SKU: 18123

ದಿವ್ಯಯೋಗಿನಿ

150.00

Book Details
Author : ಪೂರ್ಣಿಮಾ ರಾಜೇಶ್
Publisher : ಪುಷ್ಕರ ಪ್ರಿಂಟರ್ಸ್ ಅಂಡ್ ಪಬ್ಲಿಷರ್ಸ್ ಬೆಂಗಳೂರು

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 999

share This book

Book Description

ಕವಿಯವನು ಶಬ್ದಗಳ ಸರಮಾಲೆ ಹೆಣೆದು ಕವಿಯುವನು ಓದುಗರ ಮನದಾಳಕೆ ಇಳಿದು ನವಚೇತನ ಬರುವಂಥ ಪದಕಾವ್ಯದ ಜಾದು!! ನವಿರಾದ ಭಾವಗಳ ಸುಧೆಯನ್ನು ಸುರಿದು ಅಂವ ನಿಜಕವಿ ಲೇಖನಿಯಲೆ ಜಗದಕೊಳೆ ತೊಳೆದು ಭುವಿ ಇರೋತನ ಉಳಿವ ರವಿಯಂತೆ ಹೊಳೆದು.

ಅವರ ಎರಡನೇ ನಿಜ… ಕವಿಯತ್ರಿ, ಹವ್ಯಾಸಿ ಬರಹಗಾತಿ, ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಹೆಮ್ಮೆಯ ಕನ್ನಡತಿ, ಸದೃಹಿಣಿ, ಪಾಕಪ್ರವೀಣೆ, ಸಾಹಿತ್ಯ ಕ್ಷೇತ್ರದಲ್ಲಿ ಬಹು ಮಟ್ಟಿಗೆ ಗುರುತಿಸಿಕೊಂಡ ಬೆಂಗಳೂರಿನವರೇ ಆದ ನನ್ನ ಗೆಳತಿ ಶ್ರೀಮತಿ ಪೂರ್ಣಿಮಾ ರಾಜೇಶ್ ಕೃತಿಯಾದ “ದಿವ್ಯಯೋಗಿನಿ”ಯು ವಿಶ್ವದ ಮೊದಲ ಕವಯತ್ರಿಯೆನಿಸಿಕೊಂಡ ಮಹಾನ್ ತಪಸ್ವಿ ಶಿವಶರಣೆ ಅಕ್ಕ ಮಹಾದೇವಿಯ ಹೆಸರನ್ನು ಹೊಂದಿರುವುದೇ ಒಂದು ವಿಶೇಷ. ಈ ಕವನ ಸಂಕಲನವು ವಿಘ್ನ ನಿವಾರಕ ವಿನಾಯಕನ ಭಕ್ತಿ ಗೀತೆಯಿಂದ ಆರಂಭಗೊಂಡು,ಶಿವ, ಕೃಷ್ಣ, ರಾಮ-ಹನುಮ, ಸಾಧು ಸತ್ಪುರುಷರ, ಶಿವರಣೆ ಅಕ್ಕ, ಅಣ್ಣ ಬಸವಣ್ಣ, ವಿಶ್ವದ ಶ್ರೇಷ್ಠ ನಾಯಕರ, ಮಹಾನ್ ಸಾಧಕರ, ನಾಡು ನುಡಿ, ಪ್ರಕೃತಿ ಸೌಂದರ್ಯ, ಜ್ಞಾನಪೀಠ ಪುರಸ್ಕೃತರ, ವೈದ್ಯ, ದಾದಿಯರ, ಹಬ್ಬ ಹರಿದಿನ, ಸಂಸ್ಕೃತಿ ಸಂಪ್ರದಾಯಗಳ ಕುರಿತಾಗಿ ವೈವಿಧ್ಯಪೂರ್ಣ ವಿಷಯಗಳನ್ನೊಳಗೊಂಡ, ಓದುಗರಿಗೆ ಕಷ್ಟವೆನಿಸುವ ಕ್ಲಿಷ್ಟಕರ ಪದಬಳಕೆಯ ಮಾಡದೆ, ಸರಳವಾದ ಸಾಮಾನ್ಯ ಜನರಿಗೂ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಸೊಗಸಾದ ರಚನೆಯ ಮೂಲಕ ಎಲ್ಲರಿಗೂ ತಲುಪುವ ನಿಟ್ಟಿನಲ್ಲಿ ಅಚ್ಚುಕಟ್ಟಾಗಿ ಬರೆದಿರುವ ಈ ಕೃತಿಯನ್ನು ಕವಿಯತ್ರಿ ತಮ್ಮ ಮಾತೃ ಸ್ವರೂಪಿಯಾದ ಅಕ್ಕ ಪಾರ್ವತಮ್ಮ ಅವರಿಗೆ ಅರ್ಪಿಸಿದ್ದಾರೆ.ಇದನ್ನು ಓದುತ್ತಾ ಹೋದಂತೆ ಇದೊಂದು ಪುಟ್ಟ ವಿಶ್ವ ಕೋಶದಂತೆ ಗೋಚರಿಸುತ್ತದೆ.ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೂ ಉಪಯುಕ್ತ ಎಂಬುದರಲ್ಲಿ ಎರಡು ಮಾತಿಲ್ಲ.ಇವರಿಂದ ಇನ್ನಷ್ಟು ಕೃತಿಗಳು ಹೊರಬರಲಿ ಎಂದು ಹಾರೈಸುತ್ತೇನೆ.
ಕಮಲಾಕ್ಷಿ ಸುರೇಶ್ ಕೌಜಲಗಿ

ಕವಿಯತ್ರಿ,ಶುಶೂಷಾ ಅಧಿಕಾರಿ

ಕೆ ಸಿ ಜನರಲ್ ಆಸ್ಪತ್ರೆ

ಬೆಂಗಳೂರು.

Rating This Book

Reviews

There are no reviews yet.

Be the first to review “ದಿವ್ಯಯೋಗಿನಿ”

Your email address will not be published. Required fields are marked *

Top Books