SKU: 14986

ಕಾಡು ಪ್ರತಿಭೆ ಮಾರಪ್ಪ

170.00

ಬದುಕು-ಸಾಧನೆ

Author : ಎಚ್.ಎ. ಪುರುಷೋತ್ತಮರಾವ್

Publishers Name : ಕದಂಬ ಪ್ರಕಾಶನ 

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ಸದಾ ನಿಸರ್ಗದ ನಿಯಂತ್ರಣಕ್ಕೆ ಒಳಪಟ್ಟ ಕಾಡೊಂದರ ಅಭಿವೃದ್ಧಿಯ ಹಿಂದಿನ ರೂವಾರಿಗಳ ಶ್ರಮ, ಪ್ರತಿಭೆಗಳು ಸಾಮಾನ್ಯವಾಗಿ ಕಾಡಿನ ಗರ್ಭದಲ್ಲೇ ಕಣ್ಮರೆಯಾಗುವುದುಂಟು. ಇಡೀ ಜೀವನವನ್ನು ಅರಣ್ಯಗಳ ಏಳಿಗೆಗಾಗಿಯೇ ಮೀಸಲಿರಿಸಿ ಎಲೆಮರೆಯಲ್ಲೇ ಕಾಯಾಗಿ ನೇಪಥ್ಯಕ್ಕೆ ಸರಿದ ಮಹನೀಯರೆಷ್ಟೋ ಮಂದಿ ನಮ್ಮಲ್ಲಿದ್ದಾರೆ. ಇಂಥ ಕೆಲವೇ ವ್ಯಕ್ತಿತ್ವಗಳಲ್ಲಿ ಅರಣ್ಯಾಧಿಕಾರಿ ಮಾರಪ್ಪನವರೂ ಒಬ್ಬರು. ಅರಣ್ಯದ ಕಿರು ಉತ್ಪನ್ನವೆಂದೇ ಪರಿಗಣಿಸಲಾದ ಹುಣಸೆ ಮೂಲಕವೇ ಬರಡು ಜಿಲ್ಲೆಯೊಂದರ ಜನಸಮುದಾಯದ ಆರ್ಥಿಕ ಉನ್ನತಿ ಸಾಧಿಸುವ ಕನಸು ಕಂಡ ಮಾರಪ್ಪನವರ ದೂರದೃಷ್ಟಿ, ಆಶಯಗಳನ್ನು ಈ ಪುಸ್ತಕದಲ್ಲಿ ಪರಿಚಯಿಸಲು ಯತ್ನಿಸಲಾಗಿದೆ. ಅಧಿಕಾರದ ನಡುವೆಯೂ ಜನಸಮುದಾಯದ ಬಗ್ಗೆ ಸಹಜಪ್ರೀತಿ, ಅರಣ್ಯ, ಪರಿಸರಗಳ ಬಗ್ಗೆ ಸಾಮಾಜಿಕ ಎಚ್ಚರ ಎರಡನ್ನು ಹೊಂದಿದ್ದ ಮಾರಪ್ಪನವರಂಥ ವ್ಯಕ್ತಿಯೊಬ್ಬರನ್ನು ಇಂದಿನ ಪೀಳಿಗೆಯವರಿಗೆ ಪರಿಚಯಿಸುವುದೇ ಒಂದು ಸಾಮಾಜಿಕ ಜವಾಬ್ದಾರಿ. ಈ ಕಾರ್ಯವನ್ನು ಈ ಕೃತಿಯಲ್ಲಿ ಎಚ್.ಎ. ಪುರುಷೋತ್ತಮರಾವ್ ಪ್ರೀತಿಯಿಂದ ನಿರ್ವಹಿಸಿದ್ದಾರೆ.

ವೃತ್ತಿಯಿಂದ ಅರಣ್ಯ ಇಲಾಖೆಯ ಉದ್ಯೋಗಿಯಾಗಿ ನಿವೃತ್ತರಾಗಿರುವ ಎಚ್.ಎ. ಪುರುಷೋತ್ತಮರಾವ್ ಪ್ರವೃತ್ತಿಯಿಂದ ಲೇಖಕರು. ಸಾಹಿತ್ಯಾಭಿರುಚಿಯುಳ್ಳ ಇವರು ನಮ್ಮ ನಿತ್ಯಬದುಕಿಗೆ ಸಂಬಂಧಿಸಿದಂತೆ ಹಲವಾರು ವಿಜ್ಞಾನ ಬರಹಗಳನ್ನು ಬರೆದಿದ್ದಾರೆ. ‘ಕಿವುಡನಮಾಡಯ್ಯ ತಂದೆ’, ‘ಭೂರಮೆಗೆ ಸೈಥೊಸ್ಕೋಪ್’, ‘ಗಾಳಿ ಬೇರುಗಳು’, ‘ಪೆದ್ದನ್ನನ ಇಕಾಲಜಿ ಮತ್ತು ಪರಿಸರ ಲೇಖನಗಳು’ ಇನ್ನೂ ಮುಂತಾದ ಕೃತಿಗಳನ್ನು ಈಗಾಗಲೆ ಪ್ರಕಟಿಸಿದ್ದಾರೆ.

ನಾಡು ಮರೆತ ಕಾಡು ಪ್ರತಿಭೆ ಮಾರಪ್ಪನವರ ಜೀವನ, ಸಾಧನೆ ಕುರಿತಂತೆ ಇಂಥದ್ದೊಂದು ವಿಶಿಷ್ಟ ಕೃತಿಯನ್ನು ರಚಿಸಿರುವ ಪುರುಷೋತ್ತಮರಾವ್ ಅಭಿನಂದನಾರ್ಹರು.

Rating This Book

Reviews

There are no reviews yet.

Be the first to review “ಕಾಡು ಪ್ರತಿಭೆ ಮಾರಪ್ಪ”

Your email address will not be published. Required fields are marked *

Top Books