+918310000414
contact@kannadabookpalace.com
+918310000414
contact@kannadabookpalace.com
₹200.00
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಸಾಂಪ್ರದಾಯಿಕ ಆಕರಗಳ ವ್ಯಾಪಕ ಪರಿಶೀಲನೆ ಹಾಗೂ ಉಪಯೋಗದೊಡನೆ ಪ್ರಸಕ್ತ ಸನ್ನಿವೇಶಗಳ ವಿಶ್ಲೇಷಣೆ ಕೈಕೊಂಡು ಸೈ ಅನ್ನಿಸಿಕೊಂಡವರು ಡಾ. ಎಫ್.ಟಿ. ಹಳ್ಳಿಕೇರಿ. ಶಾಸನಗಳ ಅಧ್ಯಯನದಂಥಾ ಕ್ಲಿಷ್ಟ ಹಾಗೂ ಸಂಕೀರ್ಣ ಹಾಡಿನಲ್ಲಿ ಸಾಗಿ, ಅರ್ಥೈಸಿ ಸರಳ ವಿವರಣೆಯೊಡನೆ ಆಯಾ ಸಂಶೋಧನ ವಸ್ತುವನ್ನು ನಿರೂಪಿಸುವಲ್ಲಿ ಅವರು ಸಿದ್ಧಹಸ್ತರೆಂಬುದರಲ್ಲಿ ಎರಡು ಮಾತಿಲ್ಲ. ಇನ್ನು ಕಾವ್ಯಾಂತರ್ಗತ ಸಾಂಸ್ಕೃತಿಕ ಅಂಶಗಳನ್ನು ಹೆಕ್ಕಿ ಸಾಂದರ್ಭಿಕವಾಗಿ ಪರಿಶೀಲನೆ ಗೊಳಪಡಿಸುವುದರಲ್ಲೂ ಅವರದು ವಿಮರ್ಶಾ ನೋಟವಷ್ಟೇ ಅಲ್ಲ, ನಿರ್ಣಯ ಯುತವಾಗಿ ಸಾಧಿಸಬಲ್ಲ ಸಾಮರ್ಥ್ಯವೂ ಅವರಿಗೆ ಸಿದ್ದಿಸಿದೆ. ಒಟ್ಟು 25 ಸಂಪ್ರಬಂದಗಳ ಗುಡ್ಡವಾಗಿ ಹೊರಬಂದಿರುವ ‘ಹಾಲುಮತ ಸಂಸ್ಕೃತಿ-2’. ಶಾಸನ ಸಾಹಿತ್ಯ-ದಾಖಲೆ ಕ್ಷೇತ್ರಕಾರ್ಯ ಮಾಹಿತಿಗಳ ನೆಲೆಯಲ್ಲಿ ಅನನ್ಯವಾಗಿ ಅನಾವರಣ ಗೊಂಡಿರುವುದು ಬೆರಗುಗೊಳಿಸುವ ಸಂಗತಿ.
ಸಧ್ಯಕ್ಕೆ ಹಾಲುಮತ ಸಾಹಿತ್ಯ-ಸಂಸ್ಕೃತಿ ಸಂಘಟನೆಗಳ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿ ಸಮಾಜದ ಜಾಗೃತಿಗಾಗಿ ಕಾಳಜಿಯುಕ್ತವಾಗಿ ಪ್ರವರ್ತಿಸುತ್ತಿರುವವರಲ್ಲಿ ಇಂದು ಡಾ. ಎಫ್.ಟಿ.ಹಳ್ಳಿಕೇರಿಯವರು ಮುಂಚೂಣಿಯಲ್ಲಿರುವರೆಂಬುದಂತೂ ವಾಸ್ತವ ಸಾಹಿತ್ಯ-ಸಂಸ್ಕೃತಿಗಳಲ್ಲಿ ಅಳವಾದ ವಿದ್ವತ್ ಪಡೆದಿರುವ ಡಾ. ಹಳ್ಳಿಕೇರಿಯವರು, ಕುರುಬ ಸಮಾಜ ಮಾತ್ರವಲ್ಲದೆ ಇತರೆ ಸಮಾಜಗಳೊಡನೆ ಅದು ಹೊಂದಿರ ಬೇಕಾದ ಮದುರ ಬಾಂಧವ್ಯದ ಬಗೆಗೂ ಚಿಂತನೆ ನಡೆಸಿರುವರು ಅವರ ಇಲ್ಲಿಯ ಪ್ರಬಂಧಗಳೇ ಈ ಮಾತಿಗೆ ಉದಾಹರಣೆಯಂತಿವೆ. ಮುಖ್ಯವಾಗಿ, ಈಗಿನ ಪರಿಸ್ಥಿತಿಯಲ್ಲಿ ಕರ್ನಾಟಕದ ಬುಡಕಟ್ಟು ಸಮುದಾಯಗಳ ಸಂಸ್ಕೃತಿ ಚಿಂತನೆಯ ಮಣ್ಣಗೆ, ಡಾ. ಹಳ್ಳಿಕೇರಿಯವರ ಕೊಡುಗೆಯೂ ಅಮೂಲ್ಯವೆಂದು ಪರಿಗಣಿಸುವ ಅರಿವಾರ್ಯತೆ ಇರುವುದು ಸ್ಪಷ್ಟ ಅವರಿಗೆ ಯಶಸ್ಸನ್ನು ಹಾರೈಸುತ್ತೇನೆ.
ಪ್ರೊ. ಲಕ್ಷ್ಮಣ ತೆಲಗಾವಿ
ಮುನ್ನುಡಿಯಿಂದ
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.