+918310000414
contact@kannadabookpalace.com
+918310000414
contact@kannadabookpalace.com
₹70.00
PUBLISHERS Name: Husenasab Vanageri
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ನಮ್ಮ ಸಮಕಾಲೀನ ಕವಿ ಮಿತ್ರರಲ್ಲಿ ಒಬ್ಬರಾದ ಶ್ರೀ ಹುಸೇನಸಾಬ ವಣಗೇರಿ ಅವರನ್ನು ಮೊಟ್ಟ ಮೊದಲನೆಯದಾಗಿ ಕನ್ನಡ ಸಾರಸ್ವತ ಲೋಕಕ್ಕೆ ಆತ್ಮೀಯವಾಗಿ ಸ್ವಾಗತಿಸಿ ತಿಸಿ ಅಭಿನಂದಿಸುತ್ತೇನೆ. “ಎದೆಗಂಟಿದ ವಿರಹ” ಕವನ ಸಂಕಲನ ಚೊಚ್ಚಲ ಕೃತಿಯಾಗಿದ್ದರು ಕೂಡ. ಕವಿತೆ ರಚನೆಗೆ ಆಯ್ದುಕೊಂಡ ವಿಷಯ ವಸ್ತು, ಪದಗಳನ್ನು ದುಡಿಸುವ ಬಗೆ ಎಲ್ಲವು ವಿಭಿನ್ನ ಮತ್ತು ವಿಶೇಷ, ಕಾವ್ಯ ಕಟ್ಟುವ ಕಲೆ ಅವರಿಗೆ ಕರಗತವಾಗಿದೆ ಎಂದರೆ ತಪ್ಪಾಗಲಾರದು. ಕವಿತೆ ರಚನೆಯೆಂದರೆ ಅದೊಂದು ಧ್ಯಾನ. ತಪಸ್ಸು ಇದ್ದಂತೆ…! ಒಂದಿಷ್ಟು ಭಂಗ ಬರದಂತೆ ನಡೆದುಕೊಳ್ಳಬೇಕಾಗುತ್ತದೆ. ಮನಸ್ಸು ಮತ್ತು ಭಾವನೆಯನ್ನು ಎಡೆಬಿಡದೆ ಮಥನ ಮಾಡಿದಾಗ ನವನೀತದಂತೆ ಕವಿತೆ ಹದವಾಗಿ ಮುದವಾಗಿ ಜನ್ಮತಾಳಿ ಎಲ್ಲರೆದೆಯಲ್ಲಿ ತನ್ನ ಘಮಲನ್ನು ಹರಡಿದಾಗ ಮಾತ್ರ ಆ ತಪಸ್ಸು ಯಶಸ್ವಿಯಾದಂತೆ ಲೆಕ್ಕ.
ವಯೋಮಾನಕ್ಕೆ ಸಹಜವೆಂಬಂತೆ ಅಲ್ಲಲ್ಲಿ ಮಧುರ ಪ್ರೇಮ, ವಿರಹ, ಕನಸು, ಕನವರಿಕೆಗಳು ಕಣ್ ತೆರೆದುಕೊಳ್ಳುತ್ತವೆ. ಕವಿಗೆ ಜಾತಿ, ಧರ್ಮದ ಹಂಗಿಲ್ಲ. ಪ್ರಾಂಜಲ ಮನಸ್ಸಿನೊಂದಿಗೆ ಈ ಕವನ ಸಂಕಲನದಲ್ಲಿ ಅಪ್ಪನ ಇರುವಿಕೆಯನ್ನು, ಬುದ್ಧನ ಬರುವಿಕೆಯನ್ನು, ಬಸವಣ್ಣ ಬದುಕಿದ ದಾರಿಯನ್ನು, ನವಮಾಸ ಹೆತ್ತು ಹೊತ್ತು ತುತ್ತಿಟ್ಟ ಅವ್ವನನ್ನು ಮೊದಲು ಮಾಡಿಕೊಂಡು ಪ್ರೀತಿ, ಸ್ನೇಹದ ನೆನಪುಗಳೊಂದಿಗೆ ಬಾಲ್ಯದ ಬುತ್ತಿ ಗಂಟನು ಬಿಚ್ಚಿಟ್ಟು, ರಂಜಾನ ಹಬ್ಬದಲ್ಲಿ ಪ್ರಾರ್ಥನೆಗೈದು ಕವಿತೆ ಬರೆಯುವ ಕವಿಮಿತ್ರ ಹುಸೇನಸಾಬ ವಣಗೇರಿಯವರು ಮೊದಲ ಯತ್ನದಲ್ಲೇ ಅತ್ಯುತ್ತಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಎದೆಯೊಳಗಿನ ಭಾವತೀವ್ರತೆ ಎದ್ದು ಕಾಣುತ್ತದೆ. ಇನ್ನೊಂದಿಷ್ಟು ಆಳವಾದ ಓದು, ಅಧ್ಯಯನದಿಂದ ಸತ್ವಯುತ ಕಾವ್ಯ ಕೊಡಬಲ್ಲರೆನ್ನುವ ನಂಬಿಕೆ ನನಗಿದೆ. ವಯಸ್ಸಾದಂತೆ; ಮನಸ್ಸು ಮಾಗಿದಂತೆ ಕವಿತೆಗಳು ಕೂಡ ಉತ್ಪಷ್ಟವಾಗುತ್ತವೆ. ಹಾಗಾಗಿ ಉತ್ಕಟ ಭಾವಾಭಿವ್ಯಕ್ತಿಯೊಂದಿಗೆ ಕವಿಯಾಗಿ ಸೃಜನಾತ್ಮಕ ಕೈಂಕರ್ಯದಲ್ಲಿ ತೊಡಗಿಕೊಂಡಿರುವ ಸನ್ನಿತನನ್ನು ಮನಃಪೂರ್ವಕವಾಗಿ ಹಾರೈಸುತ್ತೇನೆ.
ಕನ್ನಡ ನಾಡಿನ ಸಂತ-ಮಹಾಂತರ, ಬಸವಾದಿ ಶರಣರ, ಕವಿವರ್ಯರ ಕಾರುಣ್ಯದ ಪ್ರಭೆ ಅವರ ಮೇಲೆ ಅನುಗಾಲ ಇರಲಿ. ಓದುಗ ಬಂಧುಗಳು ಅವರನ್ನು ಎತ್ತಿ, ಆಡಿಸಿ ದೊಡ್ಡವರನ್ನಾಗಿ ಮಾಡಲಿ ಎನ್ನುವ ಪ್ರಾರ್ಥಣೆಯೊಂದಿಗೆ.
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.