನ ಮಾಧ್ಯಮದಲಿ ಪ್ರಸಾರ, ಪ್ರಚಾರವಾಗುತ್ತಿರುತ್ತವೆ. ಕವನ ಸಂಕಲನದ ಜೊತೆಗೆ ಕಥಾ ಸಂಕಲನವನ್ನು ಓದುಗರ ಕೈಗಿಡಲು ತವಕದಲಿದ್ದಾರೆ ಸಾಹಿತ್ಯ ಲೋಕಕ್ಕೆ ಹೊಸಬರಾದರು ಇವರ ಸಾಹಿತ್ಯದ ಪ್ರೌಢಿಮೆ ಭಾಷೆಯ ಬಳಕೆ ಹಿಡಿತದಲ್ಲಿದೆ ಅಂತೆಯೆ ಇವರಿಗೆ ಕತೆಕಟ್ಟುವ ಕಲೆಯು, ಕತೆ ಹೇಳುವ ರೂಢಿಯು ಕರಗತವಾಗಿದೆ ಎನ್ನಬಹುದು.
ಬಡತನದ ಜೀವನವನ್ನು ಬಲುಹತ್ತಿರದಿಂದಲೆ ಕಂಡಿರುವ ಸವಿತಾರವರು ತಮ್ಮ ಬಹುತೇಕ ಕತೆಗಳಲಿ ಬಡತನದ ಛಾಯೆಯಲಿ ಮೂಡಿಬರುತ್ತವೆ ಅಲ್ಲದೆ ತಾವು ಒಬ್ಬ ಮಹಿಳೆಯಾಗಿ ಹಲವು ಮಹಿಳೆಯರ ಬದುಕನ್ನು ಸೂಕ್ಷ್ಮ ಕನ್ನಡಕ ಧರಿಸಿ ಪರಾಮರ್ಶಿಸಿದಂತಿದೆ. ಮಹಿಳೆ ಸಮಾಜದಲಿ ಪ್ರೀತಿ-ಪ್ರೇಮ, ಸಂಸಾರದ ಸರಪಳಿಯಲಿ ತೊಳಲಾಟ, ಬಡತನ,ಅಸಹಾಯಕತೆ, ಮುಂತಾದ ಸಂಕೋಲೆಯಲ್ಲಿ ಸಿಲುಕಿಯು ಕೆಲವೊಮ್ಮೆ ಸೋಲುತ್ತಾಳೆ ಮತ್ತೊಮ್ಮೆ ಗೆಲುವಾಗಿ ಸಮಸ್ಯೆಗಳ ಎದುರು ಸೆಟೆದು ನಿಲ್ಲುತ್ತಾಳೆ.
ಹೃದಯವೀಣೆ ಕತೆಯಲಿ ಅರ್ಪಿತಾ-ಪ್ರಣವ್ ಎನ್ನುವ ಪ್ರೇಮಿಗಳು ಪ್ರೀತಿಯಲಿ ಬಿದ್ದು ಮದುವೆಯಾಗಿ ಕುಟುಂಬಸ್ಥರಿಂದ ದೂರವಾಗಿ ಹೊರಬಂದು ಸಂಸಾರ ನಡೆಸುತ್ತಾರೆ ಪ್ರಣವ್ ನಿಗೆ ಹೆಣ್ಣಿನ ಕಡೆಯವರಿಂದ ಹಲ್ಲೆ ನಡೆದು ಹಾಸಿಗೆ ಹಿಡಿಯುತ್ತಾನೆ ಅರ್ಪಿತ ಅದನ್ನು ಹೆದರಿಸಿ ಗಂಡನನ್ನು ಬದುಕಿಸಿಕೊಳ್ಳುತ್ತಾಳೆ ಪುನಃ ಎರಡು ಕುಟುಂಬಗಳು ಇವರನ್ನು ಸಂದಿಸಿ ಹೊಸಜೀವನಕೆ ನಾಂದಿಮಾಡುತ್ತಾರೆ. ಹಳ್ಳಿಯಲ್ಲಿ ಅರಳಿದ ಸುಮಾ ಎನ್ನುವ ಕತೆಯಲಿ ತಾಯಿ ಇಲ್ಲದ ಯುವತಿ ಮಲತಾಯಿ ಶೋಷಣೆಗೆ ಸಿಲುಕಿ ಪರಿಚಯಸ್ಥರ ಸಹಾಯ ದೊರಕಿ ಓದಿ ಕೆಎಎಸ್ ಅಧಿಕಾರಿಯಾಗಿ ಪುನಃ ತನ್ನ ಹಳ್ಳಿಯ ಚಿತ್ರಣವನ್ನೇ ಬದಲಿಸುತ್ತಾಳೆ.
ತಮ್ಮ ಹಲವಾರು ಕತೆಗಳಲ್ಲಿ ಸ್ತ್ರೀ ಸಮಸ್ಯೆಗಳನೆ ಎರಕ ಹೊಯ್ದಿವೆ. ಕಾವ್ಯ ಮತ್ತು ಲೇಖನದಲ್ಲಿ ಇರುವ ಹಿಡಿತ ಕತೆಗಳು ಸವಿತಾರವರು ಇನ್ನೂ ಅಧ್ಯಯನ ಶೀಲರಾಗಬೇಕು ಎನಿಸುತ್ತದೆ. ಆದರು ಅವರ ಕತೆಗಳನ್ನು ಓದುತಿದ್ದರೆ ಕತೆಯ ಪಾತ್ರಗಳು ಓದುಗರೊಡನೆ ಸಂವಾದ ನಡೆಸಿದಂತಿರುತ್ತವೆ ಎಲ್ಲಿಯೂ ಬೇಸರ ತರದೆ ಓದಿಸಿಕೊಳ್ಳುತ್ತವೆ ಇಂತಹ ಅವಸರದ ಕಾಲಘಟ್ಟದಲ್ಲಿಯು ಕಾವ್ಯದ ಬೆನ್ನು ಬಿದ್ದು ನಿರಂತರವಾಗಿ ಬರೆಯುತ್ತಿರುವ ಸವಿತಾ ಸಾಹಿತ್ಯ ಲೋಕದ ಓಯಸಿಸ್ ನಂತೆ ಕಂಡು ಬರುತ್ತಾರೆ ಅವರ ಕತೆಗಳು ಹೃದಯಸ್ಪರ್ಶಿ ಯಾಗಿವೆ.ಓದುಗರ ತಮ್ಮ ಅನುಭವವೆ ಈ ಕತೆಯಲ್ಲಿದೆ ಎನಿಸುತ್ತದೆ. ಒಟ್ಟಾರೆಯಾಗಿ ಓದುಗ ಲೋಕಕೆ ಕತೆಗಳು ಹಿತವಾಗುತ್ತವೆ ಎನ್ನುವುದರಲಿ ಯಾವ ಅನುಮಾನವು ಇಲ್ಲ ಅವರಿಂದ ಮತ್ತಷ್ಟು ಸಾಹಿತ್ಯ ಹೊರಬರಲಿ ನಮ್ಮ ನಾಡಿನಲಿ ಸಾಹಿತ್ಯ ಕಣಿಯಾಗಿ ಪ್ರಜ್ವಲಿಸಲಿ ಎಂದು ಹಾರೈಸುವೆ. ಲಕ್ಷಣ ಬಾರಿಕೇರ್
ಲಿಂಗಸಗೂರು
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.