SKU: 17384

ದಶರೂಪಕಗಳ ದಶಾವತಾರ

320.00

Author : ಅಶೋಕ ಹಾಸ್ಯಗಾರ

Publishers Name : ಯಾಜಿ ಪ್ರಕಾಶನ

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ಯಕ್ಷಗಾನದ ಶಾಸ್ತ್ರೀಯತೆಯನ್ನು ಸ್ಥಾಪಿಸಲು ಹಾಸ್ಯಗಾರರು ಸಂಯೋಜಿಸಿದ ವಿಚಾರ. “ಜಾನಪದ” ಎಂದು ಹತ್ತರೊಡನೆ ಹನ್ನೊಂದನೆಯ ಕಲೆಯಾಗಿ ಯಕ್ಷಗಾನವನ್ನು ಕಾಣುವ ಸರಕಾರದ ಹಾಗೂ ಅನೇಕ ಸಾರ್ವಜನಿಕರ ಧೋರಣೆಯನ್ನು ಖಂಡಿಸುವ ಒಂದು ಯತ್ನವಾಗಿ ಈ ಕೃತಿ ಒಡಮೂಡಿ ದಂತಿದೆ. ಆದ್ದರಿಂದಲೇ ಈ ಕೃತಿ ‘ಯಕ್ಷಗಾನ ದಶರೂಪಕ’ ಅಥವಾ ‘ದಶರೂಪಕಗಳ ದಶಾವತಾರ’ ಎನಿಸಿದೆ. ಯಕ್ಷಗಾನ ಹಾಗೂ ನಾಟ್ಯಶಾಸ್ತ್ರ ವನ್ನು ತುಲನಾತ್ಮಕವಾಗಿ ನೋಡಲು ಇದೊಂದು ಪ್ರಾಥಮಿಕ ಪಠ್ಯ ಎಂಬ ಬಿನ್ನಹವೊಂದನ್ನು ಹಾಸ್ಯಗಾರರು ನೀಡಿರುವಲ್ಲಿ ಅವರ ವಾಚೋವಿಧೇಯತೆ ಕೂಡಾ ಅಭಿನಂದನೆಗೆ ಅರ್ಹವಾದುದು.

-ಡಾ. ಜಿ.ಎಲ್.ಹೆಗಡೆ, ಕುಮಟಾ, ನಿಕಟಪೂರ್ವ ಅಧ್ಯಕ್ಷರು,

ಕರ್ನಾಟಕ ಯಕ್ಷಗಾನ ಮಂಡಳಿ, ಬೆಂಗಳೂರು

ಇದೊಂದು ಸಂಶೋಧಕ ಮಹಾಪ್ರಬಂಧ. ಅಳತೆಯಿಂದ ‘ಮಹಾ’ ಎಂದು ಆಗದಿದ್ದರೂ ಅಳವಿಯಿಂದ, ಒಳಗಿನ ಹೂರಣದಿಂದ. ಮಹಾಪ್ರಬಂಧವಾಗುವ ಅರ್ಹತೆಯನ್ನು ಹೊಂದಿದೆ. ಇಡೀ ಕೃತಿಯೊಳಗೆ ಶೋಧನೆಯ ಸೂಕ್ಷ್ಮ ದೃಷ್ಟಿ ಪಸರಿಸಿದೆ. ಒಟ್ಟೂ ಒಂಬತ್ತು ಅಧ್ಯಾಯಗಳಿದ್ದು, ಪ್ರತಿಯೊಂದು ಅಧ್ಯಾಯದಲ್ಲಿಯೂ ಒಂದು ಹೊಸ ನೋಟ, ಹೊಸ ಪ್ರಮೇಯ, ನವೀನ ವ್ಯುತ್ಪತ್ತಿ, ನವಾನು ಸಂಧಾನ ಇಲ್ಲದಿಲ್ಲ. ಸಂಶೋಧನೆಯ ಹೊಸ ಸಂಗತಿಗಳನ್ನೂ, ಹೊಸ ಕ್ಷೇತ್ರಗಳನ್ನೂ ತೆರೆದು ಕಾಣಿಸುವ ತ್ವರೆ ಮತ್ತೂ ಕಾಳಜಿ ಗ್ರಂಥದ ಉದ್ದಗಲದಲ್ಲಿ ಹಾಸು ಹೊಕ್ಕಾಗಿವೆ. ಧನಂಜಯನ ದಶರೂಪಕ. ಭರತನ ನಾಟ್ಯಶಾಸ್ತ್ರ ಮತ್ತು ಯಕ್ಷಗಾನ ದಶಾವತಾರ ಆಟಗಳ ಬಗ್ಗೆ ಏಕಕಾಲದಲ್ಲಿ ‘ಕೈಗೊಂಡ ಸಂಶೋಧನ ಯಾನ ಈ ಗ್ರಂಥ.

-ವಿದ್ಯಾವಾಚಸ್ಪತಿ, ವಿದ್ವಾನ್ ಉಮಾಕಾಂತ ಭಟ್ಟ ಕೆರೆಕೈ, ಶಿರಸಿ

Rating This Book

Reviews

There are no reviews yet.

Be the first to review “ದಶರೂಪಕಗಳ ದಶಾವತಾರ”

Your email address will not be published. Required fields are marked *