SKU: 16189

ಹೇಳ್ದವ್ರ ಮಾತು ಯಾರ್ ಕೇಳ್ತಾರೀಗ

Original price was: ₹120.00.Current price is: ₹115.00.

Author : ಮಹಾಂತೇಶ ಬೇರಗಣ್ಣವರ

Publishers Name : ಕಪ್ಪತ್ತಗಿರಿ ಪ್ರಕಾಶನ

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ಮಾನವ ಸಂಘ ಜೀವಿ. ಅವನಿಗೆ ಭಾಷೆ ಒಂದು ಸಂವಹನ ಮಾಧ್ಯಮ. ಈ ಮಾಧ್ಯಮದ ಮೂಲಕ ತನ್ನ ನೋವು ನಲಿವು ಹಾಗೂ ಅನಿಸಿಕೆಗಳನ್ನು ವ್ಯಕ್ತಪಡಿಸಲು ಸಾಹಿತ್ಯ ಪೂರಕವೆನಿಸುತ್ತದೆ. ಸಾಹಿತ್ಯದಲ್ಲಿ ಕಾವ್ಯ ಸೃಷ್ಟಿ ಅಷ್ಟು ಸುಲಭದ ಮಾತೇನಲ್ಲ, ಸೃಷ್ಟಿಸಿದ ಕಾವ್ಯ ಸಮಾಜದ ಅಂಕುಡೊಂಕು ತಿದ್ದಲು ಸಹಕಾರಿ ಆಗಬೇಕು. ಆ ಹಿನ್ನಲೆಯಲ್ಲಿ ಸೃಜನಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿರುವ ಮಹಾಂತೇಶ ಬೇರಗಣ್ಣವರ ಅವರು ಪ್ರತಿಭಾವಂತ ಯುವ ಸಾಹಿತಿ. ಇವರ ಮೊದಲನೇ ಕೃತಿ “ಹೇಂದ್ರ ಮಾತು ಯಾರ್ ಕೇಳ್ತಾರಿಗ” ಎಂಬ ಕವನ ಸಂಕಲನ ಹೊರ ತರುತ್ತಿರುವುದು ಸಂತಸದ ಸಂಗತಿ. ಕವಿ ಪ್ರಸ್ತುತ ಸಮಾಜದಲ್ಲಿ ನಡೆಯುವ ವಾಸ್ತವ ಘಟನೆಗಳನ್ನು ಮನಸ್ಸಿಗೆ ತಟ್ಟುವ ಹಾಗೆ ತುಲನಾತ್ಮಕವಾಗಿ ತಮ್ಮ ಕವಿತೆಯಲ್ಲಿ ಹೆಣೆದಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅಡ್ಡ ದಾರಿಯಲ್ಲಿ ಸಾಗುತ್ತಿರುವ ಯುವ ಶಕ್ತಿಯ ಕಿವಿ ಹಿಂಡಿ ಬುದ್ದಿ ಹೇಳುತ್ತಿದ್ದಾರೆ.

ಆದರೆ ಹೇಳಿದವರ ಮಾತುಗಳನ್ನು ಈಗ ಯಾರೂ ಕೇಳುವುದಿಲ್ಲ. ಹಾಗಾಗಿ ಇಲ್ಲಿ ಕವಿ ತಮ್ಮ ಕವಿತೆಗಳ ಮೂಲಕ ಸಮಾಜಕ್ಕೆ ಎಚ್ಚರಿಕೆಯ ಸಂದೇಶ ನೀಡಿ ಜಾಗೃತಿ ಮೂಡಿಸುವ ಜವಾಬ್ದಾರಿಯು ಹೊತ್ತಂತಿದೆ. ಕವಿಯ ನೇರ ಭಾವದ ಬರಹ ಖಡ್ಗದಂತೆ ಹರಿತವಾಗಿವೆ. ಓದುಗರನ್ನು ಬೆರಗು ಮಾಡುವ ಬೇರಗಣ್ಣವರ ಬದುಕಿನ ಅನುಭವಗಳನ್ನು ಅರ್ಥಪೂರ್ಣವಾಗಿ ಬರೆದು ಬದುಕನ್ನು ವ್ಯರ್ಥ ಮಾಡಿಕೊಳ್ಳುವವರಿಗೆ ಮಾರ್ಗದರ್ಶನ ನೀಡಿದ್ದಾರೆ.

ಅವರ ಜೀವನದ ನೋವು, ನಲಿವು, ಸುಖ, ದುಃಖ, ಆಕ್ರೋಶ, ಅಸಹಾಯಕತೆ, ಸ್ನೇಹ, ಪ್ರೀತಿ, ಕರುಣೆ, ತ್ಯಾಗ ಇಂಥಹ ಮೌಲ್ಯಗಳ ಭಂಡಾರವೇ ಅವರ ಕವಿತೆಗಳಲ್ಲಿ ತುಂಬಿವೆ. ‘ಗುರುವಿಲ್ಲದ ಮಠವಲ್ಲ, ಹಿರಿಯರು ಇಲ್ಲದ ಮನೆ ಅಲ್ಲ’ ಎನ್ನುವ ಹಾಗೆ ಈ ಕವನ ಸಂಕಲನ ಓದುಗರಿಗೆ ಕೈಗನ್ನಡಿ ಹಿಡಿದಂತಿದೆ.

 

Rating This Book

Reviews

There are no reviews yet.

Be the first to review “ಹೇಳ್ದವ್ರ ಮಾತು ಯಾರ್ ಕೇಳ್ತಾರೀಗ”

Your email address will not be published. Required fields are marked *

Top Books