SKU: 13319

ದಂಡಿ

150.00

ಸಮುದ್ರದೆಡೆಗೆ ಹೆಜ್ಜೆಗಳು

Author : ರಾಗಂ ಅವರ

Publishers Name : ಯಾಜಿ ಪ್ರಕಾಶನ

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ಈ ನನ್ನ ‘ದಂಡಿ’ ತುಂಡು ನೆಲದ ಕಥನವಲ್ಲ, ಜಗವೆಂಬ ಕಡಲ ಕುದಿ. ದಂಡಿ ಸತ್ತವರ ಚರಿತ್ರೆಯಲ್ಲ, ವರ್ತಮಾನವಲ್ಲ, ಮುಂದೊಮ್ಮೆ ಇದು ಭವಿಷ್ಯವಾಗುವುದಾದರೆ, ಅದು ಗುಣದ ಶಕ್ತಿ. ಒಂದರ್ಥದಲ್ಲಿ ಇದು ನಾವು ನಿತ್ಯ ತಿಂದು ಮರೆಯುವ ಉಪ್ಪಿನ ಆತ್ಮಚರಿತ್ರೆ ಆದರೆ, ಉಪ್ಪೆಂದರೆ? ಗುಣ ಮತ್ತು ಋಣದ ಹಾಡು. ಈ ಅರ್ಥದಲ್ಲಿ ‘ದಂಡಿ’ ಇಡಿಯಾದ ಜಗತ್ತಿನಲ್ಲಿ ಚಾಚಿಕೊಂಡ ಮನುಷ್ಯನೆಂಬೊ

ಮನುಷ್ಯ ಧರ್ಮದ ಅನಾವರಣವಷ್ಟೆ ಗಾಂಧಿಯಾಗುವ ಈ ಮನುಷ್ಯ ಋಣದ ಕಾರಣ ಖಂಡಾಂತರ ಸುತ್ತುತ್ತಾನೆ. ಲೋಕದ ಜೀವಧರ್ಮದಲ್ಲಿ ಬೆರೆತು ಕಡಲುಕ್ಕಿದಲ್ಲೆಲ್ಲ ದಂಡಿ ದಂಡಿಯಾಗಿ ಧರ್ಮವೆಂದರೇನು? ಋಣವೆಂದರೇನು? ಮನುಷ್ಯ ಗುಣವೆಂದರೇನು?ಎಂದು ಪ್ರಶ್ನೆ-ಪ್ರಜ್ಞೆಗಳ ಸಾಲು ಮರಗಳ ನೆಟ್ಟು, ನಮ್ಮ ಸಾವನ್ನೂ ಪ್ರಶ್ನೆಯಾಗಿಸುತ್ತಾನೆ. ಉತ್ತರ ಸಿಗದೆ ಸೋತು, ಶರಣಾಗತರಾಗುವ ನಮ್ಮ ಕೈಯಲ್ಲಿ ಚಿಟಿಕೆ ಉಪ್ಪನ್ನಿಟ್ಟು, ಮನುಷ್ಯನೆಂದರೆ ಇಷ್ಟೆ, ಧರ್ಮವೆಂದರೂ ಇಷ್ಟೆ, ನಾವು ಕಟ್ಟಿಕೊಂಡ ದೇಶವೆಂಬ ಕಲ್ಪನೆಯೂ ಇಷ್ಟೆ. ಚಿಟಿಕೆ ಉಪ್ಪಿನಷ್ಟು, ಉಪ್ಪು ಕಡಲ ಗುಣ. ಅದನ್ನು ನಿತ್ಯ ಅನುಭವಿಸಿ ಬೆಳೆದ ಪ್ರತಿಯೊಬ್ಬನೂ ಬದುಕಬೇಕಾದುದು, ಕಡಲು ಸಾರುವ ಈ ಗುಣ ಮತ್ತು ಋಣವೆಂಬ ಧರ್ಮ. ಗುಜರಾತಿನ ದಂಡಿಯಲ್ಲಿ ಹಿಡಿ ಉಪ್ಪು ಹಿಡಿದ ಮನುಷ್ಯನೊಬ್ಬ, ಜಗತ್ತಿನ ಬಲಾಡ್ಯ ಸಾಮ್ರಾಜ್ಯ ಒಂದರ ಬುಡಕ್ಕೆ ಕೈ ಹಾಕಿದ್ದ. ಅನುಕರಣೀಯವಾದ ಆತನ ಈ ಹೆಜ್ಜೆ ಕರ್ನಾಟಕದ ಕರಾವಳಿ ತೀರದಲ್ಲಿ ಸತತ ನಾಲ್ಕುವರೆ ದಶಕಗಳವರೆಗೆ ಪುನರಾವರ್ತನಗೊಳ್ಳುತ್ತಲೇ ಹೋಯಿತು. ಇದು ಎಲ್ಲೋ ಒಂದೆಡೆ ಶುರುವಾಗಿ, ಮತ್ತಿನ್ನೆಲ್ಲೋ ಮುಗಿದು ಹೋಗಿದ್ದರೆ ಈ ಬರಹದ ಜರೂರತ್ತೇ ಇರಲಿಲ್ಲ. ನಿಂತವರ ಕುರಿತು ಬರೆಯಲಾಗುವುದಿಲ್ಲ. ನಡೆಯುವವರ ಕುರಿತು ಬರೆಯಲಿರದೇ ಆಗುವುದಿಲ್ಲ. ಉಪ್ಪು ತಿಂದವರೆಲ್ಲ ಉರುಳುತ್ತಲೇ ಇರುತ್ತಾರೆ. ಹೀಗಾಗಿ ಈ ದಂಡಿ ನಿಮ್ಮ ಕೈಯಲ್ಲಿ ಅಷ್ಟೆ.

-ರಾಗಂ

Rating This Book

Reviews

There are no reviews yet.

Be the first to review “ದಂಡಿ”

Your email address will not be published. Required fields are marked *