+918310000414
contact@kannadabookpalace.com
+918310000414
contact@kannadabookpalace.com
₹110.00
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಕನ್ನಡದ ವರ್ತಮಾನದಲ್ಲಿ ಅತ್ಯಂತ ಶೀಘ್ರವಾಗಿ ಮುಖಾ ಮುಖಿಯಾಗುವ ಮತ್ತು ಅಸ್ತಿತ್ವದ ನೆಲೆಗಳ ಒಳಸುಳಿವುಗಳನ್ನು ಭಿತ್ತಿಯಾಗಿಟ್ಟುಕೊಂಡು ಡಾ. ದೊರೇಶ ಬಿಳಿಕೆರೆಯವರು ತಮ್ಮ ಸುತ್ತಮುತ್ತಲ ಮಾನವೀಯ, ಸಹಜ ಸಂಪನ್ನವಾದ ಹಾಸನ ಸೀಮೆಯ ಸೂಕ್ಷ್ಮಗ್ರಾಹಿತ್ವದ ಸುಡುವಾಸ್ತವಗಳನ್ನೂ, ತನ್ನೂರಿನ ಸಮೃದ್ಧಾನುಭವಗಳನ್ನೂ, ಭವಿತವ್ಯದ ದಿಕ್ಕುದೆಶೆಗಳನ್ನೂ ತಮ್ಮ ಕಥನಕದ ವಸ್ತುವಾಗಿಸಿಕೊಂಡು ದುಡಿಸಿಕೊಂಡಿದ್ದಾರೆ. ವರ್ಗ ಜಾತಿಗಳ ಪರಿಸ್ಥಿತಿ, ಕೃಷಿ ಅವಲಂಭಿತ ಜೀವನ, ಬಡತನ, ಸಿರಿತನ, ಜನಾಂಗೀಯ ಶೂನ್ಯತೆ, ಪ್ರಾಕೃತಿಕ ಸವಾಲುಗಳು. ನವಿರಾದ ಪ್ರೇಮ-ಪರಿಪ್ರೇಕ್ಷೆ, ಅನಿವಾರ್ಯ-ಆತಂಕಗಳು, ಅರಿವಿನ ಮೂಲ ಸಲೆಯನ್ನು, ಜ್ಞಾನದ ಕ್ಷಿತಿಜವನ್ನು ವಿಸ್ತರಿಸಿರುವ ಗೌಡೀಯ ಭಾಷೆಯ ಸೊಗಸು ಮತ್ತು ಪರಂಪರೆ ಹಾಗೂ ಸಮಕಾಲೀನ ಜೀವನದ ಸ್ಥಿತಿಗತಿ ಬಯಲುಸೀಮೆಯ ಕತೆಗಾರರಿಗೆ ಅನಾಯಸವಾಗಿ ಒಲಿದು ಬಂದಿದೆ. ಹಳ್ಳಿ ಗಳೊಡಲ ಸ್ಮೃತಿ ಜೀವಂತಗೊಳಿಸುವ ನಿವೇದನೆ ನಿಖರವಾಗಿ ಮಡುಗಟ್ಟಿ ನಿಂತಿದೆ. ಕದ್ರ-ರುಕ್ಕಿಣಿಯರ ಯಶಸ್ಸು, ವಿನೋದನ ಬಾಡು, ಸಂತನ ಕನಸು ಮತ್ತು ಶ್ರೇಯಸ್ಸು, ಭೀಮಗಳ ಕೋಣ. ಕೃಷ್ಣನ ಪುಂಡತನ ಹೀಗೆ ಹತ್ತು ಹಲವು ಫಲಬಿಡುವ ಶಬ್ದಚಿತ್ರ ಗಳಲ್ಲಿ ಕಥೆಗಾರರು ಕಥೆ ಕಟ್ಟುವ ಅಸಲಿ ಕಸುಬನ್ನು ಇನ್ನಷ್ಟು ತೀವ್ರವಾಗಿ ಬೇರೆ ಬೇರೆ ಕಥೆಗಳನ್ನು ರೂಡಿಸಿ ಕೊಂಡರೆ ಮುಂಬರುವ ನಾಳೆಗಳಲ್ಲಿ ಕನ್ನಡಕ್ಕೊಬ್ಬ ಅತ್ಯುತ್ತಮ ಕಥೆಗಾರ ದಾಖಲಾಗುವುದರಲ್ಲಿ ಸಂಶಯವಿಲ್ಲ.
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.